ಪಾಣಿಪಟ್ ನಿಂದ ಪದಕದವರೆಗೂ ಗಗನ್ ನಾರಂಗ್
ಶೂಟಿಂಗ್ ಸ್ಪರ್ಧೆಯಲ್ಲಿ ಎಲ್ಲಾ ಬಗೆಯ ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದ ಗಗನ್ ಅವರಿಗೆ ಒಲಿಂಪಿಕ್ಸ್ ಪದಕ ಸಿಕ್ಕಿರುವುದು ಕೀರ್ತಿ ಗರಿಮೆ ಹೆಚ್ಚಿಸಿದೆ. ಗಗನ್ ಬಗ್ಗೆ ಸಂಕ್ಷಿಪ್ತ ಪರಿಚಯ ಇಲ್ಲಿದೆ
1983ರ ಮೇ 6 ರಂದು ಚೆನ್ನೈನಲ್ಲಿ ಜನಿಸಿದ ಗಗನ್ ನಾರಂಗ್ ಅವರ ಮೂಲ ಹರ್ಯಾಣದ ಪಾಣಿಪಟ್. ಗಗನ್ ಅವರ ಅಜ್ಜನ ಕಾಲದಲ್ಲಿ ಪಾಣಿಪಟ್ ನಲ್ಲಿ ಗಗನ್ ಕುಟುಂಬ ನೆಲೆಸಿತ್ತು. ನಂತರ ಹೈದರಾಬಾದಿಗೆ ಶಿಫ್ಟ್ ಆಗಿದೆ.
ಗಗನ್ ನಾರಂಗ್ ಗಳಿಸಿರುವ ಪದಕಗಳ ಪಟ್ಟಿ ಇಂತಿದೆ:
* ಕಂಚು- ಲಂಡನ್ ಒಲಿಂಪಿಕ್ಸ್ 2012- 10 ಮೀ ಏರ್ ರೈಫಲ್ (ವೈಯಕ್ತಿಕ)
* ಚಿನ್ನ- ಮೆಲ್ಬೋರ್ನ್ ಕಾಮನ್ ವೆಲ್ತ್ ಗೇಮ್ಸ್ 2006- 10 ಮೀ ಏರ್ ರೈಫಲ್ (ಟೀಮ್)
* ಚಿನ್ನ- ಮೆಲ್ಬೋರ್ನ್ ಕಾಮನ್ ವೆಲ್ತ್ ಗೇಮ್ಸ್ 2006- 50 ಮೀ ಏರ್ ರೈಫಲ್ (ವೈಯಕ್ತಿಕ)
* ಚಿನ್ನ- ದೆಹಲಿ ಕಾಮನ್ ವೆಲ್ತ್ ಗೇಮ್ಸ್ 2006- 50 ಮೀ ಏರ್ ರೈಫಲ್ (ಟೀಮ್)
* ಚಿನ್ನ- ದೆಹಲಿ ಕಾಮನ್ ವೆಲ್ತ್ ಗೇಮ್ಸ್ 2010- 10 ಮೀ ಏರ್ ರೈಫಲ್ (ವೈಯಕ್ತಿಕ)
* ಚಿನ್ನ- ದೆಹಲಿ ಕಾಮನ್ ವೆಲ್ತ್ ಗೇಮ್ಸ್ 2010- 10 ಮೀ ಏರ್ ರೈಫಲ್ (ಟೀಮ್)
* ಚಿನ್ನ- ದೆಹಲಿ ಕಾಮನ್ ವೆಲ್ತ್ ಗೇಮ್ಸ್ 2006- 50 ಮೀ ಏರ್ ರೈಫಲ್ (ವೈಯಕ್ತಿಕ)
* ಚಿನ್ನ- ದೆಹಲಿ ಕಾಮನ್ ವೆಲ್ತ್ ಗೇಮ್ಸ್ 2006- 50 ಮೀ ಏರ್ ರೈಫಲ್ (ಟೀಮ್)
2008ರ ISSF ವಿಶ್ವಕಪ್ ಫೈನಲ್ ನಲ್ಲಿ ಫೈನಲ್ ಸುತ್ತಿನಲ್ಲಿ ಗಗನ್ ನಾರಂಗ್ 103.5 ಅಂಕಗಳು ಹಾಗೂ ಒಟ್ಟಾರೆ 703.5 ಅಂಕ ಗಳಿಸಿದರು. ನವೆಂಬರ್ 4 ರಂದು ಆಸ್ಟ್ರೀಯಾದ ಥಾಮಸ್ ಫ್ರಾರ್ನಿಕ್ ದಾಖಲೆ ಮುರಿದು ಹೊಸ ವಿಶ್ವ ದಾಖಲೆ ಬರೆದರು.
ವಿವಾದ: 2010ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ತಮ್ಮ ಹೆಸರನ್ನು ಪರಿಗಣಿಸದಿರುವುದಕ್ಕೆ ಅಸಮಾಧಾನಗೊಂಡ ಗಗನ್ ನಾರಂಗ್, ಕಾಮನ್ ವೆಲ್ತ್ ಗೇಮ್ಸ್ ಗೆ ತೆರಳಲಿ ನಿರಾಕರಿಸಿದ್ದರು. ಆದರೆ, ನಂತರ ಗೇಮ್ಸ್ ಗೆ ತೆರಳಿ 2 ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದು ಈಗ ಇತಿಹಾಸ.
ಪ್ರಶಸ್ತಿ, ಪುರಸ್ಕಾರ: ರಾಜೀವ್ ಗಾಂಧಿ ಖೇಲ್ ರತ್ನ, ಪದ್ಮಶ್ರೀ, ಅರ್ಜುನ ಪ್ರಶಸ್ತಿ.
ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವೀರ ಗಗನ್ ನಾರಂಗ್ ಗೆ ಹರ್ಯಾಣ ಸರ್ಕಾರ 1 ಕೋಟಿ ರು ಘೋಷಿಸಿದೆ. ಪದಕ ಗೆದ್ದ ನಂತರ ಮಾತನಾಡಿದ ಗಗನ್, ನನಗೆ ಪದಕ ಗೆಲ್ಲಲು ಅಭಿನವ್ ಅವರ ಆಟ ಸ್ಪೂರ್ತಿ ನೀಡಿತ್ತು ಎನ್ನುವ ಮೂಲಕ ಸಹ ಆಟಗಾರನ ಘನತೆಯನ್ನು ಎತ್ತಿ ಹಿಡಿದಿದ್ದಾರೆ.













Click it and Unblock the Notifications