ಸ್ವಾತಂತ್ರ್ಯದ ಸಿಹಿ ಹಂಚಿದ ಪಾಕ್ ಸೇನೆಯಿಂದ ಗುಂಡು

ಪಾಕಿಸ್ತಾನದ ರೇಂಜರುಗಳು ಭಾರತೀಯ ಗಡಿ ಪಡೆಯತ್ತ (BSF) ಸಾಂಬಾ ಸೆಕ್ಟರ್ ಬಳಿ ಮಧ್ಯಾಹ್ನ 3.30ರ ವೇಳೆಯಲ್ಲಿ ಈ ಗುಂಡಿನ ಮಳೆಗೆರೆದಿದ್ದಾರೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ. ಕಳೆದ 11 ದಿನಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಕದನ ವಿರಾಮ ಉಲ್ಲಂಘಿಸಿ, ಪಾಕ್ ಪಡೆಗಳು 17ನೆಯ ಬಾರಿಗೆ ಗುಂಡಿನ ದಾಳಿ ನಡೆಸಿದ್ದಾರೆ.
'ಸಾಂಬಾ ಅಂತಾರಾಷ್ಟ್ರೀಯ ಗಡಿಯಲ್ಲಿ ಪನ್ಸಾರ್ ಬಳಿಯಿರುವ ಗಡಿ ಹೊರಠಾಣೆಯ (BoP) ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆದಿದೆ. ಆಗಾಗ ಈ ಗುಂಡಿನ ಮೊರೆತ ಕೇಳಿಬರುತ್ತಿದ್ದಂತೆ ಪ್ರತಿಯಾಗಿ ನಮ್ಮ ಪಡೆಗಳೂ ಗುಂಡಿನ ದಾಳಿ ನಡೆಸಿದರು. ಇದರಿಂದ ಪಾಕಿಸ್ತಾನದ ಗುಂಡಿನ ಸದ್ದಡಗಿಸಲಾಯಿತು' ಎಂದು ಹಿರಿಯ BSF ಅಧಿಕಾರಿಯೊಬ್ಬರು ಹೇಳಿದ್ದಾರೆ.
ಖೇದದ ವಿಷಯವೆಂದರೆ ಭಾರತ-ಪಾಕ್ ಗಡಿಯಲ್ಲಿ ಸ್ವಾತಂತ್ರ್ಯದ ಸಿಹಿ ಹಂಚಿಕೆಯಾದ ಕೆಲವೇ ಗಂಟೆಗಳಲ್ಲಿ ಈ ಅಪ್ರಚೋದಿತ ದಾಳಿ ನಡೆದಿದೆ. Pak Ranger ಗಳು ಇಲ್ಲಿನ ಶೂನ್ಯದ ಗಡಿಯವರೆಗೂ ನಡೆದು ಬಂದು, ತಾವು ಹೊತ್ತು ತಂದಿದ್ದ ಸಿಹಿ ಮತ್ತು ಕಾಣಿಕೆಗಳನ್ನು BSF ಯೋಧರಿಗೆ ವಿತರಿಸಿ, ಶುಭಾಶಯ ಕೋರಿದ್ದರು. ಭಾರತೀಯ ಪಡೆಗಳು ಇದಕ್ಕೆ ಸ್ಪಂದಿಸಿ, ಪಾಕ್ ಸ್ವಾತಂತ್ರ್ಯಕ್ಕೆ ಶುಭಾಶಯ ಕೋರಿದ್ದರು.












Click it and Unblock the Notifications