HAL ಗುತ್ತಿಗೆ ನೌಕರನಿಂದ ಮೂರು ಕೋಟಿ ಮೋಸ

30 ವರ್ಷದ ಸಿ. ರಾಜಣ್ಣನೇ ಸರಕಾರಿ ಸ್ವಾಮ್ಯದ ನಮ್ಮದೇ ಬೆಂಗಳೂರಿನಲ್ಲಿರುವ ಸರ್ ಎಂ ವಿಶ್ವೇರಯ್ಯನವರ ಕೂಸಾದ Hindustan Aeronautics Limitedಗೆ ಭಾರಿ ಮೋಸ ಮಾಡಿರುವ ಐನಾತಿ ಆಸಾಮಿ.
ಉದ್ಯೋಗಿಯೊಬ್ಬ ಅನ್ನ ನೀಡುವ ಸಂಸ್ಥೆಗೇ ಭಾರಿ ಪ್ರಮಾಣದಲ್ಲಿ ಕನ್ನವಿಕ್ಕಿದ ಅಪರೂಪದ ಪ್ರಕರಣವಿದು. ಹಾಗಾದರೆ ಸಂಸ್ಥೆಯಲ್ಲಿನ ವವಸ್ಥೆ ಆ ಪಾಟಿ ಹುಳುಕುಗಳಿಂದ ತುಂಬಿತ್ತಾ ಎಂಬ ಅನುಮಾನ ಜನಸಾಮಾನ್ಯನನ್ನು ಕಾಡತೊಡಗಿದೆ.
ರಾಜಣ್ಣ HAL ಸಂಸ್ಥೆಯ ಏರೋಸ್ಪೇಸ್ ವಿಭಾಗದ ಹಣಕಾಸು ವಿಭಾಗದಲ್ಲಿ ಬಿಲ್ ಪಾವತಿಸುವ ಸೆಕ್ಷನ್ ನಲ್ಲಿ ಕಾಂಟ್ರಾಕ್ಟ್ ಕೆಲಸಗಾರ. ವಿದ್ಯುನ್ಮಾನ ವ್ಯವಸ್ಥೆಯ (Real Time Gross Settlement system- RTGS) ಮೂಲಕ ಬಿಲ್ ಪಾವತಿಸುವುದನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡು ಈ ಕುಕೃತ್ಯವೆಸಗಿದ್ದಾನೆ ಎಂದು HAL ಪೊಲೀಸರು ಹೇಳಿದ್ದಾರೆ. ಪೊಲೀಸರು ಸದ್ಯಕ್ಕೆ ರಾಜಣ್ಣನಿಂದ ಎರಡು ಟೆಂಪೋಗಳು, ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜಣ್ಣ ಏನು ಮಾಡುತ್ತಿದ್ದನೆಂದರೆ ಸಂಸ್ಥೆಯ ವೆಂಡರುಗಳಿಗೆ ಬಿಲ್ ಪಾವತಿಸುವಾಗ RTGS ಮೂಲಕ ಅದನ್ನು ತನ್ನ ಗೆಳೆಯರ ಖಾತೆಗಳಿಗೆ ವರ್ಗಯಾಯಿಸಿಕೊಳ್ಳುತ್ತಿದ್ದ. 2011-12 ಸಾಲಿನ ಲೆಕ್ಕಪರಿಶೋಧನೆ ಮಾಡುವಾಗ ಈ ಅಕ್ರಮಗಳು ಬೆಳಕಿಗೆ ಬಂದಿವೆ.
ಸಂಸ್ಥೆಯ ಇಬ್ಬರು ಅನಧಿಕೃತ ವೆಂಡರ್ ಗಳಿಗೆ ಪಾವತಿಗಳು ಮಾಡಿರುವುದು ಲೆಕ್ಕಪರಿಶೋಧನೆಯಿಂದ ಬಹಿರಂಗವಾಗಿದೆ. ಆಂತರಿಕ ತನಿಖೆ ನಡೆಸಿದಾಗ ಅನುಮಾನದ ಮುಳ್ಳು ನೇರವಾಗಿ ರಾಜಣ್ಣನತ್ತ ತಿರುಗಿದೆ. ಸಾಕ್ಷ್ಯ ಸಮೇತ ರಾಜಣ್ಣನನ್ನು ಹಿರಿಯ ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಈತ 8 ವರ್ಷಗಳಿಂದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ತುಂಬ ನಂಬುಗಸ್ಥನಂತೆ ನಡೆಸುಕೊಳ್ಳುತ್ತಿದ್ದ ರಾಜಣ್ಣ ಸಂಬಂಧಪಟ್ಟ ಅಧಿಕಾರಿಗಳ ವಿಶ್ವಾಸ ಗಳಿಸಿಕೊಂಡಿದ್ದ. ಕೊನೆಗೆ ಅದನ್ನೇ ದುರುಪಯೋಗಪಡಿಸಿಕೊಂಡು ಹಣ ವಂಚಿಸತೊಡಗಿದ. ರಮೇಶ ಮತ್ತು ನಾಗೇಶ ಎಂಬಿಬ್ಬರು ಸ್ನೇಹಿತರ ಖಾತೆಗಳಿಗೆ ರಾಜಣ್ಣ ಸಂಸ್ಥೆಯ ಹಣವನ್ನು ರವಾನಿಸತೊಡಗಿದ. ರಾಜಣ್ಣ ಏನು ಆಲೋಚಿಸಿದ್ದನೆಂದರೆ HAL ಎಂಬುದು ಮಹಾಸಮುದ್ರವಿದ್ದಂತೆ. ಅದರಲ್ಲಿ ಒಂದು ಹಿಡಿಯಷ್ಟು ಹಣ ಮೊಗೆದುಕೊಂಡರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ಲೆಕ್ಕಾಚಾರ ಹಾಕಿದ್ದ. ಆದರೆ ಮಾನವ ತಾನೊಂದು ಬಗೆದರೆ ...












Click it and Unblock the Notifications