ಮಂಡ್ಯ ಅಪಘಾತ: ಇನ್ನೋವಾದಲ್ಲಿದ್ದ 5 ಮಂದಿ ಸಾವು

ದುರ್ದೈವಿ ಕುಟುಂಬದವರು ಕೇರಳದಿಂದ ಬೆಂಗಳೂರಿನ ಏರ್ ಪೋರ್ಟಿಗೆ ಕಾರಿನಲ್ಲಿ ಬರುತ್ತಿದ್ದರು. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇಬ್ಬರು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮೃತರಾದರು.
ಮೃತಪಟ್ಟವರನ್ನು ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರು ನಿವಾಸಿಗಳಾದ ಅಬ್ಬಾಸ್ (45), ಷರೀಫಾ (62), ಆಯೇಷಾ (50), ಜಾಫರ್ (25) ಹಾಗೂ ಕಾರು ಚಾಲಕ ಜಾಬೀರ್ (30) ಎಂದು ಗುರುತಿಸಲಾಗಿದೆ.
ಕಾರಿನಲ್ಲಿದ್ದ ನಾಲ್ವರು ಮಕ್ಕಳಿಗೂ ಗಾಯಗಳಾಗಿದ್ದು, ಅವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಇನ್ನೋವಾ ಕಾರಿನಲ್ಲಿ ಮೈಸೂರು ಮೂಲಕ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರೆನ್ನಲಾಗಿದೆ.












Click it and Unblock the Notifications