ಪ್ರವೇಶಕ್ಕೆ ಮುನ್ನ 23 ಕಾಲೇಜುಗಳ ಬಗ್ಗೆ ಗಮನಿಸಿ

ಬೆಂಗಳೂರಿನ ಸುಮಾರು 23 ಕಾಲೇಜುಗಳನ್ನು AICTE ಕಪ್ಪು ಪಟ್ಟಿಗೆ ಸೇರಿಸಿದೆ. AICTE ಮಾನ್ಯತೆ ಪಡೆಯದೆ ತಾಂತ್ರಿಕ ವಿಷಯಗಳನ್ನು ಬೋಧನೆ ಮಾಡುತ್ತಿರುವ ಆರೋಪವನ್ನು ಈ ಕಾಲೇಜುಗಳ ಮೇಲೆ ಹೇರಲಾಗಿದೆ. ಈ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದ್ದು 125 ವಿದ್ಯಾಸಂಸ್ಥೆಗಳು ಭೀತಿಯಲ್ಲಿದೆ. ದೆಹಲಿಯಲ್ಲಿ 64 ಹಾಗೂ ಆಂಧ್ರಪ್ರದೇಶದಲ್ಲಿ 43 ವಿದ್ಯಾಸಂಸ್ಥೆಗಳು ಮಾನ್ಯತೆ ರದ್ದಾಗುವ ಭೀತಿ ಎದುರಿಸುತ್ತಿದೆ.
ದೇಶದ ಶೈಕ್ಷಣಿಕ ವಲಯದಲ್ಲಿ ಉತ್ತಮ ರೀತಿಯಲ್ಲಿ ಬೆಳೆಯುತ್ತಿರುವ ಬೆಂಗಳೂರು ಈಗ ಮಾನ್ಯತೆ ರಹಿತ ಕಾಲೇಜುಗಳ ಪಟ್ಟಿಯಲ್ಲೂ ಮೇಲಕ್ಕೇರುತ್ತಿದೆ. AICTE ನಿಯಮಗಳನ್ನು ಮೀರಿ ಯಾವುದೇ ವಿದ್ಯಾಸಂಸ್ಥೆ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಿಲ್ಲ. ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ, ಪಠ್ಯವಿಷಯ ಬೋಧನೆ ಬಗ್ಗೆ ಹಾಕಿರುವ ನಿಯಮಗಳನ್ನು ಸಡಿಲಿಸಲು ಸಾಧ್ಯವಿಲ್ಲ ಎಂದು ಆಡಳಿತಾಧಿಕಾರಿ ಹರಿಕೃಷ್ಣ ಅವರು ಹೇಳಿದ್ದಾರೆ.
ಉದಾ: ಈಗ ಒಂದು ಕಾಲೇಜಿಗೆ 120 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವ ಅವಕಾಶ ಒದಗಿಸಿದ್ದರೆ ಅಲ್ಲಿ 120 ಡೆಸ್ಕ್ ಟಾಪ್ ಕಂಪ್ಯೂಟರ್ ಗಳು ಹಾಗೂ ಅದಕ್ಕೆ ತಕ್ಕ ಉಪಕರಣಗಳು, ಸಾಧನಗಳು ಇರಲೇಬೇಕು ಎಂದು AICTE ನಿಯಮ ಹೇಳುತ್ತದೆ.
ಇದಲ್ಲದೆ ಮಾನ್ಯತೆ ಪಡೆಯದೆ ಕೆಲವು ಕೋರ್ಸ್ ಗಳನ್ನು ನಡೆಸಲಾಗುತ್ತಿದೆ. ಬೋಧಕ ವರ್ಗದ ಅನುಭವದ ಬಗ್ಗೆಯೂ ಅನುಮಾನವಿದೆ. ತಾತ್ಕಾಲಿಕ ಲ್ಯಾಬ್ ಗಳಲ್ಲಿ ಪಾಠ ಮಾಡುವುದು ಮುಂತಾದ ಸಮಸ್ಯೆಗಳನ್ನು ಹೊತ್ತುಕೊಂಡಿರುವ ವಿದ್ಯಾಸಂಸ್ಥೆಗಳಿಗೆ AICTE ನಡುಕ ಹುಟ್ಟಿಸಿದೆ.
