ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲ್ಲೂರು ದೇವಾಯಲದಲ್ಲಿ ಕಲ್ಲಡ್ಕ ಭಟ್ಟರಿಂದ ಅವ್ಯವಹಾರ?

|
Google Oneindia Kannada News

Prabhakara Bhat involved in Kolluru temple scam
ಉಡುಪಿ, ಆ 9: ಕರಾವಳಿ ಭಾಗದ ಸಜ್ಜನ ರಾಜಕಾರಿಣಿ ಎಂದೇ ಬಿಂಬಿತರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಸಚಿವಗಿರಿ ತಪ್ಪಿಹೋಗಲು ಕಲ್ಲಡ್ಕ ಪ್ರಭಾಕರ ಭಟ್ಟರೇ ಕಾರಣ ಎನ್ನುವ ಕೂಗಿನ ಬೆನ್ನಲ್ಲೇ ಜಿಲ್ಲೆಯ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆದಿದ್ದು ಅದಕ್ಕೆ ಭಟ್ಟರೇ ಕಾರಣ ಎನ್ನುವ ಆಪಾದನೆಗಳು ಕೇಳಿ ಬಂದಿವೆ.

ಸರಕಾರಕ್ಕೆ ಭರ್ಜರಿ ಆದಾಯ ತಂದು ಕೊಡುವ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ಪೈಕಿ ಮೂರನೇ ಶ್ರೀಮಂತ ದೇವಾಲಯವಾಗಿರುವ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯಲ್ಲಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರದ ಬಗ್ಗೆ ಈ ಹಿಂದೆ ಕೂಡಾ ಸುದ್ದಿ ಹರಡಿತ್ತು. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ದೇವಾಲಯಗಳ ಆಡಳಿತ ಭಟ್ಟರ ಅಣತಿಯಂತೆ ನಡೆಯುತ್ತದೆ.

ಕೊಲ್ಲೂರು ದೇವಾಯಲದಲ್ಲಿ ಮೂಲಭೂತ ಸೌಕರ್ಯಗಳಿಗೆ ಕೊರತೆಯಾಗಿದ್ದು. ಭಕ್ತಾದಿಗಳು ತೊಂದರೆ ಅನುಭವಿಸುತ್ತಿದ್ದಾರೆ.ಕೋಟ್ಯಂತರ ರೂಪಾಯಿ ಆದಾಯವಿರುವ ಈ ದೇವಾಲಯದಲ್ಲಿ ಅವ್ಯವಹಾರ ನಡೆಯುತ್ತಿದ್ದು ಸರಕಾರ ಕಣ್ಣು ಮುಚ್ಚಿ ಕೂತಿದೆ.

ಈ ಎಲ್ಲಾ ಅವ್ಯವಹಾರಗಳಲ್ಲಿ ಕಲ್ಲಡ್ಕ ಭಟ್ಟರ ನೇರ ಕೈವಾಡವಿದೆ ಎಂದು ಕ್ಷೇತ್ರದ ಮಾಜಿ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಆರೋಪಿಸಿದ್ದಾರೆ.

ಕರಾವಳಿಯ ಅವಳಿ ಜಿಲ್ಲೆಗಳಲ್ಲಿ ಪ್ರಭಾಕರ ಭಟ್ಟರು ಸುಮಾರು ನೂರು ಕೋಟಿಯ ಚಿರಾಸ್ಥಿಯನ್ನು ಹೊಂದಿದ್ದಾರೆ. ಪ್ರಭಾವಿ ಮುಖಂಡರಾದ ಅವರನ್ನು ಸರಕಾರ ಪ್ರಶ್ತ್ನಿಸುತ್ತಿಲ್ಲ. ತಾಯಿಯ ಸನ್ನಿಧಿಯಲ್ಲಿ ಕ್ಷೇತ್ರದ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ ಎಂದು ಅಪ್ಪಣ್ಣ ಹೆಗ್ಡೆ, ಪ್ರಭಾಕರ ಭಟ್ಟರ ಮೇಲೆ ನೇರ ಆರೋಪ ಮಾಡಿದ್ದಾರೆ.

ಪ್ರಚೋದನಾಕಾರಿ ಭಾಷಣ, ಕಲ್ಲಡ್ಕ ಭಟ್ಟರಿಗೆ ಹೈಕೋರ್ಟ್ ನೋಟೀಸ್: ಪ್ರಚೋದನಾಕಾರಿ ಭಾಷಣ ಮಾಡಿ, ಕೋಮು ಸೌಹಾರ್ದತೆ ಕದಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘ-ಪರಿವಾರದ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರಿಗೆ ಹೈಕೋರ್ಟ್‌ ಬುಧವಾರ (ಆ 8) ನೋಟಿಸ್‌ ಜಾರಿ ಮಾಡಿದೆ.

ಉಪ್ಪಿನಂಗಡಿಯಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಎಫ್ಐಆರ್‌ ದಾಖಲಿಸಿದ ಪೊಲೀಸರು, ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ರಾಜ್ಯ ಕೋಮು ಸೌಹಾರ್ದ ವೇದಿಕೆ ಮಂಗಳೂರು ಜಿಲ್ಲಾಧ್ಯಕ್ಷ ಸುರೇಶ್‌ ಭಟ್‌ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು.

English summary
The temple admin in Kolluru Mokkambika temple has come under sharp criticisms by the former trustee Appanna Hegde. He alleges Kalladka Prabhakara Bhat for the shady deals in the third most richest temple in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X