ಛೇ! ಕೆಪಿಸಿಸಿಯಲ್ಲಿ ನಾಯಕರೇ ಇಲ್ಲ: ಡಿಕೆಶಿ ಅಳಲು

ರಾಮನಗರ ಮತ್ತು ಮಾಗಡಿ ವಿಧಾನಸಭಾ ಕ್ಷೇತ್ರಗಳಲ್ಲಿನ ನಾಯಕತ್ವದಲ್ಲಿನ ಗೊಂದಲ ಹಾಗೂ ಇತ್ತೀಚೆಗೆ ಕೆಪಿಸಿಸಿಯಲ್ಲಿನ ಮುಸುಕಿನ ಗುದ್ದಾಟದಿಂದಾಗಿ ಕಾಂಗ್ರೆಸ್ಸಿನ ಉದ್ದೇಶಿತ ಬರ ಪ್ರವಾಸ ರದ್ದಾಗಿದೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಾಮನಗರದಲ್ಲಿ ಭಿಮಾನಿಗಳ ಸಂಘ ಉದ್ಘಾಟಿಸಲು ಬಂದಿದ್ದ ಡಿ.ಕೆ.ಶಿವಕುಮಾರ್ ಅವರು ರಾಮನಗರ ಮತ್ತು ಮಾಗಡಿ ವಿಧಾಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ
ಅಭ್ಯರ್ಥಿಗಳ ಹೆಸರುಗಳನ್ನು ಸೂಚಿಸಲಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ, ಇದಕ್ಕೆ ಉತ್ತರಿಸಿದ ಡಿಕೆ ಶಿವಕುಮಾರ್, ಸೂಕ್ತ ಸಮಯದಲ್ಲಿ ಅಭ್ಯಥಿಗಳ ಆಯ್ಕೆಯನ್ನು ನಿರ್ಧರಿಸಲಾಗುವುದು ಎಂದು ಹೇಳಿದರು.
ಹೀಗಾಗಿ, ಮಾಗಡಿ ಮತ್ತು ರಾಮನಗರ ಕ್ಷೇತ್ರದಲ್ಲಿ ಸ್ಪರ್ಧಾಕಾಂಕ್ಷಿಗಳಾಗಿರುವ ನಾಯಕರಲ್ಲಿ ಇಲ್ಲಿ ಗೊಂದಲ ಏರ್ಪಟ್ಟಿದೆ. ಹಲವು ವರ್ಷಗಳಿಂದ ಹಣ ಖರ್ಚು ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಹೊಸ ಅಸ್ತಿತ್ವ ಕೊಟ್ಟಿರುವ ಮಾಗಡಿ ಕ್ಷೇತ್ರದ ಎ.ಮಂಜು ಮತ್ತು ರಾಮನಗರ ಕ್ಷೇತ್ರದ ಮರಿದೇವರು ಅವರ ಬೆಂಬಲಿಗರು ಮತ್ತು ಆಪ್ತರು ಡಿಕೆಶಿ ಹೇಳಿಕೆಯಿಂದ ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿ ಇದೆ,
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರ ನಿವಾಸ ರಾಮನಗರ ಮತ್ತು ಮಾಗಡಿ ಕ್ಷೇತ್ರಗಳ ನಾಯಕರು ದಾಳಿ ಇಟ್ಟು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವಂತೆ ದುಂಬಾಲು ಬಿದ್ದಿದ್ದಾರೆ. ಆದರೆ, ಎಂದಿನಂತೆ
ಜಿ.ಪರಮೇಶ್ವರ್ ಯಾವುದೆ ತೀರ್ಮಾನಕ್ಕೆ ಬರಲು ಸಾಧ್ಯವಾಗದೆ ರಾಮನಗರ ಪ್ರವಾಸವನ್ನೇ ರದ್ದುಗೊಳಿಸಿದ್ದಾರೆ.
ಚುನಾವಣೆಗೆ ಇನ್ನು ಆರೇಳು ತಿಂಗಳು ಬಾಕಿ ಇರುವ ಸಂದರ್ಭದಲ್ಲಿ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಅವರು, ಕನಕಪುರ ತಾಲ್ಲೂಕಿನಲ್ಲಿ ಪ್ರವಾಸ ನಡೆಸಿ ದಿನಕ್ಕೊಂಡು ಹೇಳಿಕೆ ನೀಡುವ ಮೂಲಕ ಡಿ.ಕೆ. ಶಿವಕುಮಾರ್ ಅವರ ನಿದ್ದೆಗೆಡುಸಿದ್ದಾರೆ. ಈ ನಡುವೆ ಅಂಬರೀಷ್ ಕೂಡಾ ಸ್ಪರ್ಧೆಗೆ ನಿಂತರೆ ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡುವುದು ಎಂಬ ಗೊಂದಲಲ್ಲಿ ಕಾಂಗ್ರೆಸ್ ಮುಳುಗಿದೆ.
ಹೀಗಾಗಿ ಆಂತರಿಕ ಗೊಂದಲದಿಂದ ಬರ ಪ್ರವಾಸ ಅಧ್ಯಯನ ಕಾಂಗ್ರೆಸ್ ಗೆ ಮರೆತುಹೋಗಿದೆ ಎಂಬುದನ್ನು ಡಿಕೆ ಶಿವಕುಮಾರ್ ಅವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.












Click it and Unblock the Notifications