ಚಂದ್ರನ ಮೇಲೆ ಕಾಲಿಟ್ಟ ಮೊದಲ ಪಾದ ಕಣ್ಮರೆ

Neil Armstrong, first man on moon
ವಾಷಿಂಗ್ಟನ್, ಆ.26: ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ ಎಂಬ ಖ್ಯಾತಿ ಗಳಿಸಿದ್ದ ಅಮೆರಿಕದ ಗಗನಯಾತ್ರಿ ನೀಲ್ ಆರ್ಮ್‌ಸ್ಟ್ರಾಂಗ್ ಶನಿವಾರ(ಆ.25) ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.

ಎರಡು ವಾರಗಳ ಹಿಂದೆ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು, ಆನಂತರ ಚೇತರಿಸಿಕೊಳ್ಳದೇ ಮೃತಪಟ್ಟರು ಎಂದು ಅವರ ಕುಟುಂಬದ ಮೂಲಗಳು ಹೇಳಿದೆ.

1969ರಲ್ಲಿ ಚಂದ್ರನ ಮೇಲೆ ಕಾಲಿಟ್ಟ ಅಪೊಲೊ 11 ಯೋಜನೆಯ ಸದಸ್ಯರಾಗಿದ್ದ ನೀಲ್ ಆರ್ಮ ಸ್ಟ್ರಾಂಗ್ ಜುಲೈ 20, 1969ರಂದು ಚಂದ್ರನ ನೆಲದ ಮೇಲೆ ಕಾಲಿಟ್ಟರು. ನಂತರ ಅಲ್ಲಿಂದಲೆ ಸಂದೇಶ ರವಾನಿಸಿದ ನೀಲ್ ಇಂದಿಗೂ ಗಗನಯತ್ರಿಗಳಿಗೆ ಸ್ಪೂರ್ತಿಯಾಗಿದ್ದಾರೆ.

That's one small step for (a) man, one giant leap for mankind." ಎಂದು ನೀಲ್ ಹೇಳಿದ್ದರು.

1930 ಆಗಸ್ಟ್ 5 ರಂದು ವಪಾಕೊನೆಟಾ, ಓಹಿಯೋದಲ್ಲಿ ಸ್ಟೀಫನ್ ಹಾಗೂ ವಿಯೋಲಾ ಆರ್ಮ್ ಸ್ಟ್ರಾಂಗ್ ದಂಪತಿಯಾದ ಮೊದಲ ಪುತ್ರನಾಗಿ ನೀಲ್ ಜನಿಸಿದರು. 1956ರಲ್ಲಿ ಕಾಲೇಜು ಸಹಪಾಠಿ ಜನೇತ್ ಶೆರೊನ್ ರನ್ನು ವರಿಸಿದರು. ನಂತರ ಕರೋಲ್ ನೈಟ್ ಅವರನ್ನು ನೀಲ್ ವಿವಾಹವಾಗಿದ್ದರು.

6ನೇ ವರ್ಷದಲ್ಲೆ ವಿಮಾನದ ಮಾದರಿಗಳನ್ನು ಮಾಡುತ್ತಿದ್ದ ನೀಲ್ ಗೆ ಪೈಲಟ್ ಆಗುವ ಮಹದಾಸೆ ಇತ್ತು. ನಾಸಾಗೂ ಮೊದಲು ನಾಕಾ(naca) ಸೇರಿಕೊಂಡ ನೀಲ್ ಹೈ ಸ್ಪೀಡ್ ವಿಮಾನಗಳನ್ನು ಪಳಗಿಳಿಸಿಕೊಂಡುಬಿಟ್ಟಿದ್ದರು.

X-15 rocket plane ಅನ್ನು ಸಮರ್ಥವಾಗಿ ಹಾರಿಸಿದ ನೀಲ್ ಸಹಜವಾಗಿ ಆ ಕಾಲದ ಶ್ರೇಷ್ಥ ಟೆಸ್ಟ್ ಪೈಲಟ್ ಎನಿಸಿದ್ದರು. 200,000 ಅಡಿ ಎತ್ತರ (61,000 ಮೀ) 4,000 mph (6,435 kph) ವೇಗದಲ್ಲಿ ವಿಮಾನ ಹಾರಾಟ ಮಾಡಿದ್ದ ನೀಲ್ ಇನ್ನೂ ಎತ್ತರಕ್ಕೆ ಹಾರಿದರು.

1962ರಲ್ಲಿ ಗಗನಯಾತ್ರಿಯಾಗಿ ಆಯ್ಕೆಯಾದ ನೀಲ್ ನಂತರ ಮಾನವ ಸಹಿತ ಚಂದ್ರಯಾನಕ್ಕೆ ಸಜ್ಜಾದರು. ಅಪೊಲೊ 11 ವಾಹನದ ಮೂಲಕ ಚಂದ್ರನ ಅಂಗಳಕ್ಕೆ ಇಳಿದು ಐತಿಹಾಸಿಕ ಹೆಜ್ಜೆ ಇಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+