ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಡೀಲ್: ಕಾರ್ಯಕರ್ತರ ಬಂಧನ ಖಂಡಿಸಿ, ಪ್ರತಿಭಟನೆ

By Mahesh
|
Google Oneindia Kannada News

Mangalore home stay attack
ಮಂಗಳೂರು. ಜು.29: ಮಂಗಳೂರಿನ ಹೊರವಲಯದ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇನಲ್ಲಿ ಶನಿವಾರ(ಜು.28) ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜನಜಾಗರಣ ವೇದಿಕೆಯ ಸುಮಾರು 40 ಕಾರ್ಯಕರ್ತರನ್ನು ಬಂಧಿಸಲಾಗಿದೆ. ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ದಾಳಿ ಪ್ರಮುಖ ರುವಾರಿ ಸತ್ಯಜಿತ್ ಸುರತ್ಕಲ್, ಸುಧೀರ್ ಕಣ್ಣೂರು, ದಿವಾಕರ್ ಪಾಂಡೇಶ್ವರ್ ಹಾಗೂ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಫ್ರಾಂಕ್ಲಿನ್ ಮಾಂಟೆರಿಯೋ ಅವರನ್ನು ಬಂಧಿಸಲಾಗಿದೆ.

ಈ ನಡುವೆ ಮಾರ್ನಿಂಗ್ ಮಿಸ್ಟ್ ಹೋಮ್ ಸ್ಟೇ/ರೆಸಾರ್ಟ್ ನವರು ಯಾವುದೇ ಲೈಸನ್ ಹೊಂದಿಲ್ಲ ಎಂಬ ವಿಷಯವನ್ನು ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಬಹಿರಂಗಪಡಿಸಿದ್ದಾರೆ.

ಕಾರ್ಯಕರ್ತರ ಬಂಧನವನ್ನು ಖಂಡಿಸಿ ನೂರಾರು ಹಿಂದೂ ಜನಜಾಗರಣವೇದಿಕೆ ಸದಸ್ಯರು ಜಿಲ್ಲಾಧಿಕಾರಿ ಚನ್ನಪ್ಪ ಗೌಡ ಅವರ ಕಚೇರಿ ಮುಂದೆ ಭಾನುವಾರ(ಜು.29) ಪ್ರತಿಭಟನೆ ನಡೆಸಿದ್ದಾರೆ.

ಮಾರ್ನಿಂಗ್ ಮಿಸ್ಟ್ ಹೋಂಸ್ಟೇ ಹಲವಾರು ವರ್ಷಗಳಿಂದ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳಿಗೆ ಬಾಡಿಗೆಗೆ ಕೊಡಲಾಗುತ್ತಿತ್ತು. ಶಿಕ್ಷಣಕ್ಕಾಗಿ ದೂರದ ಊರಿನಿಂದ ಬಂದ ವಿದ್ಯಾರ್ಥಿಗಳ ಮೋಜಿ ಮಸ್ತಿಯಿಂದಾಗಿ ಸ್ಥಳೀಯರಲ್ಲಿ ಕಿರಿಕಿರಿ ಉಂಟು ಮಾಡುತ್ತಿದ್ದರು. ವಿಕೇಂಡ್ ಪಾರ್ಟಿಗಳ ಕುರಿತು ಸ್ಥಳೀಯರು ಪೊಲೀಸ್ ಇಲಾಖೆಗೆ ದೂರು ನೀಡಿದ್ದರರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ನಾವು ನಮ್ಮ ಸಂಸ್ಕೃತಿ ರಕ್ಷಣೆಗಾಗಿ ದಾಳಿ ನಡೆಸಬೇಕಾಯಿತು ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಹೇಳಿದ್ದಾರೆ.

ಸಮಾಜದ ಗಣ್ಯ ವ್ಯಕ್ತಿಯೊಬ್ಬರ ಪುತ್ರಿಯರು ಇದ್ದಾರೆ ಎಂಬ ಶಂಕೆ ಇದೆ. ಹೋಂ ಸ್ಟೇನಲ್ಲಿ ಮಜಾ ಉಡಾಯಿಸುತ್ತಿದ್ದ ಯುವಕ, ಯುವತಿಯರ ಬಗ್ಗೆ ಪೂರ್ಣ ಮಾಹಿತಿ ಹೊರ ಹಾಕುವಂತೆ ಪೊಲೀಸರಿಗೆ ಸಂಘಟನೆ ಆಗ್ರಹಿಸಿದೆ.

ಮಾಧ್ಯಮದ ಮೂಲಕ ಈಗಾಗಲೇ ಈ ಘಟನೆಯ ಕುರಿತು ಮಾಹಿತಿ ಲಭ್ಯವಾಗಿದೆ. ಸಂಬಂಧಪಟ್ಟ ಇಲಾಖೆಯಿಂದ ವರದಿ ಕಳುಹಿಸಲು ಸೂಚನೆ ನೀಡಲಾಗಿದೆ. ತಪ್ಪು ಮಾಡಿರುವ ಯಾವುದೇ ವ್ಯಕ್ತಿಯನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ.

ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ನಂತರ ನ್ಯಾಯಾಲಯಕ್ಕೆ ಒಪ್ಪಿಸುತ್ತೇವೆ ಎಂದು ಅಶೋಕ್ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿಎಂ ಶೆಟ್ಟರ್ ಕೂಡ ಘಟನೆ ಕುರಿತು ಬೇಸರ ವ್ಯಕ್ತ ಪಡಿಸಿ, ಈ ಕುರಿತು ಸಮಗ್ರ ತನಿಖೆ ನಡೆಸಲು ಡಿಸಿಎಂ ಅಶೋಕ್ ಅವರಿಗೆ ಸೂಚಿಸಿದ್ದಾರೆ.

English summary
Mangalore Home Stay Attack: Hindu Janajagrana Vedike activists protested outside DC's office following the arrest of HJV activists. Police commissioner Seemanth Kumar Singh said As many as 40 people were arrested, among whom were Satyajit Suratkal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X