ವೇಶ್ಯಾವಾಟಿಕೆ: ಸಮವಸ್ತ್ರದಲ್ಲಿ ಲೈಂಗಿಕ ಕಾರ್ಯಕರ್ತೆಯರು

prostitution-mumbai-woman-workers-wear-uniforms
ಮುಂಬೈ, ಸೆ.24: ಜಗತ್ತಿನ ಅತ್ಯಂತ ಪುರಾತನ ಉದ್ಯೋಗ ಯಾವುದೆಂದರೆ ಅದು ವೇಶ್ಯಾವಾಟಿಕೆಯೇ. ಇಂತಿಪ್ಪ ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಮಹಿಳೆಯರು ಯಾನಿ ಲೈಂಗಿಕ ಕಾರ್ಯಕರ್ತೆಯರು ಈಗ ಹೊಸ ವೇಷ-ಭೂಷಣದೊಂದಿಗೆ ಗ್ರಾಹಕರನ್ನು ಸೆಳೆಯಲು ಸಜ್ಜಾಗಿದ್ದಾರೆ. ಇಂತಹ 'ಅವರು' ಎಲ್ಲಿ ಕಾಣಿಸಿಕೊಳ್ಳುತ್ತಾರೆ ಅಂದರೆ ಅದು ಏಷ್ಯಾದ ಅತಿ ದೊಡ್ಡ ಕಾಮಾಟಿಪುರವಾದ ಮುಂಬೈನಲ್ಲಿ.

ಆದರೆ ಈ ಹೊಸ ರೂಪ ಅವರವರ ಇಷ್ಟಾನುಸಾರ ಇರುವುದಿಲ್ಲ. ಬಹುತೇಕೆ ಎಲ್ಲ ಉದ್ಯೋಗಗಳಲ್ಲಿರುವಂತೆ ಈ 'ಉದ್ಯೋಗಿಗಳಿಗೂ' ಸಮವಸ್ತ್ರ ತೊಡಿಸಲಾಗಿದೆ. ಇದರಿಂದ ನಿರ್ದಿಷ್ಟ ಸಮವಸ್ತ್ರ ತೊಟ್ಟ ಮಹಿಳೆಯರನ್ನು ಅದು 'ಅವರೇ' ಅಂತ ಸುಲಭವಾಗಿ ಗುರುತಿಸಬಹುದಾಗಿದೆ. ಇದು ಎಲ್ಲೆಡೆಯೂ ಜಾರಿಗೆ ಬರುತ್ತದಾ? ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲವಾದರೂ ಇದು ಯಶಸ್ವಿಯಾದರೆ ಇತರರು ತಂತಾನೇ ಈ ವೇಷ ತೊಡಬಹುದು ಎನ್ನಲಾಗಿದೆ.

ಇದು ಅಧಿಕೃತವಾ? ಅಂದರೆ ಹಾಗೇನೂ ಇಲ್ಲ ಅಂತಲೇ ಹೇಳಬೇಕಾಗುತ್ತದೆ. ಏಕೆಂದರೆ ಮೊನ್ನೆ ವೀಕೆಂಡ್ ಸಮಯದಲ್ಲಿ ಮುಂಬೈನ ಜುಹು ಪೊಲೀಸರು ಪಂಚತಾರಾ ಹೋಟೆಲೊಂದರ ಮೇಲೆ ದಾಳಿ ನಡೆಸಿದ್ದಾರೆ. ಆ ವೇಳೆ ಅಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಯುವತಿಯರು ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ. ಆದರೆ ಅವರೆಲ್ಲಾ ಶಿಸ್ತಾಗಿ ಸಮವಸ್ತ್ರ ಧರಿಸಿದ್ದನ್ನು ಕಂಡು ಮೊದಲು ಯಾಮಾರಿದ್ದಾರೆ.

ಆದರೆ ಸಾವರಿಸಿಕೊಂಡು ಏನು ಎತ್ತ ಅಂತೆಲ್ಲ 'ವಿಚಾರಿಸಿಕೊಂಡಾಗ' ಅವರು ಬಾಯ್ಬಿಟ್ಟಿದ್ದೇನೆಂದರೆ - ಗ್ರಾಹಕರು ತಮ್ಮನ್ನು ಸುಲಭವಾಗಿ ಗುರುತಿಸುವಂತಾಗಲಿ ಎಂದು ಈ ವೇಶ ತೊಟ್ಟಿರುವುದಾಗಿ ಹೇಳಿದ್ದಾರೆ.

ಹೋಗಲಿ ಈ ಹೊಸ ವೇಶದಲ್ಲಿ ಸಿಕ್ಕಿಹಾಕಿಕೊಂಡ ಪುಣ್ಯಾತ್ತಗಿತ್ತಿಯರು ಯಾರು ಅಂದರೆ ಒಬ್ಬಳು ವಿದೇಶಿ ಬೆಡಗಿ, ಒಬ್ಬಳು ಗಗನಸಖಿ, ಮತ್ತೊಬ್ಬಳು ಕಿರು ತೆರೆಯಲ್ಲಿ ಆಗಾಗ್ಗೆ ಕಾಣಿಸಿಕೊಂಡಿರುವ ನಟಿ...ಮುಂತಾದವರು.

ಈ ಯುವತಿಯರಿಗೆ ಇಂತಹುದೇ ನಿರ್ದಿಷ್ಟ ಬಟ್ಟೆ ತೊಡಲು ಹೇಳಿದ ವಿಟಪುರುಷರು, ತಮ್ಮ ಗ್ರಾಹಕರಿಗೆ ಇಂತಹ ಸಮವಸ್ತ್ರ ಧರಿಸಿದ ಯುವತಿಯರು ನಿಮ್ಮ ಮನದಾಸೆಯನ್ನು ಪೂರೈಸುವ ಲೈಂಗಿಕ ಕಾರ್ಯಕರ್ತೆಯರು ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+