'ನಿತ್ಯಾನಂದ ಶಿಷ್ಯ 4 ವರ್ಷ ನನ್ನ ರೇಪ್ ಮಾಡಿದ'

ಹೀಗೆ ನಿತ್ಯಾನಂದ ಸ್ವಾಮಿಯ ಶಿಷ್ಯೋತ್ತಮನ ವಿರುದ್ಧ ನಾಲ್ಕು ವರ್ಷಗಳ ಅತ್ಯಾಚಾರದ ವಿರುದ್ಧ ತಡವಾಗಿ ದೂರಿರುವ ಮತ್ಯಾರೂ ಅಲ್ಲ ಅದೇ ನಿತ್ಯಾನಂದ ಸ್ವಾಮಿಯ ಪರಮ ಭಕ್ತೆ. ಅಮೆರಿಕದಲ್ಲಿರುವ 32 ವರ್ಷದ ಈ ಅನಿವಾಸಿ ಭಾರತೀಯ ಶಿಷ್ಯೆ 37 ವರ್ಷದ ವೈದ್ಯ, ನಿತ್ಯಾನಂದ ಸ್ವಾಮಿಯ ಭಕ್ತ, ಭಾರತೀಯ ಮೂಲದ ವಿಕ್ರಮ್ ದ್ರಾವಿಡ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾರೆ.
ಬಾಧಿತ ಶಿಷ್ಯೆ ಕೊಲಾಬಾ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಿಸಿದ್ದಾರೆ. ಬಾಧಿತ ಶಿಷ್ಯೋತ್ತಮಳು ದೂರಿನಲ್ಲಿ ಹೀಗೆ ಹೇಳಿಕೊಂಡಿದ್ದಾಳೆ: 2008ರ ಮಾರ್ಚಿನಲ್ಲಿ ದ್ರಾವಿಡ್ ನನ್ನ ತಲೆಕೆಡಿಸಿದ. ಅವನು ಮದುವೆಯಾಗಿದ್ದರೂ ತನ್ನೊಂದಿಗೆ ಸಂಭೋಗಕ್ಕೆ ಬಾ ಎಂದು ಪುಸಲಾಯಿಸಿದ. ತಾನು ಶಿವ, ನಾನು ಪಾರ್ವತಿ ಅನ್ನುತ್ತಿದ್ದ.
ನನಗೆ ಸಾಫ್ಟ್ ಡ್ರಿಂಕ್ಸ್ ಕೊಡುವಾಗಲೆಲ್ಲ ಅದರಲ್ಲಿ ಮತ್ತು ಬರಿಸುವ ಪದಾರ್ಥ ಬೆರೆಸುತ್ತಿದ್ದ. ನನಗೋ ಏನಾಗುತ್ತಿದೆ ಎಂದೇ ತಿಳಿಯುತ್ತಿರಲಿಲ್ಲ. ಆದರೆ ಅವನು ರೇಪ್ ಮಾಡಿಬಿಡುತ್ತಿದ್ದ. ಹೀಗೆ ದ್ರಾವಿಡ್ ನಿರಂತರವಾಗಿ ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದ.
ಈ ಇಬ್ಬರೂ ಲಾಸ್ ಏಂಜಲೀಸ್ ನಗರದಲ್ಲಿರುವ ನಿತ್ಯಾನಂದ ಆಶ್ರಮಕ್ಕೆ ಸತತವಾಗಿ ಭೇಟಿ ನೀಡುತ್ತಿದ್ದ ನಿತ್ಯಾನಂಧ ಭಕ್ತರು. ಆರೋಪಿಯು ಹೀಗೆ 2009ರವರೆಗೂ ಬಾಧಿತ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಆರೋಪಿ ದ್ರಾವಿಡನನ್ನು ಬಂಧಿಸಿ, ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದೆವು. ಆರೋಪಿಗೆ ಕೋರ್ಟ್ ಆಗಸ್ಟ್ 10ರವರೆಗೂ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ಕೊಲಾಬಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಂಜೀವ್ ರಾವ್ ಮಾಂಡಲೀಕ್ ತಿಳಿಸಿದ್ದಾರೆ.












Click it and Unblock the Notifications