ಕೆಎಂಎಫ್ ಸೋಮಶೇಖರ ರೆಡ್ಡಿ ಎಲ್ಲೇ ಇದ್ದರೂ ಬಂಧನ

'ತಾವು ಕರ್ನಾಟಕದ ಘನತೆವೆತ್ತ ಶಾಸಕರು. ಅದರಲ್ಲೂ ಬಿಜೆಪಿಯ ಶಾಸಕರು. ಈ ಮಧ್ಯೆ ಬಿಜೆಪಿ ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪೂರಕ ಬಜೆಟ್ ಗೆ ಅನುಮೋದನೆ ಕೋರಿರುವುದರಿಂದ ಪಕ್ಷವು ಬಿಜೆಪಿ ಶಾಸಕರಿಗೆಲ್ಲ ವಿಪ್ ನೀಡಿದೆ. ಹಾಗಾಗಿ ವಿಧಾನಸಭೆಯಲ್ಲಿ ತಮ್ಮ ಉಪಸ್ಥಿತಿ ಅತ್ಯಂತ ಜರೂರಾಗಿದೆ. ಹಾಗಾಗಿಯೇ ACB ಮುಂದೆ ಗೈರು ಹಾಜರಾಗುತ್ತಿರುವುದಾಗಿ' ನೆಪ ಹೇಳುತ್ತಿರುವ ಬಳ್ಳಾರಿಯ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿಯನ್ನು ಕಂಡಲ್ಲಿ ವಶಕ್ಕೆ ತೆಗೆದುಕೊಳ್ಳಲು ACB ನಿರ್ಧರಿಸಿದೆ.
ಅದರೊಂದಿಗೆ ಬಹುಶಃ ಸದ್ಯಕ್ಕೆ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನೂ ಬಂಧಿಸಿದಂತಾಗುತ್ತದೆ. ಏಕೆಂದರೆ ಪ್ರಕರಣದಲ್ಲಿ ಬಂಧನವಾಗದೆ ಉಳಿದಿರುವ ಏಕೈಕ ಆರೋಪಿ ಅಂದರೆ ಸೋಮಶೇಖರ ರೆಡ್ಡಿ ಮಾತ್ರವೇ. ಅಂದಹಾಗೆ ನಿನ್ನೆ ಸಂಜೆ ನಾಟಕೀಯ ಬೆಳವಣಿಗೆಯೊಂದರಲ್ಲಿ ACB ಪೊಲೀಸರು ಶಾಸಕ ಕಂಪ್ಲಿ ಬಾಬುವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ಕಂಪ್ಲಿ ಬಾಬು ಜೈಲುಪಾಲಾಗುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಸದ್ಯಕ್ಕೆ ಈ ಪ್ರಕರಣಗಳಲ್ಲಿ ನ್ಯಾಯಾಲಯಗಳ ಪರಿಸ್ಥಿತಿ ಹೇಗಿದೆಯೆಂದರೆ...
'ಒಂದು ವೇಳೆ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದರೆ, ಆರೋಪಿ ಜಾಮೀನಿಗೆ ಅರ್ಹವಾಗಿದ್ದರೂ ಇಲ್ಲದ ಊಸಾಬರಿ ನಮಗ್ಯಾಕೆ ಎಂದು ಆರೋಪಿಗಳು ಒಂದಷ್ಟು ದಿನ ಜೈಲಿನಲ್ಲಿರಲಿ ಬಿಡಿ. ಹೋಗೋದೇನು?' ಎಂಬ ತೀರ್ಮಾನಕ್ಕೆ ಕೋರ್ಟುಗಳು ಬಂದಂತಿವೆ. 'ಆಮೇಲೆ ಪ್ರಕರಣವು ಒಂದು ತಾರ್ಕಿಕ ಅಂತ್ಯಕ್ಕೆ ಬಂದಾಗ ನೋಡಿಕೊಂಡರಾಯಿತು. ಈಗ ಸುಮ್ಮ ಸುಮ್ಮನೆ ಜಾಮೀನು ನೀಡುವುದು... ಆ ಮೇಲೆ, ದುಡ್ ತಗೊಂಡು ಜಾಮೀನು ಕೊಟ್ಟವ್ರೆ ಅನ್ನಿಸಿಕೊಂಡು ಈಗಾಗಲೇ ಜೈಲಿನಲ್ಲಿರುವ ಮೂವರು ಮಹಾಮಹಿಮ ಜಡ್ಜುಗಳ ಪಕ್ಕದ ಜೈಲಿನಲ್ಲಿ ನಾವೇಕೆ ಬಂಧಿಯಾಗಬೇಕು' ಎಂಬ ತೀರ್ಮಾನಕ್ಕೆ ಬಂದಂತಿದೆ ಈ ACB, CBI ಕೋರ್ಟುಗಳು.
