ನರೇಂದ್ರ ಮೋದಿ ಯೂಟ್ಯೂಬ್ ನೇರ ಸಂದರ್ಶನ ಆ.24ಕ್ಕೆ

gujarat-cm-modi-live-youtube-chat-on-august-24
ಅಹಮದಾಬಾದ್, ಆ. 8: ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಇದೇ ಆಗಸ್ಟ್ 24ರಂದು ಯೂಟ್ಯೂಬ್ (Youtube) ನೇರ ಸಂದರ್ಶನದಲ್ಲಿ ನೆಟ್ಟಿಗರ ಜತೆ ಜಾಲಾಡಲಿದ್ದಾರೆ. Youtube ಮುಖಾಂತರ Google+ video chat ನಲ್ಲಿ ನೆಟ್ಟಿಗರ ಮೂಖಾಮುಖಿ ಮಾತುಕತೆ ನಡೆಸಬಹುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Google+ ಮೂಲಕ ಗರಿಷ್ಠ 10 ಮಂದಿಯ ಜತೆ ವಿಡಿಯೋ ಮಾತುಕತೆ ನಡೆಸಬಹುದು. ಈ ಹಿಂದೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಜೂಲಿಯಾ ಗಿಲಾರ್ಡ್ ಸೇರಿದಂತೆ ಕೆಲವೇ ಮಂದಿ ವಿಶ್ವ ನಾಯಕರು ಇಂತಹ ಸಂಪರ್ಕ ಸೇತುವೆಯನ್ನು ಬೆಸೆದಿದ್ದಾರೆ.

'Strong and Glorious India' ಮತ್ತು 'Be the youth of Swami Vivekananda's dreams!' ಮುಂತಾದ ವಿಷಯಗಳ ಕುರಿತು ಮೋದಿ ಜತೆ ಮಾತನಾಡಬಹುದು ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆಯಲ್ಲಿ ಕೋರಲಾಗಿದೆ. ಆದರೆ ಅದಕ್ಕೂ ಮುನ್ನ ಅಂದರೆ ಆಗಸ್ಟ್ 13 ರೊಳಗಾಗಿ ವಿಡಿಯೋ ಅಥವಾ ಟೆಕ್ಸ್ಟ್ ಮೂಲಕ ಪ್ರಶ್ನೆಗಳನ್ನು ಕಳಿಹಿಸಬಹುದಾಗಿದೆ.

ಈ ಹಂತದಲ್ಲಿ ಪ್ರಶ್ನೆಗಳನ್ನು ಆಯ್ಕೆಯಾಗಲಿದೆ. ಬಳಿಕ ಆಯ್ದ ಪ್ರಶ್ನೆ ಕೇಳಿದ ಮಂದಿಯನ್ನು ಮುಖ್ಯಮಂತ್ರಿ ನರೇಂದ್ರ ಮೋದಿ ಜತೆಗಿನ ಅಂತಿಮ ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

ಟ್ವಿಟ್ಟರ್ (8 ಲಕ್ಷ) ಮತ್ತು ಫೇಸ್ ಬುಕ್ (5 ಲಕ್ಷ) ಅಂತರ್ಜಾಲ ವೇದಿಕೆಗಳ ಮೂಲಕ ಮುಖ್ಯಮಂತ್ರಿ ನರೇಂದ್ರ ಮೋದಿ ಈಗಾಗಲೇ ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಎರಡು ತಿಂಗಳ ಹಿಂದೆ ಚಾಲ್ತಿಗೆ ಬಂದ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ Google+ ಖಾತೆ ಸುಮಾರು 1 ಲಕ್ಷ followerಗಳನ್ನು ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+