ಆದಾಯ ತೆರಿಗೆಗೆ ಲೋಗೊ ರಚಿಸಿ: ಲಕ್ಷ ಬಹುಮಾನ ಗೆಲ್ಲಿ

ನೀವು ರಚಿಸುವ ಲೋಗೊ ಇಲಾಖೆಯ ಆಶೋತ್ತರಗಳು, ಧ್ಯೇಯೋದ್ದೇಶಗಳಿಗೆ ನ್ಯಾಯ ಒದಗಿಸುವಂತಿರಬೇಕು. ಅಂದರೆ ಒಟ್ಟಾರೆಯಾಗಿ ಇಲಾಖೆಯ ಬ್ರ್ಯಾಂಡ್ ಆಗಿ ಮೂಡಬೇಕು. ಮುಖ್ಯವಾಗಿ ತೆರಿಗೆ ಪಾವತಿದಾರರನ್ನು ತೆರಿಗೆ ಪಾವತಿಸುವುದಕ್ಕಾಗಿ ಬಡಿದೆಬ್ಬಿಸುವಂತಿರಬೇಕು. ತಡವೇಕೆ, ನಿಮ್ಮ ಕೌಶಲ್ಯವನ್ನು ಓರೆಗೆ ಹಚ್ಚಿ ನೋಡಿ.
ಹೀಗೆ ರಚಿತವಾದ ಲೋಗೊಗೆ ಬರೋಬ್ಬರಿ 1 ಲಕ್ಷ ರೂಪಾಯಿ ನಗದು ಬಹುಮಾನವಿದೆ. ಆದರೆ ಇಲಾಖೆಯು ತೆರಿಗೆ ಮುರಿದುಕೊಂಡು ಉಳಿದ ಮೊತ್ತವನ್ನಷ್ಟೇ ಕೊಡುತ್ತದಾ ಎಂಬುದು ತಿಳಿದುಬಂದಿಲ್ಲ. ಇದೇ ತಿಂಗಳ 23 (ಸೆ. 23) ರೊಳಗಾಗಿ ಲೋಗೋ ಕಳಿಸಬೇಕು.
ಲೋಗೋ ಕಳಿಸಲು ಒಂದಷ್ಟು ಕಂಡೀಷನ್: ಅಂಚೆ ಮೂಲಕ ಲೋಗೊ ಕಳಿಸಬಹುದು. Mascot Design for Income Tax Department ಎಂದು ಲಕೋಟೆ ಮೇಲೆ ಬರೆದು post to Post Box No. 6005, New Delhi-110001 ವಿಳಾಸಕ್ಕೆ ಕಳಿಸಿಕೊಡಬೇಕು. ನಿಮ್ಮ ಹೆಸರು ವಿಳಾಸ, ವಿವರಗಳು ಅಗತ್ಯವಾಗಿ ನಮೂದಾಗಿರಲಿ.
ಲೋಗೋವನ್ನು ಈಮೇಲ್ ಮೂಲಕವೂ ಕಳಿಸಬಹುದು. ಈಮೇಲ್ ವಿಳಾಸ: [email protected]
www.incometaxindia.gov.in ವೆಬ್ ಸೈಟ್ ಮೂಲಕವೂ ಅರ್ಜಿ ತುಂಬಿಸಿ ಕಳಿಸಬಹುದು.
ಸ್ಪರ್ಧೆಗೆ ಯಾವುದೇ ಶುಲ್ಕವಿಲ್ಲ. ಭಾರತೀಯರು ಮಾತ್ರ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು. ಆಯ್ಕೆಗೊಂಡ ಲೋಗೊ ಸಂಪೂರ್ಣವಾಗಿ ಇಲಾಖೆಯ ಸ್ವತ್ತಾಗುತ್ತದೆ.












Click it and Unblock the Notifications