7.3ರ ಭೂಕಂಪ: ರಷ್ಯಾ, ಜಪಾನ್ ದ್ವೀಪಗಳಲ್ಲಿ ನಡುಕ
ಹೊನ್ಷು,
ಆ. 14: ಸ್ಥಳೀಯ ಕಾಲಮಾನದ ಪ್ರಕಾರ ಮಂಗಳವಾರ ಮಧ್ಯಾಹ್ನ 1 ಗಂಟೆಯಲ್ಲಿ ಪೂರ್ವ ರಷ್ಯಾದ ದ್ವೀಪ ಪ್ರದೇಶಗಳು ಭೂಕಂಪದಿಂದ ನಡುಗಿವೆ. 7.3 ಪ್ರಮಾಣದ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭಶಾಸ್ತ್ರ ಇಲಾಖೆ ತಿಳಿಸಿದೆ. id="toptextpromo">ಆದರೆ
ಈ ಭೂಕಂಪದಿಂದ ಯಾವುದೇ ಅನಾಹುತ ಸಂಭವಿಸಿದ ಘಟನೆಗಳು ಸದ್ಯಕ್ಕೆ ವರದಿಯಾಗಿಲ್ಲ. ಮತ್ತು ಸುನಾಮಿ ಎಚ್ಚರಿಕೆಯನ್ನೂ ನೀಡಿಲ್ಲ. ರಷ್ಯಾದ ಪೊರೊನಾಸ್ಕ್ ಪೂರ್ವಕ್ಕೆ 100 ಕಿಮೀ ದೂರದಲ್ಲಿ ಪೆಸೆಫಿಕ್ ಸಾಗರದಲ್ಲಿ 388 ಮೈಲು ಆಳದಲ್ಲಿ 7.3 ಪ್ರಮಾಣದ ಈ ಭೂಕಂಪನ ಕೇಂದ್ರೀಕೃತವಾಗಿತ್ತು ಎಂದು ತಿಳಿದುಬಂದಿದೆ. id='are-slot-1' class='oiad oi-axt oiadv'> id='top-searched-articles'>ಇದೇ
ಕಾಲದಲ್ಲಿ ಜಪಾನಿನಲ್ಲಿ ಹೊನ್ಷು ಮತ್ತು ಹೊಕ್ಕಾಯ್ಡೊ ದ್ವೀಪಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ಭೂಮಿ ನಡುಗಿದೆ. ಇದರಿಂದ ತಕ್ಷಣಕ್ಕೆ ಸುನಾಮಿ ಎಚ್ಚರಿಕೆ ಸಂದೇಶ ನೀಡಲಾಗಿಲ್ಲ ಎಂದು ಜಪಾನಿನ ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.











Click it and Unblock the Notifications