ಇಪಿಎಫ್ಓ ಮಾಸಿಕ ಪಿಂಚಣಿ 1000 ರು.ಗೆ ಏರಿಕೆ

Employees Provident Fund Organisation (EPFO)
ನವದೆಹಲಿ, ಆ.21: ಉದ್ಯೋಗ ಭವಿಷ್ಯ ನಿಧಿ ಯೋಜನೆ(ಇಪಿಎಫ್‌ಓ)ಯ ಚಂದಾದಾರರಿಗೆ ನಿವೃತ್ತಿಯ ಬಳಿಕ ಕನಿಷ್ಠ 1 ಸಾವಿರ ರು.ಗಳ ಮಾಸಿಕ ಪಿಂಚಣಿ ದೊರೆಯುವಂತೆ ಮಾಡುವ ಪ್ರಸ್ತಾವಕ್ಕೆ ಕೇಂದ್ರ ಹಣಕಾಸು ಸಚಿವಾಲಯ ಅಸ್ತು ಎಂದು ಅಂಕಿತ ಹಾಕಿದೆ. ಆದರೆ, 30-40 ವರ್ಷ ದುಡಿದ ಒಬ್ಬ ವ್ಯಕ್ತಿಗೆ ಮಾಸಿಕ 1000 ರು ಜೀವನೋಪಾಯಕ್ಕೆ ಸಾಕುತ್ತದೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ.

ಇಪಿಎಫ್‌ಓ ಚಂದಾದಾರರು ಕನಿಷ್ಠ 1 ಸಾವಿರ ರೂ. ಪಿಂಚಣಿಯನ್ನು ನಿಗದಿಪಡಿಸುವ ಪ್ರಸ್ತಾಪವನ್ನು ಕಾರ್ಮಿಕ ಸಚಿವಾಲಯವು ವಿತ್ತ ಸಚಿವಾಲಯಕ್ಕೆ ಕಳುಹಿಸಿತ್ತು. ಇಪಿಎಫ್‌ಗೆ ಉದ್ಯೋಗಿಗಳು ಪಾವತಿಸುವ ಮೊತ್ತವನ್ನು ಪರಿಗಣಿಸದೆಯೇ ಅವರಿಗೆ ಕನಿಷ್ಠ 1 ಸಾವಿರ ರೂ.ಗಳ ಪಿಂಚಣಿಯನ್ನು ನಿಗದಿಪಡಿಸಲಾಗಿದೆ.

20 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಇಪಿಎಫ್ ಚಂದಾದಾರರಿಗೆ ನೀಡಲಾಗುವ ಎರಡು ವರ್ಷಗಳ ಬೋನಸನ್ನು ಹಿಂಪಡೆದು, ಅವರಿಗೆ 1 ಸಾವಿರ ರೂ.ಗಳ ಕನಿಷ್ಠ ಪಿಂಚಣಿಯನ್ನು ನಿಗದಿಪಡಿಸಲಾಗಿದೆ.

ಇದರಿಂದ ಪ್ರತಿ ವರ್ಷವೂ 539 ಕೋಟಿ ರೂ.ಗಳ ಹೆಚ್ಚುವರಿ ಹಣವನ್ನು ಒದಗಿಸಲು ತಯಾರಿರಬೇಕೆಂಬ ಕಾರ್ಮಿಕ ಸಚಿವಾಲಯವು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ)ಗೆ ಶಿಫಾರಸು ಮಾಡಿತ್ತು. ಪ್ರಸ್ತುತ 20 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಇಪಿಎಫ್ ಚಂದಾದಾರರಿಗೆ ಹೆಚ್ಚುವರಿ ಎರಡು ವರ್ಷಗಳ ಬೋನಸ್ ನೀಡಲಾಗುತ್ತಿದೆ.

ಇಪಿಎಫ್‌ಓ ಮೂಲಗಳ ಪ್ರಕಾರ ಒಂದು ವೇಳೆ ಎರಡು ವರ್ಷಗಳ ಬೋನಸ್ ಯೋಜನೆಯನ್ನು ಹಿಂದೆಗೆದುಕೊಂಡಲ್ಲಿ, ಚಂದಾದಾರರಿಗೆ ಕನಿಷ್ಠ 1 ಸಾವಿರ ರೂ.ಗಳ ಪಿಂಚಣಿ ನೀಡುವ ಯೋಜನೆಗೆ ಚಾಲನೆ ದೊರೆ ಯಲಿದೆ. 2010, ಮಾರ್ಚ್ 31ರ ಅಂಕಿ ಅಂಶಗಳ ಪ್ರಕಾರ, ಒಟ್ಟು 35 ಲಕ್ಷ ಇಪಿಎಫ್ ಪಿಂಚಣಿದಾರರ ಪೈಕಿ 14 ಲಕ್ಷದಷ್ಟು ಮಂದಿ 500 ರೂ.ಗಿಂತಲೂ ಕಡಿಮೆ ಪಿಂಚಣಿಯನ್ನು ಪಡೆಯುತ್ತಿದ್ದಾರೆ.

ಇನ್ನು ಕೆಲವು ನಿದರ್ಶನಗಳಲ್ಲಿ ಕೆಲವರು ಮಾಸಿಕ ಪಿಂಚಣಿ ರೂಪದಲ್ಲಿ ರು.12 ಹಾಗೂ ರು.38 ಪಡೆಯುತ್ತಿದ್ದಾರೆ. ಇದೇ ಮಾಹಿತಿಯನ್ನು ಪರಿಗಣಿಸಿ ತಿರುವನಂತಪುರದ ಸಂಸದ ಶಶಿ ತರೂರ್ ಅವರು ಲೋಕಸಭೆಯಲ್ಲಿ ಕನಿಷ್ಠ ಪಿಂಚಣಿ ಹೆಚ್ಚಳ ಮಾಡುವಂತೆ ಆಗ್ರಹಿಸಿದ್ದರು. 40 ವರ್ಷ ಸೇವೆ ಸಲ್ಲಿಸಿದವರು ತಿಂಗಳಿಗೆ 550 ರು. ಮಾತ್ರ ಪಡೆಯುತ್ತಿರುವ ನಿದರ್ಶನಗಳಿದೆ. ಇಪಿಎಫ್ ಅಡಿಯಲ್ಲಿ ಕನಿಷ್ಠ ಮಾಸಿಕ ಪಿಂಚಣಿಯನ್ನು 5,500 ರು.ಗಳಿಗೆ ಏರಿಸಬೇಕು ಎಂದು ಆಗ್ರಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+