ಇನ್ನೊಂದು ಪಂದ್ಯ ಗೆದ್ದರೆ ಬಾಕ್ಸರ್ ಮೇರಿಗೆ ಪದಕ

ಮಹಿಳಾ ಬಾಕ್ಸಿಂಗ್ ನ 51 ಕೆಜಿ ಫ್ಲೈವೇಟ್ ವಿಭಾಗದ ಪ್ರಿಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಮೇರಿ ಅವರು ಪೋಲೆಂಡ್ ನ ಕ್ಯಾರೊಲಿನಾ ಮಿಚಾಲ್ ಜುಕ್ ಅವರನ್ನು 19-14ರ ಅಂತರದಲ್ಲಿ ಸೋಲಿಸಿದ್ದಾರೆ. ಮಿಚಾಲ್ ಜುಕ್ ವಿರುದ್ಧ ಜಯ ಗಳಿಸಿದ ನಂತರ ಸೋಮವಾರ(ಆ.6) ಸಂಜೆ ನಡೆಯಲಿರುವ ಕ್ವಾಟರ್ ಫೈನಲ್ ನಲ್ಲಿ ಟುನೀಶಿಯಾದ ಮರೊವು ರಾಹಿಲ್ ವಿರುದ್ಧ ಸೆಣಸಲಿದ್ದಾರೆ.
ಸಂಭ್ರಮ, ದುಃಖ: ಇಂದು ನನ್ನ ಅವಳಿ ಗಂಡು ಮಕ್ಕಳ ಹುಟ್ಟು ಹಬ್ಬ, ಅವರ ಜತೆಯಲ್ಲಿ ಸಂಭ್ರಮ ಆಚರಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಇಲ್ಲಿ ಭಾರತಕ್ಕಾಗಿ ನಾನು ಕಣಕ್ಕಿಳಿದು ಉತ್ತಮ ಹೋರಾಟ ನಡೆಸಿದ ತೃಪ್ತಿ ಇದೆ ಎಂದು ಮೇರಿ ಕೋಮ್ ಹೇಳಿದ್ದಾರೆ.
ಮೊದಲ ಸುತ್ತಿನಲ್ಲಿ 3-3 ಸಮಬಲದ ಹೋರಾಟ ನಡೆದಿತ್ತು, 2ನೇ ಸುತ್ತಿನಲ್ಲಿ ಮೇರಿ 8-7ರಲ್ಲಿ ಮೇಲುಗೈ ಸಾಧಿಸಿದರು. 3ನೇ ಸುತ್ತಿನಲ್ಲಿ ಚುರುಕಿನ ಆಟ ಪ್ರದರ್ಶಿಸಿ ಎದುರಾಳಿಗೆ ಸಕತ್ ಪಂಚ್ ನೀಡಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.
46 ಹಾಗೂ 48 ಕೆಜಿ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿರುವ ಮೇರಿ ಕೋಮ್ ಅವರು ಈ ಬಾರಿ ಮಹಿಳಾ ಬಾಕ್ಸಿಂಗ್ ನ 51 ಕೆಜಿ ಫ್ಲೈವೇಟ್ ವಿಭಾಗದ ಪ್ರಿಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ಅವರು ಪೋಲೆಂಡ್ ನ ಕ್ಯಾರೊಲಿನಾ ಮಿಚಾಲ್ ಜುಕ್ ಅವರ ವಿರುದ್ಧ ಸೆಣಸಲಿದ್ದಾರೆ.
2 ಮಕ್ಕಳ ತಾಯಿ 29 ವರ್ಷದ ತಾಯಿ ಮೇರಿ ಕೋಮ್ ಅವರು 2 ಪಂದ್ಯ ಗೆದ್ದರೆ ಪದಕ ಖಾತ್ರಿಯಾಗಲಿದೆ. 46,48 ಕೆಜಿ ವಿಭಾಗದಲ್ಲಿ ವಿಶ್ವ ಹಾಗೂ ಏಷ್ಯನ್ ಚಾಂಪಿಯನ್ ಆಗಿದ್ದರು. ಒಲಿಂಪಿಕ್ಸ್ ನಲ್ಲಿ ಈ ಎರಡು ವಿಭಾಗ ಇಲ್ಲದ ಕಾರಣ 51 ಕೆಜಿ ವಿಭಾಗ ಸ್ಪರ್ಧಿಸುತ್ತಿದ್ದಾರೆ.
ಭಾರತದ ಬಾಕ್ಸಿಂಗ್ ಕ್ಷೇತ್ರದಲ್ಲಿ "Magnificent Mary", ಎಂದೇ ಕರೆಯಲ್ಪಡುವ ಮೇರಿ ಅವರಿಗೆ ಒಲಿಂಪಿಕ್ಸ್ ಗೆ ಪ್ರವೇಶಕ್ಕೂ ಮುನ್ನ ಭಾರಿ ಹಿನ್ನಡೆ ಉಂಟಾಗಿತ್ತು. ಮೇರಿ ಅವರಿಗೆ ತರಬೇತಿ ನೀಡುತ್ತಿರುವ ಅಮೆರಿಕ ಕೋಚ್ ಚಾರ್ಲ್ಸ್ ಅಟ್ಕಿಸನ್ ನೆರವಿಲ್ಲದೆ ಮೇರಿ ಕಣಕ್ಕಿಳಿಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ಸ್ ಕೋಚ್ ಗಳಿಗೆ ನೀಡುವ 3 ಸ್ಟಾರ್ ಪ್ರಮಾಣಪತ್ರ ಹೊಂದಿಲ್ಲದ ಕಾರಣ ಅವರಿಗೆ ಒಲಿಂಪಿಕ್ಸ್ ಗ್ರಾಮಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಹೀಗಾಗಿ ಕೋಚ್ ನೆರವಿಲ್ಲದೆ ಏಕಾಂಗಿಯಾಗಿ ಮೇರಿ ಕೋಮ್ ತರಬೇತಿ ಹೊಂದುತ್ತಿದ್ದಾರೆ.












Click it and Unblock the Notifications