AICTE ಕಪ್ಪು ಪಟ್ಟಿ ಸೇರಿರುವ ಬೆಂಗಳೂರಿನ ಕಾಲೇಜುಗಳ ಪಟ್ಟಿ ಹೀಗಿದೆ:
* ಅಕಾಡೆಮಿ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್, ಟೂರಿಸಂ & ರಿಸರ್ಜ್, ಹೊಸೂರು ರಸ್ತೆ
* ಏಜಿಎಸ್ ಸ್ಕೂಲ್ ಆಫ್ ಬಿಸಿನೆಸ್ & ಟೆಲಿಕಮ್ಯೂನಿಕೇಷನ್, ದೊಮ್ಮಲೂರು ಲೇಔಟ್
* ಬೆಂಗಳೂರು ಇನ್ಸ್ ಸ್ಟಿಟ್ಯೂಟ್ ಆಫ್ ಏರೋನ್ಯಾಟಿಕಲ್ ಇಂಜಿನಿಯರಿಂಗ್ & ಇನ್ಫೋ ಟೆಕ್ನಾಲಜಿ, ನಾಗರಬಾವಿ
* ಬೆಂಗಳೂರು ಮ್ಯಾನೇಜ್ಮೆಂಟ್ ಅಕಾಡೆಮಿ, ಮಾರತ್ತಹಳ್ಳಿ
* ಬೆಂಗಳೂರು ಮ್ಯಾನೇಜ್ಮೆಂಟ್ ಅಕಾಡೆಮಿ, ಮಾರತ್ತಹಳ್ಳಿ
* ESQUIRE ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್, ತಿರುಮನಹಳ್ಳಿ
* ಫೋಕಸ್ ಸ್ಕೂಲ್ ಆಫ್ ಬಿಸಿನೆಸ್ & ಫೈನಾನ್ಸ್, ಸಂಪಿಗೆ ರಸ್ತೆ, ಮಲ್ಲೇಶ್ವರಂ
* ಇಂಡಿಯಾ ಬಿಸಿನೆಸ್ ಅಕಾಡೆಮಿ, ಕನಕಪುರ ಮುಖ್ಯರಸ್ತೆ
* ಐಐಎಎಂಇ, ಪದ್ಮನಾಭನಗರ
* ಇನ್ಸ್ ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ & ರಿಸರ್ಜ್, ಹೊಸೂರು ರಸ್ತೆ
* ಇನ್ಸ್ ಸ್ಟಿಟ್ಯೂಟ್ ಆಫ್ ಫೈನಾನ್ಸ್ ಹಾಗೂ ಇಂಟರ್ ನ್ಯಾಷನಲ್ ಮ್ಯಾನೇಜ್ಮೆಂಟ್, ಬನಶಂಕರಿ II ಹಂತ
* ಇನ್ಸ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿ, ಬನಶಂಕರಿ ಮೂರನೇ ಹಂತ
* ಇಂಟರ್ ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಬಿಸಿನೆಟ್ ಮ್ಯಾನೇಜ್ಮೆಂಟ್, ಆರ್ ಟಿನಗರ ರಸ್ತೆ
* ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಬಿಸಿನೆಸ್ & ಮೀಡಿಯಾ, ಎಚ್ ಎಎಲ್ ರಸ್ತೆ ಬಳಿ, ಮಾರತ್ ಹಳ್ಳಿ
* ಎಂಎಸ್ ರಾಮಯ್ಯ ಸ್ಕೂಲ್ ಆಫ್ ಅಡ್ವಾನ್ಸ್ ಸ್ಟಡೀಸ್, ನ್ಯೂ ಬಿಇಎಲ್ ರಸ್ತೆ
* MATS ಸ್ಕೂಲ್ ಆಫ್ ಬಿಸಿನೆಸ್ MATS ಟವರ್, ಜೆಪಿ ನಗರ
* NIAM ಸೆಂಟರ್ ಫಾರ್ ಅನಾಲಿಟಿಕ್ಸ್ & ರಿಸರ್ಜ್ ಎಕ್ಸಲೆನ್ಸ್, ಜಯನಗರ
* ಪ್ರೆಸಿಡೆನ್ಸಿ ಕಾಲೇಜ್ ಆಫ್ ಮ್ಯಾನೇಜ್ಮೆಂಟ್, ಡೈಮಂಡ್ ಡಿಸ್ಟ್ರೀಕ್
* ಸೃಷ್ಟಿ ಇನ್ಫೋ ಸಿಸ್ಟಮ್, ವಿಜಯನಗರ
* TASMAC ಮ್ಯಾನೇಜ್ಮೆಂಟ್ & ಎಜುಕೇಷನ್, ಬಸವನಗುಡಿ
* ICFAI, ಇನ್ಫ್ಯಾಂಟ್ರಿ ರಸ್ತೆ
* TASMAC ಲಿಮಿಟೆಡ್, ಬಸವನಗುಡಿ
* ಐಐಬಿಎಸ್, ನಾಗವಾರ
* ಐಐಬಿಎಸ್, ಕೆಎಚ್ ಬಿ ಮುಖ್ಯರಸ್ತೆ












Click it and Unblock the Notifications