ಮತ್ತೆ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ವಿಷಯಕ್ಕೆ ಬರುವುದಾದರೆ ಅವರ ಬಂಧನ ಈಗಾಗಲೇ ವಿಳಂಬವಾಗಿದೆಯಾದರೂ ಸಮಯ ಸಾಧಿಸಿ, ಆತನನ್ನು ಪ್ರಕರಣದಲ್ಲಿ 10ನೆಯವರಾಗಿ ಬಂಧಿಸಲು ACB ಸಜ್ಜಾಗಿದೆ. ಏಕೆಂದರೆ... ಪ್ರಕರಣದ A1 ಆರೋಪಿ ಲಂಚ ತಿಂದು ಜಾಮೀನು ನೀಡಿದ ಜಡ್ಜ್ ಪಟ್ಟಾಭಿ. ಹಾಗೆಯೇ, ಅಷ್ಟೇ ಗುರುತರ ಆರೋಪವಿರುವುದು ಲಂಚ ನೀಡಿದ ವ್ಯಕ್ತಿಯ ಮೇಲೆ. ACB ಮೂಲಗಳ ಪ್ರಕಾರ ಈ ಅಷ್ಟೂ ಲಂಚದ ಹಣವನ್ನು ಹೊಂದಿಸಿದ್ದು ಕೆಎಂಎಫ್ ಸೋಮಶೇಖರ ರೆಡ್ಡಿ. ಈ ನೆಲದ ಕಾನೂನು ಏನು ಹೇಳುತ್ತದೆ ಅಂದರೆ - ಲಂಚ ತೆಗೆದುಕೊಳ್ಳುವುದು ಮತ್ತು ಲಂಚ ನೀಡುವುದು ಸಮಾನ ಅಪರಾಧಗಳು.
ಸದ್ಯಕ್ಕೆ ಸೋಮಶೇಖರ ರೆಡ್ಡಿ ACB ಕಣ್ಣಿಗೆ ಬೀಳದೆ ತಲೆಮರೆಸಿಕೊಂಡಿದ್ದಾರೆ. ಹಾಗೆ ನೋಡಿದರೆ ಕಂಪ್ಲಿ ಬಾಬು ಮತ್ತು ಶಾಸಕ ಸೋಮಶೇಖರ ರೆಡ್ಡಿ ಇಬ್ಬರೂ ಮರೆಯಾಗಿದ್ದರು. ಆದರೆ ತಂತ್ರ ಬದಲಿಸಿದ ಶಾಸಕ ಸೋಮಶೇಖರ ರೆಡ್ಡಿ ಮೊದಲು ಕಂಪ್ಲಿ ಬಾಬುಗೆ ಶರಣಾಗುವಂತೆ ಸೂಚಿಸಿದ್ದಾರೆ. ಅವರ ಬಂಧನವಾದ ತಕ್ಷಣ ಏನೆಲ್ಲ ಬೆಳವಣಿಗೆಗಳಾಗುತ್ತದೋ ನೋಡಿಕೊಂಡು ತಾನೂ ಶರಣಾಗುವುದು ಆತನ ಲೆಕ್ಕಾಚಾರವಾದಂತಿದೆ.
ಅದರೊಂದಿಗೆ ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸುತ್ತಾ CBI ಕೋರ್ಟಿನಲ್ಲಿ ಜನಾರ್ದನ ರೆಡ್ಡಿಯನ್ನು 'ಆರ್ಥಿಕ ಭಯೋತ್ಪಾದಕ' ಎಂದು ಬಣ್ಣಿಸಿರುವ CBI ಲಕ್ಷ್ಮಿನಾರಾಯಣ ಅವರ ಕೆಲಸ ಮತ್ತಷ್ಟು ಸಲೀಸಾಗುತ್ತದೆ.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications