ಲ್ಯಾಂಡ್ ಲೈನ್ ಬೇಡಿಕೆ ಕುಸಿತ, ಸಂಕಷ್ಟದಲ್ಲಿ BSNL

BSNL’s losses widened
ನವದೆಹಲಿ, ಸೆ.3: ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಸಂಸ್ಥೆ ಮತ್ತೊಮ್ಮೆ ನಷ್ಟ ಅನುಭವಿಸಿದೆ. ನಿರ್ವಹಣಾ ವೆಚ್ಚ ಅಧಿಕಗೊಂಡಿರುವುದು, ಗ್ರಾಮೀಣ ಪ್ರದೇಶಗಳಲ್ಲಿ ಲ್ಯಾಂಡ್ ಲೈನ್ ಬೇಡಿಕೆ ಕುಸಿದಿರುವ ಕಾರಣ, 2011-12ರ ಅವಧಿಯಲ್ಲ್ಲಿ ಬಿಎಸ್ಎನ್ಎಲ್ ಸಂಸ್ಥೆ 8,850.70 ಕೋಟಿ ರು ನಷ್ಟ ಮೈಮೇಲೆ ಎಳೆದುಕೊಂಡಿದೆ.

2010-11ರ ಅವಧಿಯಲ್ಲಿ ಬಿಎಸ್ಎನ್ಎಲ್ 6,384.26 ಕೋಟಿ ರೂ. ನಷ್ಟ ಅನುಭವಿಸಿತ್ತು. 2010-11ರಲ್ಲಿ 29,687.62 ಕೋಟಿ ಆದಾಯಗಳಿಸಿದ್ದ ಬಿಎಸ್ ಎನ್ ಎಲ್ 2011-12ರ ಅವಧಿಯಲ್ಲಿ 27,933.5 ಕೋಟಿ ಮಾತ್ರ ಆದಾಯ ಗಳಿಸಿದೆ.

2004-05ರ ಬಳಿಕ ಕಂಪನಿಯು ನಿಧಾನವಾಗಿ ನಷ್ಟದ ಹಾದಿಯಲ್ಲಿದೆ, ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶವಿರುವ ಮೊಬೈಲ್ ಫೋನ್ ಉದ್ಯಮ ಬಿಎಸ್ ಎನ್ ಎಲ್ ಗೆ ಪೈಪೋಟಿ ನೀಡುತ್ತಿದೆ. ಅಧಿಕಗೊಂಡ ನೌಕರರ ವೇತನ ಮತ್ತು 3ಜಿ ವಲಯದಲ್ಲಿ ಬಿಎಸ್ ಎನ್ ಎಲ್ ಹೂಡಿಕೆ ಕಂಪನಿಯ ನಷ್ಟಕ್ಕೆ ಮತ್ತೊಂದು ಪ್ರಮುಖ ಕಾರಣವಾಗಿದೆ.

2011-12ರಲ್ಲಿ ಸುಪ್ರೀಂಕೋರ್ಟ್ಆದೇಶದಂತೆ ಸುಮಾರು 1,500 ಕೋಟಿ ರು ಲೈಸನ್ಸ್ ಫೀ ಕಟ್ಟಿದ್ದು ಬಿಎಸ್ಸೆನ್ನೆಲ್ ಗೆ ಹೊಡೆತ ನೀಡಿದೆ. ತರಂಗಗುಚ್ಛಗಳ ವೆಚ್ಚವೂ ಸೇರಿ, ಖರ್ಚುವೆಚ್ಚ ಏರು ಪೇರಾಗಿಬಿಟ್ಟಿತು ಎಂದು ಬಿಎಸ್ಸೆನ್ನೆಲ್ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ. ಉಪಾಧ್ಯಾಯ್ ಹೇಳಿದ್ದಾರೆ.

ಜೂ 30, 2012ಕ್ಕೆ ಅನುಗುಣವಾಗುವಂತೆ ಭಾರತ್ ಸಂಚಾರ್ ನಿಗಮ್ ನಿಯಮಿta(BSNL) ಸ್ಥಿರ ದೂರಾವಾಣಿ ಮಾರುಕಟ್ಟೆಯಲ್ಲಿ 69.08 ಹಾಗೂ ನಿಸ್ತಂತು (ವೈರ್ ಲೆಸ್ ಮೊಬೈಲ್ ಟೆಲಿಫೋನಿ) ಸೇವಾ ಕ್ಷೇತ್ರದಲ್ಲಿ 10.52 ಪಾಲು ಹೊಂದಿದೆ ಎಂದು ಟೆಲಿಕಾಂ ರೆಗುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+