ಚಿಂತಾಮಣಿ: ನಿನ್ನೆ ಸೂರ್ಯನ್ನ ದಿಟ್ಟಿಸಿದವರಿಗೆ ಕಂಡಿದ್ದೇನು?

ಚಿಂತಾಮಣಿ, ಸೆ. 24: ಚಿಕ್ಕಬಳ್ಳಾಪುರ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ನಿನ್ನೆ ಮಟಮಟ ಮಧ್ಯಾಹ್ನ ಆಕಾಶದಲ್ಲಿ ಸುಮಾರು ಅರ್ಧ ಗಂಟೆ ಕಾಲ ಕೌತುಕ, ವಿಸ್ಮಯ ಲೀಲೆ ಕಂಡುಬಂದಿದೆ. 'ದೇಶದ ಇತರೆ ಭಾಗಗಳಲ್ಲೂ ಇಂತಹ ವಿಸ್ಮಯ ದೃಶ್ಯಗಳು ಕಂಡುಬಂದಿವೆ. ಆದರೆ ಇಲ್ಲಿನದು ವಿಶೇಷವಾಗಿತ್ತು' ಎಂದು 'ಒನ್ ಇಂಡಿಯಾ ಕನ್ನಡ' ಓದುಗರಾದ ಎನ್ ಕೃಷ್ಣ ಅವರು 10 ಆಕರ್ಷಕ ಚಿತ್ರಗಳ ಸಮೇತ ಮಾಹಿತಿ ನೀಡಿದ್ದಾರೆ.

ಹೌದು ಕೃಷ್ಣ ಅವರು ಹೇಳಿದಂತೆ ಇದು ಎಲ್ಲೆಲ್ಲೂ ಘಟಿಸಿದೆ. ಅಷ್ಟೇ ಅಲ್ಲ ನಾಲ್ಕು ತಿಂಗಳ ಹಿಂದೆಯೂ ನಭೋಮಂಡಲದಲ್ಲಿ ಇಂತಹ ಸೋಜಿಗ ಗೋಚರಿಸಿತ್ತು. ಆಗ ಬೆಳಗಿನ ವೇಳೆ ಸೂರ್ಯನ ಸುತ್ತ ಈ ಚಿತ್ತಾಕರ್ಷಕ ಪ್ರಭಾವಳಿ ಕಂಡುಬಂದಿದ್ದರೆ, ರಾತ್ರಿ ವೇಳೆ ತಂಪಾದ ಹೊತ್ತಿನಲ್ಲಿ ಚಂದ್ರದ ಸುತ್ತ ಆಹ್ಲಾದಕರ, ಅಪರೂಪದ ಉಂಗುರ ಗೋಚರಿಸಿತ್ತು.

ಚಿಂತಾಮಣಿ ಸೇರಿದಂತೆ ರಾಜ್ಯಾದ್ಯಂತ ಮುಂಗಾರು ಮುಗಿದಿದ್ದು, ಭರ್ಜರಿ ಬೇಸಿಗೆಯಂತೆ ಕಾಲ ಮಾರ್ಪಟ್ಟಿದೆ. ಆದ್ದರಿಂದ ಸೂರ್ಯ ತುಸು ಹೆಚ್ಚೇ ಪ್ರಖರವಾಗಿ ಕಾಣಿಸಿಕೊಂಡಿದ್ದಾನೆ. ಆ ಸಂದರ್ಭದಲ್ಲಿ ಇಂತಹ ರಿಂಗಾರಿಂಗ ಪ್ರಭಾವಳಿ ಕಾಣಿಸಿಕೊಂಡು ಜನರಲ್ಲಿ ಕೌತುಕವನ್ನುಂಟುಮಾಡಿದೆ. ಈ ಬಗ್ಗೆ ಭಾರತೀಯ ಜೀವ ವಿಮಾ ನಿಗಮದ ಕೃಷ್ಣ ಅವರು ಚಿತ್ರ ಸಹಿತ ಮಾಹಿತಿ ಒದಗಿಸಿದ್ದಾರೆ. ಅವರಿಗೆ 'ದಟ್ಸ್ ಕನ್ನಡ' ಓದುಗರ ಪರವಾಗಿ ಧನ್ಯವಾದ.

ಆದರೆ ಆಶ್ಚರ್ಯದಿಂದ ಸೂರ್ಯನನ್ನೇ ದಿಟ್ಟಿಸುತ್ತಿದ್ದ ಕೃಷ್ಣ ಅವರಿಗೆ ಮಧ್ಯೆ ಆತಂಕದ ಕ್ಷಣಗಳೂ ಎದುರಾಗಿವೆ. ಹಾಗೇ ಸುಮ್ಮನೆ ಈ ರಿಂಗ್/ಪ್ರಭಾವಳಿ ನೋಡುತ್ತಿದ್ದಾಗ ಇದ್ದಕ್ಕಿದ್ದಂತೆ ಆಕೃತಿಯೊಂದು ಗೋಚರವಾಗಿದೆ.

ಏಲಿಯನ್ನಾ, ಯುಎಫ್ಓನಾ, ಸ್ಪೇಸ್ ಶಿಪ್ಪಾ?

ಏಲಿಯನ್ನಾ, ಯುಎಫ್ಓನಾ, ಸ್ಪೇಸ್ ಶಿಪ್ಪಾ?

ಇದೇನು ಏಲಿಯನ್ನಾ, ಯುಎಫ್ಓನಾ (unidentified flying object), ಸ್ಪೇಸ್ ಶಿಪ್ಪಾ? ಅಥವಾ ಮತ್ತೇನಾದರೂನಾ? ಎಂಬುದು ಅವರ ಕೌತುಕದ ಪ್ರಶ್ನೆ. ಕೆಲವರ ಪ್ರಕಾರ ಇದು Lunar halo, 22 degree halo ಅಥವಾ sun halo. ಆದರೆ ಹಾಗೆಂದರೇನು?

 ಸ್ಪೇಸ್ ಶಿಪ್ಪಾ? ಏನೀ ಲೀಲೆ?

ಸ್ಪೇಸ್ ಶಿಪ್ಪಾ? ಏನೀ ಲೀಲೆ?

ಖಗೋಳಶಾಸ್ತ್ರ ಪಂಡಿತರು ಇದರ ಬಗ್ಗೆ ಪಾಮರರಿಗೆ ಹೆಚ್ಚಿನ ಮಾಹಿತಿ ಒದಗಿಸಿದಲ್ಲಿ ಉಪಕಾರ ಮಾಡಿದಂತಾಗುತ್ತದೆ. ಹೆಚ್ಚಿನ ಮಾಹಿತಿ ಇದ್ದಲ್ಲಿ ದಯವಿಟ್ಟು ಕಳಿಸಿಕೊಡಿ.
ಜತೆಗೆ ಬೆರಗಿನಿಂದ, ಬರಿಗಣ್ಣಿನಿಂದ ಪ್ರಖರ ಸೂರ್ಯನನ್ನು ನೋಡುವಾಗ ತುಸು ಜಾಗ್ರತೆವಹಿಸುವುದು ನಿಮ್ಮ ಕಣ್ಣುಗಳಿಗೆ ಒಳ್ಳೆಯದು, ಎಚ್ಚರಾ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+