ಬಿಕಿನಿ ನೀರೆಯರೊಂದಿಗೆ ಯುಕೆ ರಾಜಕುಮಾರ ಹ್ಯಾರಿ!

ಬಣ್ಣಬಣ್ಣದ ತುಂಡುಡುಗೆಗಳನ್ನು ತೊಟ್ಟಿದ್ದ ಹಲವಾರು ಹುಡುಗಿಯರ ಜೊತೆ ಎಮ್‌ಜಿಎಮ್ ಗ್ಯಾಂಡ್ ಹೋಟೆಲ್ ಮತ್ತು ಕ್ಯಾಸನೋದಲ್ಲಿರುವ ವೆಟ್ ರಿಪಬ್ಲಿಕ್ ಅಲ್ಟ್ರಾ ಪೂಲ್‌ನಲ್ಲಿ ಹ್ಯಾರಿ ಕಾಣಿಸಿಕೊಂಡಿದ್ದಾರೆ. ಆ ಹುಡುಗಿಯರಲ್ಲಿ ಓಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಬಾಳೆದಿಂಡಿನಂತಹ ಅನೇಕ ಸುರಸುಂದರಾಂಗಿನಿಯರೂ ಅಲ್ಲಿದ್ದರು ಎಂದು ದಿ ಡೈಲಿ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಟಾಪ್ಲೆಸ್ ಆಗಿದ್ದ ಹ್ಯಾರಿ ಹುಡುಗಿಯರ ಜೊತೆ ಪಾರ್ಟಿಯಲ್ಲಿ ಕಾಕ್ ಟೇಲ್ ಹೀರುತ್ತ, ಈಜುಗೊಳದಲ್ಲಿ ಸಖತ್ತಾಗಿ ಸರಸವಾಡಿದ್ದಾನೆ. ಆತ ತಾನೊಬ್ಬ ರಾಜಕುಮಾರ ಎಂಬಂತೆ ವರ್ತಿಸುತ್ತಲೇ ಇರಲಿಲ್ಲ. ಅತ್ಯಂತ ಸಾಮಾನ್ಯ ಮನುಷ್ಯನಂತೆ ಎಲ್ಲ ಹುಡುಗಿಯರೊಂದಿಗೆ ಬೆರೆಯುತ್ತ, ಕುಣಿದಾಡುತ್ತಿದ್ದ ಎಂದು ಅಲ್ಲಿದ್ದ ಅತಿಥಿಯೊಬ್ಬರು ಹೇಳಿದ್ದಾರೆ.
ಅಷ್ಟೊಂದು ಸುಂದರ ತರುಣಿಯರಿದ್ದರೂ ಹ್ಯಾರಿ ಯಾರೊಂದಿಗೂ ಅಸಭ್ಯವಾಗಿ ವರ್ತಿಸಲಿಲ್ಲ. ಕೆಲವರು ಬಂದು ಆತನ ಆಟೋಗ್ರಾಫ್ ಪಡೆದರು, ಫೋಟೋ ತೆಗೆಸಿಕೊಂಡರು. ಅಲ್ಲಿ ಓಲಿಂಪಿಕ್ಸ್ 400 ಮೀ. ಮೆಡ್ಲೆ ಚಾಂಪಿಯನ್ ರಯನ್ ಲಾಚ್ ಕೂಡ ಇದ್ದರು. ಈಜುಗೊಳದಲ್ಲಿ ಆಕೆಯೊಂದಿಗೆ ಹ್ಯಾರಿ ಹಾರಿ ಸ್ಪರ್ಧೆಯನ್ನೂ ಗೆದ್ದುಬಿಟ್ಟನಂತೆ.












Click it and Unblock the Notifications