ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಥಿಯೇಟರಿನಲ್ಲಿ ಬಾಲಕಿಯ ರೇಪ್: ಯುವಕನ ಸೆರೆ

By Srinath
|
Google Oneindia Kannada News

girl-molested-in-theater-youth-aziz-held-jaipur
ಜೈಪುರ, ಆ.7: ಥಿಯೇಟರಿನಲ್ಲಿ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ 22 ವರ್ಷದ ಯುವಕನನ್ನು ಸಂಗನೇರಿನಲ್ಲಿ ಸೋಮವಾರ ಬಂಧಿಸಲಾಗಿದೆ.

ಪೊಲೀಸರ ಪ್ರಕಾರ ಬಾಧಿತ ಬಾಲಕಿ ಮತ್ತು ಆರೋಪಿ ಅಜೀಜ್ ಅಹಮದ್ ಇಬ್ಬರೂ ಮಾಲಾಪುರ ರಸ್ತೆಯ ನಿವಾಸಿಗಳು. ಬಹಳಷ್ಟು ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಿತರು. ಮೊನ್ನೆ ಭಾನುವಾರವಾದ್ದರಿಂದ ಅಜೀಜ್ ಬಾಲಕಿಯನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗಿದ್ದಾನೆ.

ಸಿನಿಮಾ ನೋಡುತ್ತಿದ್ದಾಗ ಸನಿಹದಲ್ಲೇ ಖಾಲಿಬಿದ್ದಿದ್ದ ಬಾಕ್ಸ್ ಸೀಟುಗಳು ಮೇಲೆ ಅಜೀಜ್ ಕಣ್ಣುಬಿದ್ದಿದೆ. ತಡಮಾಡದೆ, ಖಾಲಿ ಸೀಟುಗಳ ಮೇಲೆ ಕುಳಿತು ಪಿಕ್ಚರ್ ನೋಡೋಣ ಬಾ ಎಂದು ಬಾಲಕಿಯನ್ನು ಪುಸಲಾಯಿಸಿದ್ದಾನೆ. ಸರಿ ಆ ಬಾಲಕಿಯೂ ಅಜೀಜನ ಆಣತಿಯಂತೆ ಅಲ್ಲಿಗೆ ಎದ್ದುಹೋಗಿದ್ದಾಳೆ.

ಖಾಲಿ ಸೀಟಿನ ಬಳಿ ಬಾಲಕಿ ಎದ್ದು ಹೋಗುತ್ತಿದ್ದಂತೆ ಅವಳನ್ನು ಹಿಂಬಾಲಿಸಿದ ಅಜೀಜ್ ಹಿಂದಿನಿಂದ ಆಕೆಯನ್ನು ಆವರಿಸಿ, ಅತ್ಯಾಚಾರವೆಸಗಿದ್ದಾನೆ. ಅದಾಗುತ್ತಿದ್ದಂತೆ ಅಜೀಜ್ ತನ್ನ ಪಾಡಿಗೆ ತಾನು ಥೇಟರಿನಿಂದ ಎದ್ದುಹೋಗಿದ್ದಾನೆ.

ಬಾಲಕಿಯೂ ಮನೆಗೆ ಮರಳಿದ್ದಾಳೆ. ಮನೆಗೆ ಬಂದವಳೆ ಪೋಷಕರಿಗೆ ನಡೆದ ಘಟನೆಯ ಬಗ್ಗೆ ಹೇಳಿದ್ದಾಳೆ. ಆಘಾತಕ್ಕೊಳಗಾದ ಬಾಲಕಿಯ ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ, ದೂರು ದಾಖಲಿಸಿದ್ದಾರೆ.

ಭಾನುವಾರವೇ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿದ ಪೊಲೀಸರು ಸೋಮವಾರ ಆರೋಪಿ ಅಜೀಜನನ್ನು ಬಂಧಿಸಿದ್ದಾರೆ. ಸೂಕ್ರ ಕ್ರಮ ಕೈಗೊಳ್ಳುವುದಾಗಿ ಸಂಗನೇರಿನ ಪೊಲೀಸ್ ಉಪಾಯುಕ್ತ ರಾಜೇಶ್ ಮೀಲ್ ತಿಳಿಸಿದ್ದಾರೆ.

English summary
Girl molested in theater youth held Jaipur. Jaipur Police arrested a 22 year old youth Aziz Ahmed for allegedly raping a 16-year-old girl in Sanganer on Monday. On Sunday, Aziz took the girl out for a movie. During the movie, Aziz overpowered her and molested her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X