ಹವಾನಿಯಂತ್ರಣದಿಂದ ಆರೋಗ್ಯ ನಿಯಂತ್ರಣ ತಪ್ಪುತ್ತದೆ

ac-life-pollute-homes-breed-asthma-kem-hospital-mumbai
ಮುಂಬೈ, ಸೆ.12: ಆಧುನಿಕ ಜೀನವದಲ್ಲಿ ಹಾಸುಹೊಕ್ಕಿರುವ ಹವಾನಿಯಂತ್ರಣ ವ್ಯವಸ್ಥೆಯಿಂದ ಉಸಿರಾಟ ಸೇರಿದಂತೆ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಣಿಸುತ್ತವೆ ಎಂಬುದು ವೈದ್ಯರ ಸಮೀಕ್ಷೆಯಿಂದ ದೃಢಪಟ್ಟಿದೆ. ಇದು ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಡೆದ ಸಮೀಕ್ಷೆಯಿಂದ ಸಾಬೀತಾಗಿದೆ.

ಮುಂಬೈನ ಕೆಇಎಂ ಆಸ್ಪತ್ರೆಯ ಪರಿಸರ ಮಾಲಿನ್ಯ ಸಂಶೋಧನಾ ಕೇಂದ್ರದ ವೈದ್ಯರು ಈ ಅಧ್ಯಯನ ನಡೆಸಿದ್ದಾರೆ. ಕಳೆದ ಜನವರಿಯಿಂದ ಮಹಾನಗರಿಯ ನಾನಾ ಪ್ರದೇಶಗಳ ಸುಮಾರು 468 ಮನೆಗಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇದರಿಂದ ಹವಾನಿಯಂತ್ರಿತ ಯಂತ್ರಗಳ ಅಳವಡಿಕೆಯಿಂದ ಮನೆಯೊಳಗಿನ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು ಪತ್ತೆಯಾಗಿದೆ.

ಮುಖ್ಯವಾಗಿ ಅಸ್ತಮಾ ಕಾಯಿಲೆಗೆ ಪರಿಸರದಿಂದುಂಟಾಗುವ ಪರಿಣಾಮಗಳ ಕುರಿತು ಈ ಅಧ್ಯಯನ ಸಾಕಷ್ಟು ಬೆಳಕು ಚೆಲ್ಲಿದೆ. ಭಾರತದ್ದು ಉಷ್ಣವಲಯ ಹವಾಗುಣ. ಹಾಗಾಗಿ, ಇಲ್ಲಿನ ಮನೆಗಳಲ್ಲಿ ಫಂಗಸ್‌ಗಳು ಸಾಮಾನ್ಯವಾಗಿ ಇರುವುದಿಲ್ಲ. ಆದರೆ ಮುಂಬೈನಲ್ಲಿ ಈಗೀಗ ಪಾಶ್ಚಿಮಾತ್ಯ ನಗರಗಳಲ್ಲಿನ ತಂಪು ಹವಾಗುಣ ಮನೆ ಮಾಡಿದೆ.

ಹೀಗಾಗಿ ಈ ನಗರದಲ್ಲಿ ಫಂಗಸ್‌ಗಳು ಸಾಮಾನ್ಯವಾಗಿದೆ ಎಂಬುದು ಅಧ್ಯಯನದಿಂದ ಸ್ಪಷ್ಟವಾಗಿದೆ ಎಂದು ಕೆಇಎಂ ಆಸ್ಪತ್ರೆಯ ಎದೆ ವಿಭಾಗದ ಮುಖ್ಯಸ್ಥೆ ಡಾ.ಅಮಿತಾ ಅತಾವಳೆ ಅಭಿಪ್ರಾಯಪಟ್ಟಿದ್ದಾರೆ.

