ಸೆ.13 ಮಧ್ಯರಾತ್ರಿಯಿಂದಲೇ ಡೀಸೆಲ್ ದರ ಏರಿಕೆ

Diesel price hiked by Rs. 5 per litre
ನವದೆಹಲಿ, ಸೆ.13: ಇಂಧನ ದರ ಏರಿಕೆಗೆ ಸಂಸದೀಯ ವ್ಯವಹಾರಗಳ ಸಚಿವ ಸಂಪುಟ ಸಮಿತಿ(ಸಿಸಿಪಿಎ) ಒಪ್ಪಿಗೆ ಸೂಚಿಸಿದೆ. ಮನಮೋಹನ್ ಸಿಂಗ್ ನಿವಾಸದಲ್ಲಿ ಗುರುವಾರ ನಡೆದ ಸಭೆಯಲ್ಲಿ ಡೀಸೆಲ್ ದರ ಪ್ರತಿ ಲೀಟರ್ ಗೆ 5 ರು ಏರಿಕೆ ಮಾಡಲು ನಿರ್ಧರಿಸಲಾಗಿದೆ.

ನೂತನ ಡೀಸೆಲ್ ದರಗಳು ಸೆ.13ರ ಗುರುವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಪೆಟ್ರೋಲ್, ಸೀಮೆಎಣ್ಣೆ ಹಾಗೂ ಅಡುಗೆ ಅನಿಲ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ ಎಂದು ಯುಪಿಎ ವಕ್ತಾರರು ಹೇಳಿದ್ದಾರೆ.

ಆದರೆ, ಸಭೆಗೆ ಮುಂಚಿತವಾಗಿ ಎಲ್ ಪಿಜಿ ಪ್ರತಿ ಸಿಲೆಂಡರ್ ಗೆ 100 ರು ಹೆಚ್ಚಳ ಹಾಗೂ ಡೀಸೆಲ್ ಬೆಲೆ 4 ರು ಏರಿಕೆಗೆ ಪ್ರಸ್ತಾಪ ಸಲ್ಲಿಸಲಾಗಿತ್ತು. ಆದರೆ, ಅಂತಿಮವಾಗಿ ಡೀಸೆಲ್ ದರ ಮಾತ್ರ ಏರಿಸಲು ನಿರ್ಧರಿಸಲಾಗಿದೆ.

ಪರಿಷ್ಕೃತ ದರಗಳು: ಬೆಂಗಳೂರಿನಲ್ಲಿ ಡೀಸೆಲ್ ದರ 52.17 ರು ಇದೆ. ಚೆನ್ನೈನಲ್ಲಿ ರು 48.95. ಕೋಲ್ಕತ್ತಾ ರು 48.74, ಮುಂಬೈ ರು.50.99 ಆಗಲಿದೆ.

ಈಗ ಅಡುಗೆ ಅನಿಲ ಸಿಲೆಂಡರ್ 399-407 ರು/ಸಿಲೆಂಡರ್ ನಂತೆ ಸಿಗುತ್ತಿದೆ. ಹೊಸ ಕೋಟಾದಡಿ ಸಿಗುವ 6ನೇ ಸಿಲೆಂಡರ್ ಮುಗಿದು 7ನೇ ಸಿಲೆಂಡರ್ ಬೇಕಾದರೆ ರು 746-750/ಸಿಲೆಂಡರ್ ನಂತೆ ವೆಚ್ಚ ಭರಿಸಬೇಕಾಗುತ್ತದೆ.

ಆದರೆ, ಆಯಾ ರಾಜ್ಯದಲ್ಲಿ ಮೌಲ್ಯವರ್ಧಿತ ತೆರಿಗೆ ಮತ್ತು ಪ್ರವೇಶ ತೆರಿಗೆ ವಿಭಿನ್ನವಾಗಿರುವುದರಿಂದ ಪೆಟ್ರೋಲ್ ಬೆಲೆ ಇಳಿಕೆಯಲ್ಲಿಯೂ ಏರಿಳಿತ ಕಂಡುಬರುತ್ತದೆ. ಡಾಲರ್‌ಗೆ ಪ್ರತಿಯಾಗಿ ರುಪಾಯಿ ಮೌಲ್ಯ ಇನ್ನಷ್ಟು ಸ್ಥಿರಗೊಂಡಿದ್ದರೆ ಇಂಧನ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇರುತ್ತದೆ.

ತಿಂಗಳಿಗೆ 50 ಸಾವಿರ ಅಥವಾ ವರ್ಷಕ್ಕೆ ಆರು ಲಕ್ಷ ರೂ. ಅಧಿಕ ವರಮಾನವಿರುವ ಕುಟುಂಬಗಳಿಗೆ ಸಬ್ಸಿಡಿಯಲ್ಲಿ ಎಲ್ ಪಿಜಿ ನೀಡುವುದಕ್ಕೆ ನಿರ್ಬಂಧ ಸಿಸಿಪಿಎ ಹೇರಿದೆ. ಗೃಹಬಳಕೆ ಎಲ್ ಪಿಜಿ ಸಬ್ಸಿಡಿ ದರದಲ್ಲಿ ವರ್ಷಕ್ಕೆ 6ಕ್ಕೆ ಸೀಮಿತಗೊಳಿಸಲಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೆಷನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲ್ ಸಂಸ್ಥೆ ಗಳು ಮಾರ್ಚ್ 31, 2012ಕ್ಕೆ ಅನ್ವಯವಾಗುವಂತೆ 4,860 ಕೋಟಿ ರು ನಷ್ಟ ದಾಖಲಿಸಿದೆ.

ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿರುವುದರಿಂದ ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಪ್ರತಿ ದಿನ 550 ಕೋಟಿ ರು ನಷ್ಟವಾಗುತ್ತಿದೆ.

ಪ್ರತಿ ಲೀಟರ್ ಪೆಟ್ರೋಲ್ ಗೆ 6.28 ರು ಕಳೆದುಕೊಳ್ಳುತ್ತಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವ ಜೈಪಾಲ್ ರೆಡ್ಡಿ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಪ್ರತಿದಿನ ಪ್ರತಿ ಲೀಟರ್ ಡೀಸೆಲ್ ಮಾರಾಟದಿಂದ 19 ರು, ಸೀಮೆಎಣ್ಣೆ ಮಾರಾಟದಿಂದ 32.7/ ಲೀ ಹಾಗೂ ಎಲ್ ಪಿಜಿ 347/ಸಿಲೆಂಡರ್ ಗೆ ಕಳೆದುಕೊಳ್ಳುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+