ಬಂಟ್ವಾಳ ಯುವತಿ ಸಾವು: ಪ್ರೇಮಿ-ವೈದ್ಯ ಸಹಿತ 5 ಸೆರೆ

bantwal-leelavathi-murder-bf-doctor-five-arrested
ಮಂಗಳೂರು, ಸೆ. 22: ಕರಾವಳಿ ಭಾಗದಲ್ಲಿ ಯುವತಿಯರು ಕಣ್ಮರೆಯಾಗುವುದು/ಕೊಲೆಯಾಗುವುದು/ಆತ್ಮಹತ್ಯೆ ಮಾಡಿಳ್ಳುವುದಕ್ಕೆ ಕೊನೆ ಮೊದಲಿಲ್ಲ ಎನಿಸುತ್ತಿದೆ.

ಬಂಟ್ವಾಳದ ಪೊನ್ನಂಗಿಲ ನಿವಾಸಿ ಗೋಪಾಲ ಪೂಜಾರಿ ಎಂಬವರ ಮಗಳು ಲೀಲಾವತಿ (32) ಅಸಹಜ ಸಾವು ಪ್ರಕರಣದ ಸಂಬಂಧ ಬಂಟ್ವಾಳ ಪೇಟೆಯ ವೈದ್ಯ ಮತ್ತು ಮಂಗಳೂರು ಖಾಸಗಿ ಆಸ್ಪತ್ರೆಯ ಇಬ್ಬರು ನರ್ಸ್‌ಗಳು ಹಾಗೂ ಪಂಜಿಕಲ್ಲು ಗ್ರಾಮದ ಇಬ್ಬರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಮೊನ್ನೆ (ಸೆ.20) ಜೈಲಿಗಟ್ಟಿದ್ದಾರೆ.

ಲೀಲಾವತಿ ಸೆ. 6ರಂದು ನಿಗೂಢವಾಗಿ ಸಾವಿಗೀಡಾಗಿದ್ದರು. ಪಂಜಿಕಲ್ಲು ಗ್ರಾಮದ ಆಚಾರಿಪಲ್ಕೆ-ಮುಕ್ಕುಡ ಸಂಪರ್ಕ ರಸ್ತೆಯ ನೀರಪಲ್ಕೆ ಚರಂಡಿಯ ಕೆಳಭಾಗ ಸಂಶಯಾಸ್ಪದವಾಗಿ ಲೀಲಾವತಿ ದೇಹ ಪತ್ತೆಯಾಗಿತ್ತು. ಪಂಜಿಕಲ್ಲು ಗ್ರಾಮದ ಮುಕ್ಕುಡ ನಿವಾಸಿ ಭಾಸ್ಕರ್ ಹತ್ಯೆಯ ರೂವಾರಿ ಎಂದು ಪೊಲೀಸರು ತಿಳಿಸಿದ್ದಾರೆ.

ವೈದ್ಯನನ್ನು ಹನುಮಂತ ರಾವ್ ಎಂದು ಗುರುತಿಸಲಾಗಿದ್ದು, ಈತ ಬಂಟ್ವಾಳದಲ್ಲಿ ಸ್ವಂತ ಕ್ಲಿನಿಕ್ ನಡೆಸುತ್ತಿದ್ದಾನೆ. ಈತನೊಂದಿಗೆ ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ನರ್ಸ್ ಗಳನ್ನೂ ಬಂಧಿಸಲಾಗಿದೆ.

ಲೀಲಾವತಿ- ಭಾಸ್ಕರ ಪೂಜಾರಿ ಪ್ರೇಮ ಪ್ರಸಂಗ: ಲೀಲಾವತಿಯನ್ನು ಭಾಸ್ಕರ್ ಪೂಜಾರಿ ಪ್ರೀತಿಸಿದ್ದು, ಮದುವೆಯಾಗುವುದಾಗಿ ನಂಬಿಸಿದ್ದ. ಅವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಲೀಲಾವತಿ ಐದು ತಿಂಗಳ ಗರ್ಭಿಣಿಯಾಗಿದ್ದಳು. ಭಾಸ್ಕರ್ ವಿರುದ್ಧ ಈಗ ಭ್ರೂಣ ಹತ್ಯೆ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ಮಂಗಳೂರು ಎಸ್ಪಿ ಅಭಿಷೇಕ್ ಘೋಯಲ್ ತಿಳಿಸಿದ್ದಾರೆ.

