ಫೋರ್ಬ್ಸ್ ಪಟ್ಟಿಯಲ್ಲಿ ಸೋನಿಯಾಗೆ 6ನೇ ಸ್ಥಾನ

'ವಿಶ್ವದ ಟಾಪ್ 100 ಪ್ರಭಾವಿ ಮಹಿಳೆ' ಪಟ್ಟಿಯಲ್ಲಿ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಅವರು ಸತತವಾಗಿ ಎರಡನೇ ವರ್ಷ ಪ್ರಥಮ ಸ್ಥಾನದಲ್ಲಿ ಮುಂದುವರೆದಿದ್ದಾರೆ.
65 ವರ್ಷದ ಸೋನಿಯಾ ಗಾಂಧಿ ಅವರೊಂದಿಗೆ ಭಾರತ ಮೂಲದ 5 ಮಹಿಳೆಯರು ಫೋರ್ಬ್ಸ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ 7ನೇ ಸ್ಥಾನದಲ್ಲಿದ್ದ ಸೋನಿಯಾ ಅವರು ಈ ವರ್ಷ 6ನೇ ಸ್ಥಾನಕ್ಕೇರಿದ್ದಾರೆ.
ಪೆಪ್ಸಿಕೋ ಸಂಸ್ಥೆ ಚೇರ್ಮನ್ ಹಾಗೂ ಸಿಇಒ ಇಂದ್ರಾ ನೂಯಿ ಅವರು 12ನೇ ಸ್ಥಾನದಲ್ಲಿದ್ದಾರೆ. ಸಿಸ್ಕೋ ಸಿಸ್ಟಮ್ಸ್ ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಪದ್ಮಶ್ರೀ ವಾರಿಯರ್ ಅವರು 58ನೇ ಸ್ಥಾನದಲ್ಲಿದ್ದಾರೆ.
ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಸಿಇಒ ಚಂದಾ ಕೊಚ್ಚಾರ್ ಅವರು 59ನೇ ಸ್ಥಾನದಲ್ಲಿದ್ದರೆ, ಬಯೋಕಾನ್ ನ ಸ್ಥಾಪಕಿ ಕಿರನ್ ಮುಜುಂದಾರ್ ಶಾ ಅವರು 80ನೇ ಸ್ಥಾನ ಪಡೆದಿದ್ದಾರೆ.
ನೆಹರೂ ಹಾಗೂ ಗಾಂಧಿ ರಾಜಕೀಯ ಸಿದ್ಧಾಂತಗಳನ್ನು ಮುಂದಿನ ಪೀಳಿಗೆಯತ್ತ ಕೊಂಡೊಯ್ಯುವಲ್ಲಿ ಸೋನಿಯಾ ಅವರ ಪಾತ್ರ ಹಿರಿದಾಗಿದೆ. ಕಳೆದ ವರ್ಷ ಶಸ್ತ್ರಚಿಕಿತ್ಸೆಗೆ ಒಳಗಾಗಿ ಹಿನ್ನಡೆ ಅನುಭವಿಸಿದರೂ ತಮ್ಮ ಹೋರಾಟ ಮನೋಭಾವವನ್ನು ಬದಲಾಯಿಸಲಿಲ್ಲ.
ಮುಂಬೈ ದಾಳಿ, ಅಸ್ಸಾಂ ಗಲಭೆ ಹಾಗೂ ಆಂತರಿಕ ರಾಜಕೀಯ ಕದನಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಫೋರ್ಬ್ಸ್ ಹೇಳಿದೆ. ಕಲೆ ವಿಭಾದಲ್ಲಿ ಪದವೀಧರೆಯಾಗಿರುವ ಸೋನಿಯಾ ಅವರು ತೈಲ ವರ್ಣ ಚಿತ್ರಗಳನ್ನು ರಚಿಸುವುದರಲ್ಲೂ ನಿಷ್ಣಾತೆ.
ಉಳಿದಂತೆ ಪಟ್ಟಿಯಲ್ಲಿ ಯುಎಸ್ ಸೆಕ್ರೆಟರಿ ಆಫ್ ಸ್ಟೇಟ್ ಹಿಲರಿ ಕ್ಲಿಂಟನ್ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಬ್ರೆಜಿಲ್ ನ ಅಧ್ಯಕ್ಷೆ ಡಿಲ್ಮಾ ರೌಸೆಫ್ ಮೂರನೇ ಸ್ಥಾನ ಹಾಗೂ ನ್ಯೂಯಾರ್ಕ್ ಟೈಮ್ಸ್ ನ ಕಾರ್ಯಕಾರಿ ಸಂಪಾದಕಿ ಜಿಲ್ ಆಬ್ರಾಂಸನ್ 5 ನೇ ಸ್ಥಾನ ಹಾಗೂ ಮಿಚೆಲ್ ಒಬಾಮಾ 7ನೇ ಸ್ಥಾನಕ್ಕೆ ಕುಸಿದಿದ್ದಾರೆ.
56 ವರ್ಷದ ಪೆಪ್ಸಿಕೋ ಸಿಇಒ ಇಂದ್ರಾ ನೂಯಿ ಅವರನ್ನು ಸೂಪರ್ ಸಿಇಒ ಎಂದೇ ಕರೆಯಲಾಗಿದ್ದು, ಪೆಪ್ಸಿ ನಿವ್ವಳ ಆದಾಯ ಶೇ 14 ರಷ್ಟು ಏರಿಕೆ ಕಂಡಿದ್ದು 66 ಬಿಲಿಯನ್ ಡಾಲರ್ ಗಳಿಸಿದೆ.
ಮೊದಲ ಬಾರಿಗೆ ಪಟ್ಟಿಯಲ್ಲಿ 16 ಜನ ಮಹಿಳೆಯರು ಪ್ರವೇಶಿಸಿದ್ದಾರೆ. ಅವರಲ್ಲಿ ಗಾಯಕಿ ಜೆನ್ನಿಫರ್ ಲೋಪೇಜ್, ರಾಜಕಾರಣಿ ಮಿಚೆಲ್ ಬಾಕಾಮನ್, ಎಚ್ ಪಿ ಸಂಸ್ಥೆಯ ಮೆಗ್ ವೈಟ್ ಮನ್ ಹಾಗೂ ಗೂಗಲ್ ಸಿಇಒ ಮಾರಿಸ್ಸಾ ಮೇಯರ್ ಪ್ರಮುಖರು












Click it and Unblock the Notifications