ಟ್ಯೂಷನ್ನಿಗೆ ಬಂದವಳಿಗೆ ಗರ್ಭದಾನ: ಟೀಚರ್ ಬಂಧನ

student-becomes-pregnant-kasargod-tuition-teacher-held
ಕಾಸರಗೋಡು, ಆ.21:ಅಪ್ರಾಪ್ತ ವಯಸ್ಸಿನ ಆರು ಬಾಲಕಿಯರನ್ನು ಲೈಂಗಿಕವಾಗಿ ಗೋಳುಹೊಯ್ಡುಕೊಂಡ ಮತ್ತು ಅವರಲ್ಲೊಬ್ಬ ಬಾಲಕಿಯನ್ನು ಗರ್ಭವತಿಯಾಗಿಸಿದ ಆರೋಪದ ಮೇಲೆ ಇಲ್ಲಿನ ಕಾಂಞ ಗಾಡ್ ಬಳಿಯಿರುವ ಟ್ಯೂಶನ್ ಕೇಂದ್ರದ ಶಿಕ್ಷಕ ಕಮ್ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ನಿನ್ನೆ (ಆ. 20) ಬಂಧಿಸಿದ್ದಾರೆ.

ಬಲ್ಲಾ ಕಡಪುದ ಮಹಮ್ಮದ್ ಅಸ್ಗರ್ (23) ಬಂಧಿತ ವ್ಯಕ್ತಿ. ಈತ ಪೆರಿಯಾರಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿದ್ದು, 'ಛಾಪ್ಟರ್' ಹೆಸರಿನ ಟ್ಯೂಶನ್ ಕೇಂದ್ರದಲ್ಲಿ ಶಿಕ್ಷಕನಾಗಿಯೂ ಕಾರ್ಯನಿರ್ವಹಿಸುತ್ತಾನೆ.

ಹೊಸದುರ್ಗದ ಇನ್ಸ್ ಪೆಕ್ಟರ್ ಕೆವಿ ವೇಣುಗೋಪಾಲ್ ಅವರು ಸೋಮವಾರ ಬೆಳಗ್ಗೆ ಮಹಮ್ಮದ್ ಅಸ್ಗರನನ್ನು ಬಂಧಿಸಿದ್ದಾರೆ. 'ಛಾಪ್ಟರ್' ಟ್ಯೂಶನ್ ಕೇಂದ್ರಕ್ಕೆ ಬರುತ್ತಿದ್ದ 14 ರಿಂದ 16 ವರ್ಷ ಬಾಲಕಿಯರಿಗೆ ಮಹಮ್ಮದ್ ಲೈಂಗಿಕ ಕಿರುಕುಳ ನೀಡಿದ್ದಾನೆ. ಅವರಲ್ಲಿ ಒಬ್ಬ ಬಾಲಕಿ ಗರ್ಭವತಿಯೂ ಆಗಿದ್ದಾಳೆ ಎಂದು ಇನ್ಸ್ ಪೆಕ್ಟರ್ ವೇಣುಗೋಪಾಲ್ ತಿಳಿಸಿದ್ದಾರೆ.

ವೈದ್ಯಕೀಯ ವಿದ್ಯಾರ್ಥಿಯಾಗಿರುವ ಮಹಮ್ಮದ್ ಅಸ್ಗರ್ 'ಛಾಪ್ಟರ್' ಟ್ಯೂಶನ್ ಕೇಂದ್ರದಲ್ಲಿ ಪ್ರತಿ ಭಾನುವಾರ ಕ್ಲಾಸುಗಳನ್ನು ತೆಗೆದುಕೊಳ್ಳುತ್ತಿದ್ದ. ಆ ವೇಳೆ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ. ಇದರ ವಿರುದ್ಧ ಬಾಧಿತ ಬಾಲಕಿಯೊಬ್ಬಳು ಪೊಲೀಸರಿಗೆ ದೂರು ನೀಡಿದಾಗ ಮೊಹಮದ ಕಾಮ ವೃತ್ತಾಂತ ಬಯಲಾಗಿದೆ.

ಇನ್ನೂ ಅನೇಕ ಬಾಲಕಿಯರು ಇವನ ಕಾಮತೃಷೆಗೆ ಬಲಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಹಮ್ಮದ್ ಅಸ್ಗರ್ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+