20 ಪ್ರೇಮಿಗಳ ಸಂತೋಷಕ್ಕೆ ಮಾಂಗಲ್ಯ ಎಗರಿಸುತ್ತಿದ್ದಳು

ರೇಶ್ಮಾ ಷೇಕ್ @ ಯಾಸ್ಮೀನ್ ಬಂಧಿತಳು. ಅಂದಹಾಗೆ ಈ ಯುವತಿ ಬಾರ್ ಗರ್ಲ್ ಆಗಿ ವೃತ್ತಿಯಲ್ಲಿದ್ದಳು. ಇನ್ನು ಇವಳ ಸಂಗ ಮಾಡಿದ ಆ ಇಪ್ಪತ್ತೂ ಯುವಕರು 17-20 ವರ್ಷದವರು.
ಮುಂಬೈ ಸಬ್ ಅರ್ಬನ್ ರೈಲುಗಳ ಗಡಿಬಿಡಿ ಗೊತ್ತಲ್ಲಾ? ಅಂತಹ ಸುಸಂದರ್ಭಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದ ಯಾಸ್ಮೀನ್ ಕಣ್ ಮಿಟುಕಿಸಿ ಮಾಂಗಲ್ಯ ಎಗರಿಸುತ್ತಿದ್ದಳು. ಸುಮಾರು 50 ಸರಗಳನ್ನು ಹೀಗೆ ಎಗರಿಸಿದ್ದಾಳೆ. ತುಂಬಾನೇ ಚಾಲಾಕಿಯಾಗಿರುವ ಯಾಸ್ಮೀನ್ ಯಾವ ಆಭರಣ ಮಳಿಗೆಗಳಲ್ಲಿ ಇದನ್ನೆಲ್ಲ ಮಾರಿದ್ದಳು ಎಂಬುದನ್ನು ಪತ್ತೆಹಚ್ಚುವುದು ಪೊಲೀಸರಿಗೆ ಈ ದೊಡ್ಡ ತಲೆನೋವಾಗಿದೆ.
ಯಾಸ್ಮೀನ್ ತನ್ನ ಬಾಯ್ ಫ್ರೆಂಡ್ ಗಳ ಮೇಲೆ ತನ್ನ ಚರಿಷ್ಮಾ ಬೀರಲು ಅವರನ್ನು ಪಂಚತಾರಾ ಹೋಟೆಲುಗಳಿಗೆ ಕರೆದೊಯ್ಯುತ್ತಿದ್ದಳು. ಕದ್ದ ಸರ ಮಾರಿ ಬಂದ ದುಡ್ಡಿನಿಂದ ಒಬ್ಬೊಬ್ಬರಾಗಿ ಅವರಿಗೆಲ್ಲ ಟ್ರೀಟ್ ಕೊಡಿಸುತ್ತಿದ್ದಳು.
ಗಮನಿಸಿ: ಯಾಸ್ಮೀನ್ ಟಾರ್ಗೆಟ್ ಮಾಡುತ್ತಾ ಇದ್ದಿದ್ದು ಮೈಮೇಲೆ ಧಾರಾಕಾರವಾಗಿ ಬಂಗಾರದ ಒಡವೆ ಧರಿಸಿಕೊಂಡವರನ್ನೇ. ಒಂದೇ ಎರಡೋ ಎಳೆಯ ಸಾದಾ ಚೈನು ಹಾಕಿಕೊಂಡವರತ್ತ ಪಾಪ ಇವಳು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಯಾರು ಜಗಮಗಿಸುವ ಹಾಗೆ ಒಡವೆಗಳನ್ನು ಹಾಕಿಕೊಂಡು ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಾರೋ ಅದರ ಮೇಲೆ ಇವಳ ಮಾರಿಕಣ್ಣು.












Click it and Unblock the Notifications