ಸುಪ್ರೀಂಕೋರ್ಟ್ CJ ಅಲ್ತಮಸ್ ಕಬೀರ್ ಪ್ರಮಾಣ

ನ್ಯಾಯಮೂರ್ತಿ ಎಸ್ಎಚ್ ಕಪಾಡಿಯಾ ಅವರು ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ನ್ಯಾ. ಅಲ್ತಮಸ್ ಕಬೀರ್ ಅವರು ನೇಮಕಗೊಂಡಿದ್ದರು. ನ್ಯಾಯಮೂರ್ತಿ ಎಸ್ಎಚ್ ಕಪಾಡಿಯಾ ಅವರು ಸುಮಾರು ಎರಡೂವರೆ ವರ್ಷಗಳ ಕಾಲ CJI ಆಗಿ ಸೇವೆ ಸಲ್ಲಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ 64 ವರ್ಷದ ನ್ಯಾ. ಅಲ್ತಮಸ್ ಕಬೀರ್ ಅವರು ಪ್ರಮಾಣ ವಚನ ಸ್ವೀಕರಿಸಿದರು. 2013ರ ಜುಲೈ 18ರವರೆಗೆ 9 ತಿಂಗಳ ಕಾಲ ಅವರು CJI ಆಗಿ ಸೇವೆ ಸಲ್ಲಿಸಲಿದ್ದಾರೆ. 2005ರ ಸೆಪ್ಟೆಂಬರಿನಲ್ಲಿ ಅವರು ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.
1948ರ ಜುಲೈ 19ರಂದು ಕಲ್ಕತ್ತಾದಲ್ಲಿ ಜನಿಸಿದ ಜಸ್ಟೀಸ್ ಅಲ್ತಮಸ್ ಅವರು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಕಾನೂನು ಮತ್ತು ಎಂಎ ಪದವಿ ಪಡೆದರು. ಜಸ್ಟೀಸ್ ಅಲ್ತಮಸ್ ಅವರ ಪತ್ನಿ ಮಂಗಳೂರು ಮೂಲದವರು.
ಕರ್ನಾಟಕದ ಸ್ಪೀಕರ್ ಕೆಜಿ ಬೋಪಯ್ಯ ಅವರು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ್ದ ತೀರ್ಪನ್ನು ವಜಾ ಮಾಡಿದ ಸುಪ್ರೀಂ ನ್ಯಾಯಪೀಠದಲ್ಲಿ ಜಸ್ಟೀಸ್ ಅಲ್ತಮಸ್ ಅವರೂ ಇದ್ದರು ಎಂಬುದು ಗಮನಾರ್ಹ.












Click it and Unblock the Notifications