ದೆಹಲಿಯಲ್ಲಿ ವೇಶ್ಯಾವಾಟಿಕೆ : ಕರ್ನಾಟಕದ ನಾಲ್ವರ ರಕ್ಷಣೆ

ಈ ಹುಡುಗಿಯರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿದೆ ಎಂದು ಓರ್ವ ಹುಡುಗಿಯಿಂದ ಮಾಹಿತಿ ದೊರೆತ ಕೂಡಲೆ ಜಿಬಿ ರಸ್ತೆಯಲ್ಲಿರುವ ಮಾಂಸದಡ್ಡೆಯ ಮೇಲೆ ದಾಳಿ ಮಾಡಿದ ಕಮಲಾ ನಗರದ ಪೊಲೀಸರು ಕರ್ನಾಟಕದಿಂದ ಮಾರಾಟ ಮಾಡಲಾಗಿದ್ದ ಹುಡುಗಿಯರನ್ನು ಪಾರು ಮಾಡಿದರು.
ಅತ್ಯಂತ ಬಡ ಕುಟುಂಬದಿಂದ ಬಂದಿದ್ದಾರೆ ಎಂದು ಹೇಳಲಾಗಿರುವ ಈ ಹುಡುಗಿಯರನ್ನು ಕೆಲಸ ಕೊಡಿಸುವ ಆಮಿಷ ತೋರಿಸಿ ವ್ಯಕ್ತಿಯೊಬ್ಬ ದೆಹಲಿಗೆ ಕರೆತಂದಿದ್ದ. ಮಾಂಸದಡ್ಡೆ ನಡೆಸುತ್ತಿರುವ ವರ್ಷಾ ಎಂಬಾಕೆಗೆ ಆ ವ್ಯಕ್ತಿ ಈ ನಾಲ್ವರು ಹುಡುಗಿಯರನ್ನು ಮಾರಾಟ ಮಾಡಿದ್ದ.
ತಾವು ಅಪಾಯಕ್ಕೆ ಸಿಲುಕಿರುವುದು ತಿಳಿಯುತ್ತಿದ್ದಂತೆ ಅವಲ್ಲಿನ ಒಬ್ಬ ಹುಡುಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ಘಟನೆಯಲ್ಲಿ ಮಾಂಸದಂಧೆ ನಡೆಸುತ್ತಿದ್ದ ವರ್ಷಾ (40) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರು ಹುಡುಗಿಯರ ಜೊತೆ ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದ ಇನ್ನೂ ಅನೇಕ ಹುಡುಗಿಯರನ್ನು ಪಾರು ಮಾಡಲಾಗಿದೆ.












Click it and Unblock the Notifications