ಭಾರತದಲ್ಲಿ ವರ್ಣರಂಜಿತ ಸಿಗರೇಟ್ ಪ್ಯಾಕ್‌ಗೆ ಹೊಗೆ

ಆಸ್ಟ್ರೇಲಿಯಾದಲ್ಲಿ ಏನಾಗಿದೆಯೆಂದರೆ ಸಿಗರೇಟ್ ಪ್ಯಾಕ್ ಅನ್ನು ಆಕರ್ಷಿತವಲ್ಲದ ರೀತಿಯಲ್ಲಿ ಮುದ್ರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಅಂದರೆ ಸಿಗರೇಟ್ ಪ್ಯಾಕ್‌ಗಳನ್ನು ಬಣ್ಣಬಣ್ಣವಾಗಿ ಮುದ್ರಿಸುವುದಕ್ಕೆ ನಿಷೇಧ ಹೇರುವ ಚಿಂತನೆ ನಡೆಸಿದೆ. ಜತೆಗೆ, ಸಿಗರೇಟ್ ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಚಿತ್ರಸಹಿತ ಸಂದೇಶವನ್ನು ದೊಡ್ಡದಾಗಿ ಪ್ರಕಟಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ನಿಯಮಗಳು ಇದೇ ಡಿಸೆಂಬರಿನಿಂದ ಜಾರಿಗೆ ಬರಲಿದೆ.
ಆಸ್ಟ್ರೇಲಿಯಾ ಸರ್ಕಾರದ ತಂದಿರುವ ಈ ಕಠಿಣ ಕಾನೂನು ಇಡೀ ವಿಶ್ವದ ಗಮನ ಸೆಳೆದಿದೆ. ಅಂತೆಯೇ ಈ ವಿಷಯವು ಭಾರತದ ಆರೋಗ್ಯ ಸಚಿವಾಲಯದ ಗಮನವನ್ನೂ ಸೆಳೆದಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲೂ ಇಂತಹ ಕಾನೂನು ಜಾರಿಗೆ ತರುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯಲ್ಲಿನ ತಂಬಾಕು ನಿಯಂತ್ರಣ ವಿಭಾಗದ ನಿರ್ದೇಶಕ ಅಮಲ್ ಪುಷ್ಪ್ ಹೇಳಿದ್ದಾರೆ.
ಈ ಸಿಗರೇಟ್ ಪ್ಯಾಕ್‌ಗಳನ್ನು ಬಣ್ಣಬಣ್ಣವಾಗಿ ಮುದ್ರಿಸಿ, ಉತ್ತಮ ಗುಣಮಟ್ಟದ ಪ್ಯಾಕಿಂಗ್ ನಲ್ಲಿ ಮಾರಾಟ ಮಾಡಿದಾಗ ಏನಾಗುತ್ತದೆಂದರೆ ಯುವಜನತೆಗೆ 'ಅಂತಹ ಚಿತ್ತಾಕರ್ಷಕ ಸಿಗರೇಟನ್ನೇಕೆ ಟ್ರೈ ಮಾಡಬಾರದು?' ಎನಿಸುವಷ್ಟು ಅದರತ್ತ ಆಕರ್ಷಣೆ ಉಂಟಾಗುತ್ತದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಸಿಗರೇಟ್ ಪ್ಯಾಕ್‌ಗಳನ್ನು ಬಣ್ಣಬಣ್ಣವಾಗಿ ಮುದ್ರಿಸುವುದಕ್ಕೆ ಆಸ್ಟ್ರೇಲಿಯಾ ಮಾದರಿಯನ್ನನುಸರಿಸಿ ಅದಕ್ಕೆ ನಿಷೇಧ ಹೇರುವ ಬಗ್ಗೆ ಚಿಂತನೆ ನಡೆಸಿದೆ. ಆಸ್ಟ್ರೇಲಿಯಾ ಸರ್ಕಾರದ ತಂದಿರುವ ಈ ಕಠಿಣ ಕಾನೂನು ಇಡೀ ವಿಶ್ವದ ಗಮನ ಸೆಳೆದಿದೆ.












Click it and Unblock the Notifications