ಯುಎಸ್ ಪಾಕ್ ಗಿಂತ ಭಾರತದಲ್ಲಿ ಡೀಸೆಲ್ ಅಗ್ಗ

Post hike, diesel still cheaper in India than in US
ನವದೆಹಲಿ, ಸೆ.17: ಡೀಸೆಲ್ ಬೆಲೆ ಏರಿಕೆಯಾದರೂ ಯುಎಸ್ ಹಾಗೂ ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದಲ್ಲಿ ಡೀಸೆಲ್ ಬೆಲೆ ಅಗ್ಗವಾಗಿದೆ. ಡೀಸೆಲ್ ಬೆಲೆ ಸುಮಾರು 5.63 ರೂ. ಏರಿಕೆಯಾಗುವ ಮೂಲಕ, ಪ್ರಸ್ತುತ ದಿಲ್ಲಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ ರೂ. 46.95ರಷ್ಟಾಗಿದೆ. ಬೆಂಗಳೂರಿನಲ್ಲಿ ಅದು ಪ್ರತಿ ಲೀಟರ್ ಗೆ 51.24 ರೂ.ಗಳಷ್ಟಾಗಿದೆ

ಬಾಂಗ್ಲಾದೇಶದಲ್ಲಿ 49.08 ರು ಇದ್ದರೆ, ಪಾಕಿಸ್ತಾನದಲ್ಲಿ 59.56 ರು ನಷ್ಟಿದೆ. ನೇಪಾಳದಲ್ಲಿ 57.91 ರು ಇದೆ ಎಂದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ಬೆಲೆ ಏರಿಕೆ ನಂತರ ಮಾಹಿತಿ ಹೊರ ಹಾಕಿದೆ.

ಯುಎಸ್ ನಲ್ಲಿ ಡೀಸೆಲ್ ದರ ರುಪಾಯಿಗೆ ಬದಲಾಯಿಸಿದರೆ ರು. 54.55/ಲೀ ಆಗುತ್ತದೆ. ಫ್ರಾನ್ಸ್ ನಲ್ಲಿ ರು.77.84/ಲೀ ಹಾಗೂ ಜರ್ಮನಿಯಲ್ಲಿ ರು 99.38/ಲೀ ಮತ್ತು ಇಟಲಿಯಲ್ಲಿ ರು 93.11/ಲೀ ಇದೆ.

ಡಾಲರ್ ಎದುರು ರುಪಾಯಿ ಮೌಲ್ಯವೂ ಶೇ 24 ರಷ್ಟು ಕುಸಿತ ಕಂಡು ಜುಲೈ 2011ರಲ್ಲಿ ರು 48.85 ಇದ್ದದ್ದು ಕಳೆದ ತಿಂಗಳು 55.58 ರು ಆಗಿದೆ. ಇದರಿಂದ ಆಮದು ದರ ಹೆಚ್ಚಿದೆ. ಭಾರತ ಶೇ 79 ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ.

ಪ್ರಸ್ತುತ ಬೆಂಗಳೂರಿನಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ ರೂ.50ರ ಗಡಿ ದಾಟಿದೆ. ಆದರೆ ಮೇಲೆ ತಿಳಿಸಿದ ವರದಿಯ ಅಂಕಿ ಅಂಶಗಳ ಪ್ರಕಾರ, ಜಗತ್ತಿನ ಶ್ರೀಮಂತ ರಾಷ್ಟ್ರ ಅಮೆರಿಕದಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ ರೂ. 45.84ರಷ್ಟಿದೆ.

ಇನ್ನು ಭಾರತದ ನೆರೆ ರಾಷ್ಟ್ರಗಳಾದ ಪಾಕಿಸ್ತಾನದಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ ರೂ. 46.70, ಶ್ರೀಲಂಕಾದಲ್ಲಿ ಪ್ರತಿ ಲೀಟರ್ ಗೆ ರೂ. 34.37, ಬಾಂಗ್ಲಾದೇಶ್ ನಲ್ಲಿ ಪ್ರತಿ ಲೀಟರ್ ಗೆ ರೂ. 27.32, ನೇಪಾಳದಲ್ಲಿ ಪ್ರತಿ ಲೀಟರ್ ಗೆ ರೂ. 45.38ರಷ್ಟು ಮಾತ್ರಾ ಇದೆ ಎಂದು ವರದಿಯಲ್ಲಿನ ಅಂಕಿ ಅಂಶಗಳು ತಿಳಿಸುತ್ತವೆ.

ನಷ್ಟವೋ ನಷ್ಟ: ಸರ್ಕಾರಿ ಸ್ವಾಮ್ಯದ ಕಂಪನಿಗಳು ರೀಟೈಲ್ ದರದಂತೆ 41.32 ರು ಪ್ರತಿ ಲೀಟರ್ ಡೀಸೆಲ್ ಮಾರಾಟ ಮಾಡಿದರೆ ಪ್ರತಿ ಲೀಟರ್ ಮೇಲೆ 17.05 ರು ಕಳೆದುಕೊಳ್ಳಬೇಕಾಗುತ್ತದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಆದಾಯದಲ್ಲಿ ಒಟ್ಟಾರೆ ನಷ್ಟ 1,17,780 ಕೋಟಿ ರು ನಷ್ಟ ಅನುಭವಿಸಿದೆ.

ಇನ್ನು ಪೆಟ್ರೋಲ್ ಬೆಲೆಯಂತೂ ಭಾರತಕ್ಕಿಂತ ಅಮೆರಿಕದಲ್ಲೇ ಅತ್ಯಂತ ಕಡಿಮೆಯಿದೆ. ನೆರೆ ರಾಷ್ಟ್ರಗಳಲ್ಲೂ ಪೆಟ್ರೋಲ್ ಬೆಲೆ ಭಾರತಕ್ಕಿಂತ ಕಡಿಮೆಯಿದೆ. ಪೆಟ್ರೋಲ್ ಬೆಲೆ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಗೆ ರೂ. 75.91ರಷ್ಟಿದೆ. ಆದರೆ ಅಮೆರಿಕದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 42.82ರಷ್ಟಿದೆ.

ನಮ್ಮ ನೆರೆ ರಾಷ್ಟ್ರಗಳಾದ ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ರೂ. 41.81, ಶ್ರೀಲಂಕಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ರೂ. 50.30, ಬಾಂಗ್ಲಾದೇಶ್ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 44.80 ಮತ್ತು ನೇಪಾಳದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 63.24ರಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+