ಅಥ್ಲೀಟ್ ಚಿನ್ನ ಗೆದ್ದರೆ ಬೆತ್ತಲಾಗುತ್ತೇನೆ : ಗೆಹ್ನಾ

ಇತ್ತೀಚೆಗೆ ಬಿಕಿನಿ ಫೋಟೋ ಶೂಟ್ ವಿವಾದದಲ್ಲಿ ಸಕತ್ ಪೆಟ್ಟು ತಿಂದರೂ ಗೆಹ್ನಾಗೆ ಬುದ್ಧಿ ಬಂದ ಹಾಗೆ ಕಾಣುತ್ತಿಲ್ಲ. ಲಂಡನ್ ಒಲಿಂಪಿಕ್ಸ್ ನಲ್ಲಿ ಯಾರಾದರೂ ಅಥ್ಲೀಟ್ ಗಳು ಚಿನ್ನದ ಪದಕ ಗೆದ್ದರೆ ನಾನು ನನ್ನ ಬಟ್ಟೆ ಕಳಚಿ ಬೆತ್ತಲಾಗಿ ನಿಲ್ಲುತ್ತೇನೆ ಎಂದು ಗೆಹ್ನಾ ಘೋಷಿಸಿದ್ದಾಳೆ.
'ಚೀರ್ ಲೀಡರ್ಸ್ ಗಳು ಹೇಗೆ ಆಟಗಾರರಿಗೆ ಸ್ಫೂರ್ತಿ ತುಂಬುತ್ತಾರೋ ಅದೇ ರೀತಿ ನಾನು ಚಿನ್ನ ಗೆದ್ದ ಆಟಗಾರರಿಗೆ ಸ್ಫೂರ್ತಿ ತುಂಬಲು ಈ ನಿರ್ಧಾರ ಕೈಗೊಂಡಿದ್ದೇನೆ. ಭಾರತಕ್ಕೆ ಚಿನ್ನದ ಪದಕ ಬಂದರೆ ನಾನು ಖಂಡಿತಾ ಬೆತ್ತಲಾಗುತ್ತೇನೆ' ಎಂದು ಗೆಹ್ನಾ ಹೇಳಿದ್ದಾರೆ.
ಗೆಹ್ನಾ ಆಸೆ ಕೈಗೂಡುವ ಲಕ್ಷಣಗಳು ಕ್ಷೀಣಿಸುತ್ತಿದ್ದು, ಒಲಿಂಪಿಕ್ಸ್ ಆರಂಭದಲ್ಲೇ ಗೆಹ್ನಾ ಈ ರೀತಿ ಘೋಷಿಸಿದ್ದರೆ ಆಟಗಾರರಿಗೆ ಹೆಚ್ಚಿನ ಹುರುಪು ಸಿಗುತ್ತಿತ್ತೋ ಏನೋ. ಸೈನಾ ಕಂಚಿಗೆ ತೃಪ್ತಿ ಪಟ್ಟರೆ, ವಿಜಯ್ ಕುಮಾರ್ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡಿದ್ದಾರೆ. ಗಗನ್ ನಾರಂಗ್ ಕೂಡಾ ಕಂಚಿಗೆ ತೃಪ್ತಿ ಹೊಂದಿದ್ದಾರೆ. ಹೀಗಾಗಿ ಬಾಕ್ಸರ್ ಗಳು ಅಥವಾ ಇನ್ಯಾವುದೋ ಸ್ಪರ್ಧೆಗಳಲ್ಲಿ ಪದಕ ನಿರೀಕ್ಷೆ ಇಟ್ಟುಕೊಳ್ಳಬಹುದು.
ವಿಜೇಂದರ್, ಮೇರಿ ಕೋಮ್ ಚಿನ್ನ ಗೆದ್ದರೆ ಅಥವಾ ಕುಸ್ತಿ ಪಟು ಸುಶೀಲ್ ಕುಮಾರ್ ವಿಕ್ರಮ ಸಾಧಿಸಿ ಪದಕ ಕೊರಳಿಗೇರಿಸಿಕೊಳ್ಳುತ್ತಿದ್ದಂತೆ ಗೆಹ್ನಾ ಮೈಮೇಲಿಂದ ಬಟ್ಟೆ ಜಾರುತ್ತದೆ.
ನಮ್ಮ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪದ ಹೊತ್ತಿದ್ದ ಗೆಹ್ನಾ ಮೇಲೆ ಸರಿ ಸುಮಾರು 20 ರಿಂದ 25 ಮಂದಿ ಏಕಾಏಕಿ ದಾಳಿ ನಡೆಸಿದ್ದರು. ಮಾರಣಾಂತಿಕ ಹಲ್ಲೆಗೆ ಒಳಗಾಗಿರುವ ಈಕೆ ಈಗ ಚಿಕಿತ್ಸೆ ಪಡೆದು ಹೊರ ಬಿದ್ದ ಕೆಲ ದಿನಗಳಲ್ಲೇ ಈ ರೀತಿ ಹೇಳಿಕೆ ನೀಡಿದ್ದಾರೆ.












Click it and Unblock the Notifications