ಅಸ್ತಮಾದಿಂದ ಬಳಲುತ್ತಿರುವವರಿಗೆ ಈ ಪರಿಸರವೇ ಮಾರಕವಾಗಿದೆ ಎಂಬುದು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗಳಿಂದ ದೃಢಪಟ್ಟಿದೆ. ಹಾಗಾಗಿ ಮುಂಬೈನ ಗಾಳಿಯಲ್ಲಿ ಧೂಳಿದ್ದು ಅದರ ಕಾರಣದಿಂದ ಮುಂಬೈವಾಸಿಗಳಿಗೆ ಅಸ್ತಮಾ ಬರಲು ಕಾರಣವಾಗಿದೆ. ಆದ್ದರಿಂದ ಹವಾನಿಯಂತ್ರಿತ ಯಂತ್ರಗಳ ಅತಿಯಾದ ಬಳಕೆಯತ್ತ ಕಟ್ಟೆಚ್ಚರವಿರಲಿ ಎಂದು ಅವರು ಹೇಳಿದ್ದಾರೆ.

ಮನೆಯ ಗೋಡೆಗಳ ಮೇಲೆ ಕಪ್ಪು ಬಣ್ಣದ ಹತ್ತಿಯ ನೂಲಿನಂತೆ ಬೆಳೆಯುವ ಧೂಳು ಫಂಗಸ್‌ನ ಸಂಕೇತವಾಗಿದ್ದು, ಗೋಡೆಗಳು ಮತ್ತು ಸೀಲಿಂಗ್‌ನಲ್ಲಿನ ಬಿರುಕುಗಳು ಈ ಫಂಗಸ್‌ಗಳ ಮುಂಬೈಯಿಗರ ಮನೆಗಳಲ್ಲಿ ಬೆಳೆಯುವುದಕ್ಕೆ ಸಾಮಾನ್ಯವಾದ ಕಾರಣವಾಗಿದೆ ಎಂದಿರುವ ವೈದ್ಯರು ಈ ಕುರಿತು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಮನೆಯೊಳಗೆ ಅಥವಾ ಕೊಠಡಿಯೊಳಗೆ ನಿರಂತರವಾಗಿ ಗಾಳಿಯಾಡಲು ಅವಕಾಶ ನೀಡದೇ ರಾತ್ರಿಯಿಡೀ ಹವಾನಿಯಂತ್ರಿತಗಳನ್ನು ಹಾಕಿಕೊಂಡು ಮಲಗುವುದು ಕೂಡಾ ಫಂಗಸ್‌ಗಳು ಹೆಚ್ಚಾಗಿ ಬೆಳೆಯುವುದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಅಲರ್ಜಿ ತಜ್ಞ ಡಾ. ವಿಖಾರ್ ಶೇಕ್ ಹೇಳಿದ್ದಾರೆ.

ಈ ಕಾರಣಗಳಿಂದಾಗಿ ಶುದ್ಧ ಗಾಳಿ ಮತ್ತು ಬೆಳಕಿಗಾಗಿ ಕಿಟಕಿ ಮತ್ತು ಬಾಗಿಲುಗಳನ್ನು ತೆರೆದಿಡುವುದು, ಮನೆಯೊಳಗೆ ಬೆಳೆಸುವ ಗಿಡಗಳನ್ನು ಆಗಾಗ ಹೊರಗಿಡುವುದು, ಕಾರ್ಪೆಟ್ ಗಳನ್ನು ಬದಲಿಸುತ್ತಿರುವುದು, ಮುಖ್ಯವಾಗಿ ಹತ್ತಿಯ ಹಾಸಿಗೆ ಮತ್ತು ದಿಂಬುಗಳನ್ನು ಬದಲಿಸಿ ಅದರ ಬದಲಿಗೆ ಫೋಮ್ ಹಾಸಿಗೆಗಳನ್ನು ಬಳಸುವುದು ಹೀಗೆ ಸಣ್ಣ ಸಣ್ಣ ಬದಲಾವಣೆಗಳ ಕ್ರಮದಿಂದ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+