ಕಾಂಡೋಮ್ ಬಳಕೆಯಲ್ಲಿ ಆಂಧ್ರ ಪ್ರದೇಶದ ನಾಗಾಲೋಟ

andhra-pradesh-men-use-record-5-point-5-cr-condoms
ಹೈದರಾಬಾದ್, ಆ.16: ಮೊನ್ನೆ ಮೊಬೈಲ್ ಬಳಕೆಯಲ್ಲಿ ದೇಶದಲ್ಲೇ ಅಗ್ರಗಣ್ಯ ಸ್ಥಾನ ಸಂಪಾದಿಸಿದ್ದ ನೆರೆಯ ಆಂಧ್ರ ಪ್ರದೇಶ ಈಗ ಕಾಂಡೋಮ್ ಬಳಕೆಯಲ್ಲಿ ನಾಗಾಲೋಟದಲ್ಲಿದೆ.

ಪ್ರಸಕ್ತ ಸಾಲಿನ ಆರಂಭದ ಐದು ತಿಂಗಳಲ್ಲಿ ಆಂಧ್ರಪ್ರದೇಶದಲ್ಲಿ 5.5 ಕೋಟಿ ಕಾಂಡೋಮ್‌ಗಳು ಭರ್ಜರಿಯಾಗಿ ಮಾರಾಟವಾಗಿವೆ. ಆಂಧ್ರಪ್ರದೇಶ ಏಡ್ಸ್ ನಿಯಂತ್ರಣ ಸೊಸೈಟಿ ಮತ್ತು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಜಂಟಿಯಾಗಿ ನಡೆಸಿದ ಸಮೀಕ್ಷೆಯಿಂದ ಈ ಅಂಶ ಬಹಿರಂಗವಾಗಿದೆ.

ಆಂಧ್ರದ ಈ ವಿನೂತನ ದಾಖಲೆ ಬರೆದಿರುವ ಆಂಧ್ರ ಪುರುಷರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ APSACS ಮತ್ತು NACO, ಕೇವಲ 5 ತಿಂಗಳಲ್ಲಿ ರಾಜ್ಯದಲ್ಲಿ ಇಷ್ಟೊಂದು ಕಾಂಡೋಮ್‌ಗಳು ಖರ್ಚಾಗಿರುವುದು ಹೆಚ್‌ಐವಿ -ಏಡ್ಸ್ ಕುರಿತು ಜನರಲ್ಲಿ ಮೂಡುತ್ತಿರುವ ಜಾಗೃತಿಗೆ ಸಾಕ್ಷಿಯಾಗಿದೆ ಎಂದು ಸಂತಸಪಟ್ಟಿದೆ.

ಆಂಧ್ರದ ತುರ್ತು ಅಗತ್ಯವನ್ನು ಮನಗಂಡು ಸದ್ಯದಲ್ಲೇ ಮತ್ತಷ್ಟು ಕಾಂಡೋಮ್‌ಗಳನ್ನು ಸರಬರಾಜು ಮಾಡುವುದಾಗಿ NACO ತಿಳಿಸಿದೆ. ಲೈಂಗಿಕ ಕಾರ್ಯಕರ್ತರು ಮತ್ತು ಟ್ರಕ್ ಚಾಲಕರಲ್ಲಿ ಕಾಂಡೋಮ್ ಬಳಕೆ ಪ್ರಮಾಣ ಹೆಚ್ಚಾಗಿರುವುದು ಏಡ್ಸ್ ತಡೆಗಟ್ಟುವ ನಿಟ್ಟಿನಲ್ಲಿ ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು APSACS ಜಂಟಿ ನಿರ್ದೇಶಕ ಡಾ. ಪಿ.ಎಲ್. ಜಯಚಂದ್ರ ರೆಡ್ಡಿ ತಿಳಿಸಿದ್ದಾರೆ.

ಪ್ರತಿವರ್ಷ NACO ರಾಜ್ಯಕ್ಕೆ ಪೂರೈಕೆ ಮಾಡುವ 10.5 ಕೋಟಿ ಕಾಂಡೋಮ್‌ಗಳಲ್ಲಿ, ಸದ್ಯ 5 ಕೋಟಿ ಮಾತ್ರ ಉಳಿದಿವೆ. ರಾಜ್ಯಕ್ಕೆ ಅವಶ್ಯವಿರುವ ಹೆಚ್ಚುವರಿ ಕಾಂಡೋಮ್ ಪೂರೈಸುವಂತೆ ಎನ್‌ಎಸಿಒ ಮತ್ತು ಅಕ್ಕಪಕ್ಕದ ರಾಜ್ಯಗಳಿಗೆ ಮನವಿ ಮಾಡಲಾಗಿದೆ ಎಂದು ರೆಡ್ಡಿ ಹೇಳಿದ್ದಾರೆ.

ಬೇಸರದ ಸಂಗತಿಯೆಂದರೆ ಆಂಧ್ರದಲ್ಲಿ ಒಟ್ಟು 5 ಲಕ್ಷ ಮಂದಿ ಎಚ್‌ಐವಿ ಸೋಂಕಿನಿಂದ ಬಳಲುತ್ತಿದ್ದಾರೆ. ಇವರಲ್ಲಿ 2.8 ಲಕ್ಷ ಪುರುಷರು ಮತ್ತು 2.2 ಲಕ್ಷ ಮಹಿಳೆಯರು ಇದ್ದಾರೆ. ದೇಶದಲ್ಲಿ ಅತಿ ಹೆಚ್ಚು ಕಾಂಡೋಮ್‌ಗಳು ಖರ್ಚಾಗುವುದು ಅನುಕ್ರಮವಾಗಿ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರದಲ್ಲಿ. ಇದೀಗ ಆಂಧ್ರ 2ನೆಯ ಸ್ಥಾನಕ್ಕೆ ಜಿಗಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+