ನಿಮ್ಮ ರಕ್ತ ಯಾವ ಗುಂಪಿಗೆ ಸೇರಿದ್ದು ತಿಳಿದುಕೊಳ್ಳಿ

blood-group-type-determine-risk-of-heart-disease-study
ಲಂಡನ್, ಆ. 16: ಹೌದು ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ನಿಮ್ಮ ರಕ್ತದ ಗುಂಪು ಯಾವುದು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಏಕೆಂದರೆ ನಿಮ್ಮ ರಕ್ತ ಯಾವ ಗುಂಪಿನದು ಎಂಬುದರ ಆಧಾರದ ಮೇಲೆ ನಿಮ್ಮ ಆರೋಗ್ಯ ಹೇಗೆ? ನೀವೆಷ್ಟು ಆರೋಗ್ಯವಂತರು? ಅದರಲ್ಲೂ ನಿಮ್ಮ ಹೃದಯ ಎಷ್ಟು ಆರೋಗ್ಯಪೂರ್ಣವಾಗಿದೆ ಎಂಬುದನ್ನು ನಿರ್ಧರಿಸಬಹುದು ಎನ್ನುತ್ತಿದೆ ತಾಜಾ ಸಮೀಕ್ಷಾ ವರದಿಯೊಂದು.

ಯಾರಿಗೇ ಆಗಲಿ ಕಾಯಿಲೆ ತೀವ್ರವಾಗುತ್ತಿದ್ದಂತೆ ಯಾವುದಕ್ಕೇ ಆಗಲಿ ಮೊದಲು ರಕ್ತ ಪರೀಕ್ಷೆ ಮಾಡಿಸಿಬಿಡಿ ಎನ್ನುತ್ತಾರೆ ವೈದ್ಯರು. ಏಕೆಂದರೆ ಹಲವು ಕಾಯಿಲೆಗಳು ದೇಹವನ್ನು ವ್ಯಾಪಿಸುವುದು ಈ ರಕ್ತದ ಮೂಲಕವೇ. ಆದ್ದರಿಂದ ನಮ್ಮ ದೇಹದಲ್ಲಿ ಸಂಚರಿಸುತ್ತಿರುವ ಈ ರಕ್ತದ ಬಗ್ಗೆ ಆದ್ಯವಾಗಿ ತಿಳಿದುಕೊಳ್ಳುವುದು ಕ್ಷೇಮಕರ. ಅಮೆರಿಕದ ವೈದ್ಯಲೋಕ ನಡೆಸಿದ ಸಮೀಕ್ಷೆಯ್ನು ಆಧರಿಸಿ ಹಾರ್ವರ್ಡ್ ಯೂನಿವರ್ಸಿಟಿ ಸಂಶೋಧಕರು ಬರೆದಿರುವ ಷರಾ ಹೀಗಿದೆ:

o+ve ಅಥವಾ o-ve ರಕ್ತ ಮಾದರಿ ಹೊಂದಿದವರಿಗಿಂತ A ಅಥವಾ B ರಕ್ತ ಮಾದರಿಯನ್ನು ಹೊಂದಿರುವವರು ಬಹಳ ಬೇಗನೆ ಹೃದಯ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಅದರಲ್ಲೂ A ಮತ್ತು B ರಕ್ತ ಮಾದರಿಗಿಂತ AB ರಕ್ತ ಗುಂಪಿನವರಿಗೆ ಹೃದಯ ವ್ಯಾದಿ ಕಾಡುವ ಸಂಭವ ಜಾಸ್ತಿ. AB ರಕ್ತ ಮಾದರಿ ಹೊಂದಿರುವವರು ಶೇ. 23 ರಷ್ಟು ಹೃದಯ ಕಾಯಿಲೆಗೆ ತುತ್ತಾಗುವ ಸಾಧ್ಯತೆಯಿದ್ದರೆ B -ve ಅಥವಾ B +ve ಗುಂಪಿನವರಿಗೆ ಶೇ. 11ರಷ್ಟಿರುತ್ತದೆ. ಇನ್ನು, A -ve ಅಥವಾ A +ve ಗುಂಪಿನವರಿಗೆ ಶೇ. 5ರಷ್ಟು ಹೃದಯ ಕಾಯಿಲೆ ಬರುವ ಸಾಧ್ಯತೆಯಿರುತ್ತದೆ.

ಆದರೆ ಮೂರೂ ಮಾದರಿಯ ರಕ್ತ ಗುಂಪಿನವರಿಗಿಂತ o+ve ಅಥವಾ o-ve ರಕ್ತದವರು ಅದೃಷ್ಟವಂತರು ಎಂದು ಹೇಳಬಹುದು. ಏಕೆಂದರೆ ಇವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಬರುವುದು ಕಮ್ಮಿ.

ಏಕೆಂದರೆ A, B ಅಥವಾ AB ರಕ್ತಕ್ಕಿಂತ o+ve ಮತ್ತು o-ve ಗುಂಪಿನ ರಕ್ತ ಪರಿಚಲನೆ ಸರಾಗವಾಗಿರುತ್ತದೆ. ಜತೆಗೆ, ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಪ್ರಮಾಣವೂ ತೀರಾ ಕಡಿಮೆಯಾಗಿರುತ್ತದೆ.

ಇಲ್ಲಿ ಗಮನಿಸಲೇಬೇಕಾದ ಒಂದಷ್ಟು ಸಂಗತಿಗಳು ಇವೆ: ಏನಪಾ ಅಂದರೆ, ರಕ್ತದ ಮಾದರಿ ಹುಟ್ಟಿನಿಂದಲೇ ಬರುವಂತಹುದು. ಅದನ್ನು ಬದಲಾಯಿಸಲು ಸಾಧ್ಯವಾಗದು. ಹೃದಯ ಸಮಸ್ಯೆಗಳನ್ನು ಒಂದಷ್ಟು ಅರ್ಥ ಮಾಡಿಕೊಳ್ಳಲು ಇದು ದಾರಿದೀಪವಾಗಲಿದೆ.

ಆದಾಗ್ಯೂ, ಉತ್ತಮ ಆಹಾರ ಸೇವನೆ, ಧೂಮಪಾನ, ಮದ್ಯಪಾನದಂತಹ ಅಭ್ಯಾಸಗಳನ್ನು ಅಂಟಿಸಿಕೊಳ್ಳದೆ ಉತ್ತಮ ಜೀವನ ಕ್ರಮ ರೂಪಿಸಿಕೊಂಡರೆ ಹೃದಯ ಸಂಬಂಧಿ ಕಾಯಿಲೆಯಿಂದ ದೂರವಿರಬಹುದು ಎನ್ನುತ್ತಾರೆ ವೈದ್ಯರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+