ಮಂಗಳೂರು: ಮತ್ತೊಬ್ಬ ಯುವತಿಯ ನಿಗೂಢ ಕಣ್ಮರೆ

21 ವರ್ಷದ ನಿರಾಲಿ ವಾಚಾನಿ ನಾಪತ್ತೆಯಾಗಿರುವ ಯುವತಿ. ಈಕೆ ಪ್ರದೀಪ್ ಮೋಹನ್ ವಾಚಾನಿ ಎಂಬುವವರ ಮಗಳು. ಎಂಬಿಎ ಓದುತ್ತಿದ್ದ ನಿರಾಲಿ ವಾಚಾನಿ ಕಾರಿನಲ್ಲಿ ಕಾಲೇಜಿಗೆಂದು ಬೆಳಗ್ಗೆಯೇ ಹೊರಟಿದ್ದಳು. ಆದರೆ ಅಲ್ಲಿಂದ ಆಕೆ ಮರಳಿ ಬಂದಿಲ್ಲ. ತಣ್ಣೀರುಬಾವಿ ಬಂದರಿನ ಬಳಿ ಆಕೆಯ ಕಾರು ಪತ್ತೆಯಾಗಿದೆ. ಆದರೆ ನಿರಾಲಿ ವಾಚಾನಿ ಏನಾದಳು ಎಂಬುದು ಇದುವರೆಗೂ ತಿಳಿದುಬಂದಿಲ್ಲ.
ಸೆ. 28ರಂದು ನಿರಾಲಿ ತಂದೆ ಪ್ರದೀಪ್ ಮೋಹನ್ ಅವರಿಗೆ ಫೋನ್ ಮಾಡಿ, ತಮ್ಮ ಕಾರು (KA 19 N 4343) ಪತ್ತೆಯಾಗಿದೆ ಎಂದು ತಿಳಿಸಿದ್ದರು.
ಪೋಷಕರು, ಪೊಲೀಸರು ಎಲ್ಲೆಡೆ ಜಾಲಾಡಿದ್ದರೂ ನಿರಾಲಿ ವಾಚಾನಿ ಪತ್ತೆಯಾಗಿಲ್ಲ. 5.4 ಅಡಿ ಎತ್ತರದ ನಿರಾಲಿ ವಾಚಾನಿ (ಚಿತ್ರದಲ್ಲಿರುವವರು) ಗುಜರಾತಿ, ಹಿಂದಿ, ಕನ್ನಡ ಮತ್ತು ಇಂಗ್ಲೀಷನ್ನು ನಿರರ್ಗಳವಾಗಿ ಮಾತನಾಡುತ್ತಾರೆ.












Click it and Unblock the Notifications