ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವೂ ತಿರುಪತಿ ತಿಮ್ಮಪ್ಪನ ಹುಂಡಿ ಹಣ ಎಣಿಸಬೇಕೆ?

|
Google Oneindia Kannada News

TTD launched Parakamani Srivari Seva
ತಿರುಪತಿ, ಆ 14: ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ವಾಸವಿರುವ ಕೇಂದ್ರ ಹಾಗೂ ರಾಜ್ಯ ಸರಕಾರ, ರಾಷ್ಟ್ರೀಕೃತ ಬ್ಯಾಂಕ್ ಉದ್ಯೋಗಿಗಳು, ನಿವೃತ್ತ ಬ್ಯಾಂಕ್ ಉದ್ಯೋಗಿಗಳು ಮತ್ತು ಸರಕಾರದ ಅಧೀನದ ವಿಮಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ತಿರುಪತಿ ತಿಮ್ಮಪ್ಪನ ಹುಂಡಿಯ ದುಡ್ಡನ್ನು ಎಣಿಸಬಹುದಾದ ಹೊಸ ಯೋಜನೆಯೊಂದನ್ನು ತಿರುಪತಿ ತಿರುಮಲ ಟ್ರಸ್ಟ್ ಜಾರಿಗೆ ತಂದಿದೆ. ಈ ಸೇವೆ ಇದೇ 17ರಿಂದ ಆರಂಭವಾಗಲಿದೆ.

ಈ ಸೇವೆಗೆ 'ಪರಕಾಮಣಿ ಶ್ರೀವಾರಿ ಸೇವಾ' ಎಂದು ಹೆಸರಿಡಲಾಗಿದೆ. ಈ ಅವಕಾಶವನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಮೊದಲು ಟಿಟಿಡಿ (ತಿರುಪತಿ ತಿರುಮಲ ದೇವಸ್ಥಾನಂ) ಸಂಸ್ಥೆಯ ವೆಬ್ ಸೈಟ್ ನಲ್ಲಿ ಆನ್ ಲೈನ್ ಅರ್ಜಿಯನ್ನು ತುಂಬಬೇಕು. ಅದರಲ್ಲಿ ತಮ್ಮತಮ್ಮ ಭಾವಚಿತ್ರ, ಸ್ವವಿವರ, ಇಮೇಲ್ ವಿಳಾಸ, ಗುರುತಿನ ಚೀಟಿಯ ಸ್ಕ್ಯಾನ್ ಕಾಪಿ, ದೂರವಾಣಿ ಸಂಖ್ಯೆಯ ಸಂಪೂರ್ಣ ಮಾಹಿತಿ ನೀಡಬೇಕು.

ಅದಾದ ಮೇಲೆ ಟಿಟಿಡಿ ಒಂದು ಕೋಡ್ ನಂಬರ್ ಅನ್ನು ನೀಡುತ್ತದೆ. ಆ ಸಂಖ್ಯೆಯ ಆಧಾರದ ಮೇಲೆ ಕೆಲವೇ ದಿನಗಗಳಲ್ಲಿ ಈ ಸೇವೆ ಮಾಡಲು ಬೇಕಾಗಿರುವ ಗುರುತಿನ ಚೀಟಿಯನ್ನು ಅಭ್ಯರ್ಥಿಗಳ ವಿಳಾಸಕ್ಕೆ ಕಳುಹಿಸುತ್ತಾರೆ. ಅಭ್ಯರ್ಥಿಗಳ ಸೂಕ್ತವಾದ ದಿನದಂದು ಅಥವಾ ಟಿಟಿಡಿ ಸೂಚಿಸಿದ ದಿನದಂದು ಸಪ್ತಗಿರಿ ವಾಸ, ಅಷ್ಟೈಶ್ವರ್ಯಗಳ ಒಡೆಯ ತಿರುಪತಿ ತಿಮ್ಮಪ್ಪನ ಹುಂಡಿಯ ಹಣ ಎಣಿಸೋ ಆಸೆಯನ್ನು ಅಥವಾ ಸೇವೆಯನ್ನು ಪೂರೈಸಿಕೊಳ್ಳಬಹುದು.

ತಿರುಪತಿ ಬಸ್ ನಿಲ್ದಾಣದ ಬಳಿಯ ಸಂಸ್ಥೆಯ ಕಚೇರಿಗೆ ತೆರಳಿ ಗುರುತಿನ ಚೀಟಿ ಮತ್ತು ಸ್ಪಷ್ಟ ಮಾಹಿತಿಯನ್ನು ಒದಗಿಸಿ ಮತ್ತೊಮ್ಮೆ ನೊಂದಾಯಿಸಬೇಕು.

ಈ ಸೇವೆಗೆ ಯಾರು ಅರ್ಹರು?
1. ದಕ್ಷಿಣ ಭಾರತದ ವಾಸಿಗಳು ಮಾತ್ರ.
2. ಕೇವಲ ಪುರುಷರು
3. 35 ರಿಂದ 65 ವಯೋಮಿತಿಯುಳ್ಳ ಹಿಂದೂಗಳು
4. ಅಸ್ತಮಾ, ಬೆನ್ನುನೋವು ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ.

ಈ ಹಣ ಎಣಿಸುವ ಪ್ರಕ್ರಿಯೆಗೆ ಸೋಮವಾರದಿಂದ ಗುರುವಾರದವರೆಗೆ ನಾಲ್ಕು ದಿನ, ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನ ಎಂದು ವಿಭಾಗಿಸಲಾಗಿದೆ. ಅಭ್ಯರ್ಥಿಗಳು ಒಂದು ದಿನದ ಮೊದಲು ಹೆಸರು ನೋಂದಾಯಿಸಬೇಕು. ಈ ಸೇವೆ ಮಾಡಿದ ಅಭ್ಯರ್ಥಿಗಳಿಗೆ ಟಿಟಿಡಿ ವತಿಯಿಂದ ವಿಶೇಷ ದರ್ಶನ ಮತ್ತು ಮೂರು ಲಡ್ಡು ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ: www.tirumala.org

English summary
The Tirumala Tirupati Devasthanams (TTD) launched unique Parakamani Srivari Seva service for devotees who can register for it online on the TTD website. This seva will commence in Srivari temple from August 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X