ಲೀಲಾವತಿಯ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಗರ್ಭವನ್ನು ತೆಗೆಸಲು ಭಾಸ್ಕರ್ ಪೂಜಾರಿ ಬಂಟ್ವಾಳದ ಆದಿತ್ಯ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಲೀಲಾವತಿಗೆ ಗರ್ಭ ತೆಗೆಸುವ ಪ್ರಯತ್ನದಲ್ಲಿ ವೈದ್ಯ ಹನುಮಂತ ರಾವ್ ಮಾತ್ರೆಗಳನ್ನು ನೀಡಿದ್ದ. ಅದನ್ನು ತೆಗೆದುಕೊಂಡ ಬಳಿಕ ಲೀಲಾವತಿಗೆ ರಕ್ತಸ್ರಾವ ಉಂಟಾಗಿತ್ತು. ಇದರಿಂದ ಲೀಲಾವತಿ ಅಸುನೀಗಿದ್ದಳು. ಬಳಿಕ, ಪಂಜಿಕಲ್ಲು ಆಚಾರಿಪಲ್ಕೆ-ಮುಕ್ಕುಡ ಸಂಪರ್ಕ ರಸ್ತೆಯ ನೀರಪಲ್ಕೆ ಎಂಬಲ್ಲಿನ ಚರಂಡಿಯಡಿ ಬಳಿ ಶವ ಎಸೆಯಲಾಗಿತ್ತು.

ಘಟನಾ ಸ್ಥಳದ ಸಮೀಪದ ಗದ್ದೆಯೊಂದರಲ್ಲಿ ಗಂಡಸರು ಬಳಸುವ ಚರ್ಮದ ಬೆಲ್ಟ್ ಹಾಗೂ ಮೊಬೈಲ್ ದೊರೆತಿದ್ದವು. ಅವು ಪ್ರಕರಣದ ಹಾದಿಯನ್ನು ಬೇಧಿಸುವಲ್ಲಿ ಮಾರ್ಗದರ್ಶನ ನೀಡಿದವು. ಮೊಬೈಲ್ ಡಾಟಾ ಹಾಗೂ ದಾಖಲೆಗಳ ಆಧಾರದಲ್ಲಿ ಭಾಸ್ಕರ್ ಸಿಕ್ಕಿಬಿದ್ದ. ಬೆಲ್ಟ್ ಅನ್ನು ಲೀಲಾವತಿಯ ಹೊಟ್ಟೆಗೆ ಕಟ್ಟಲು ಬಳಸಿದ್ದಾಗಿ ವೈದ್ಯ ಮಹಾಶಯ ಬಾಯಿಬಿಟ್ಟಿದ್ದಾನೆ.

ಘಟನೆಯ ಆರಂಭದಲ್ಲಿ: ಘಟನೆಯ ಮೊದಲ ದಿನ ಬೆಳಗ್ಗೆ ಮುಕ್ಕುಡದಲ್ಲಿರುವ ಅಜ್ಜಿ ಮನೆಗೆ ಹೋದವಳು ಕಾಣೆಯಾಗಿರುವುದಾಗಿ ಲೀಲಾವತಿ ಮನೆಯವರು ದೂರು ನೀಡಿದ್ದರು. ಲೀಲಾವತಿಗೆ ಬೆನ್ನು ನೋವು ಕಾಣಿಸುತ್ತಾ ಇತ್ತು. ಇದರಿಂದಲೇ ಮನನೊಂದು ಆಕೆ ಆತ್ಮಹತ್ಯೆ ಮಾಡಿದ್ದಾಳೆ ಎನ್ನುವುದು ತನಿಖೆ ನಡೆಸಿದ ಪೊಲೀಸರ ಆರಂಭಿಕ ಹೇಳಿಕೆಯಾಗಿತ್ತು. ಆದರೂ ಶವದ ಬಳಿ ದೊರೆತ ಪ್ಲಾಸ್ಟಿಕ್ ಚೀಲ, ಕರವಸ್ತ್ರ, ಪರ್ಸ್, ಮೊಬೈಲ್ ಬೇರೆಯದೇ ಕಥೆಯನ್ನು ಹೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+