ಕಾನೂನು ವಿವಿಯಲ್ಲಿ ವಿದ್ಯಾರ್ಥಿ ಜೋಡಿಯ ರಾಸಲೀಲೆ

ಕಾಲೇಜು ಕಟ್ಟಡದ ಮಹಡಿಯ ಮೇಲೆ ಸುಮಾರು 3 ಗಂಟೆಗಳ ಕಾಲ ಈ ಜೋಡಿ ಅರೆ-ರಾಸಲೀಲೆಯಲ್ಲಿ ತೊಡಗಿತ್ತು. ಇದನ್ನು ಅನೇಕರು ವೀಕ್ಷಿಸುತ್ತಿದ್ದರೂ ಯುವ ಜೋಡಿ ಅದರ ಪರಿವೆಯೇ ಇಲ್ಲದೆ ತನ್ನದೇ ಲೋಕದಲ್ಲಿ ವಿಹರಿಸಿದೆ.
ಸದರಿ ವಿದ್ಯಾರ್ಥಿ ಅಂಗಿಯನ್ನು ತೆಗೆದು ಅರೆನಗ್ನಾವಸ್ಥೆಯಲ್ಲಿದ್ದರೆ ವಿದ್ಯಾರ್ಥಿನಿಯು ಅದೇ ಅಂಗಿಯನ್ನು ತೊಟ್ಟು ಅರೆ-ರಾಸಲೀಲೆಯಲ್ಲಿ ತೊಡಗಿತ್ತು. ಈ ಹಿಂದೆಯೂ ಅನೇಕ ಬಾರಿ ಸದರಿ ಜೋಡಿ ಕ್ಯಾಂಪಸ್ಸಿನಲ್ಲಿ ಸರಸ ಸಲ್ಲಾಪ ನಡೆಸಿರುವ ಘಟನೆಗಳು ವರದಿಯಾಗಿವೆ.
ಸುದ್ದಿ ತಿಳಿಯುತ್ತಿದ್ದಂತೆ ಎಚ್ಚೆತ್ತ ವಿವಿ ಭದ್ರತಾ ಸಿಬ್ಬಂದಿ ಜೋಡಿಯನ್ನು ವಶಕ್ಕೆ ಪಡೆದಿದ್ದಾರೆ ಮತ್ತು ಈ ಕುರಿತು ವಿವಿ ಉಪ ಕುಲಪತಿ ಪರಮ್ ಜಿತ್ ಜಸ್ವಾಲ್ ಅವರಿಗೆ ದೂರು ನೀಡಿದ್ದಾರೆ.
ಈ ಮಧ್ಯೆ, ಜೋಡಿಯ ಫೋಟೋಗಳನ್ನು ಕ್ಲಿಕ್ಕಿಸಿದ ವ್ಯಕ್ತಿಯೊಬ್ಬ ಅದನ್ನು ಬಹಿರಂಗಗೊಳಿಸಿದ್ದು ಪಾಟಿಯಾಲ ಸೇರಿದಂತೆ ಎಲ್ಲೆಡೆ ಚಿತ್ರ ಎಲ್ಲರ ಕೈಯಲ್ಲೂ ಹರಿದಾಡುತ್ತಿದೆ. ಘಟನೆಯ ಬಗ್ಗೆ ವಿವಿ ಆಡಳಿತ ಮಂಡಳಿ ತನಿಖೆಗೆ ಆದೇಶ ನೀಡಿದೆ.












Click it and Unblock the Notifications