ಒಲಿಂಪಿಕ್ಸ್ : ಜು.28ರಂದು ಭಾರತೀಯರ ಸ್ಪರ್ಧೆಗಳು

July 28: Indians in action today in London
ಲಂಡನ್, ಜು. 28 : ಲಂಡನ್ ಒಲಿಂಪಿಕ್ಸ್ 2012 ಎರಡನೇ ದಿನಕ್ಕೆ ಕಾಲಿಟ್ಟಿದೆ. ಭಾರತೀಯರು ಹೇಗೆ ಪ್ರದರ್ಶಿಸುತ್ತಿದ್ದಾರೆ? ಯಾವುದಾದರೂ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರಾ? ಅಮೋಘ ಪ್ರದರ್ಶನ ನೀಡಿ ಚಿನ್ನದ ಪದಕ ಭಾರತಕ್ಕೆ ತಂದು ಇತಿಹಾಸ ನಿರ್ಮಿಸುತ್ತಾರಾ? ಎಂಬಿತ್ಯಾದಿ ಪ್ರಶ್ನೆಗಳು ಭಾರತೀಯರನ್ನು ಸಹಜವಾಗಿ ಕಾಡುತ್ತಿವೆ.

ಎರಡನೇ ದಿನ ಶನಿವಾರ, ಜು.28ರಂದು ಭಾರತೀಯರು ಭಾಗವಹಿಸುತ್ತಿರುವ ವಿವಿಧ ಸ್ಪರ್ಧೆಗಳ ವಿವರಗಳು ಕೆಳಗೆ ನೀಡಲಾಗಿದೆ. ಎಲ್ಲರ ಕಣ್ಣು ಸಹಜವಾಗಿ ಬಾಕ್ಸಿಂಗ್ ಪಟು ವಿಜೇಂದರ್ ಸಿಂಗ್ ಅವರ ಮೇಲೆ ನೆಟ್ಟಿದೆ. ಕಳೆದ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ವಿಜೇಂದರ್ ಕ್ವಾಲಿಫೈ ರೌಂಡಲ್ಲಿ ಮುನ್ನುಗ್ಗಿ ಈ ಬಾರಿ ಬಂಗಾರದ ಪದಕ ಗೆಲ್ಲಲಿ ಎಂಬುದು ಎಲ್ಲರ ಆಶಯ.

ಜು.28, 2012, ಶನಿವಾರ : ಸ್ಪರ್ಧೆ ಪಟ್ಟಿ (ಭಾರತೀಯ ಕಾಲಮಾನ)

ಬಿಲ್ಲುಗಾರಿಕೆ : ಪುರುಷರ ಎಲಿಮಿನೇಷನ್ ರೌಂಡ್ ಮಧ್ಯಾಹ್ನ 1.30ಕ್ಕೆ ; ತರುಣ್‌ದೀಪ್ ರೈ, ರಾಹುಲ್ ಬ್ಯಾನರ್ಜಿ, ಜಯಂತ್ ತಾಲೂಕದಾರ್.

ಬಾಕ್ಸಿಂಗ್ : ಪುರುಷರ ಬಾಂಟಮ್ ವೈಟ್ ಮತ್ತು ಫೆದರ್ ವೈಟ್. ಸಂಜೆ 5.30ರ ನಂತರ. ವಿಜೇಂದರ್ ಸಿಂಗ್ ಮತ್ತು ಶಿವ ಥಾಪಾ.

ಟೆನ್ನಿಸ್ : ಮಹಿಳಾ ಡಬಲ್ಸ್ (ಮೊದಲ ಸುತ್ತು) ರಾತ್ರಿ 9ಕ್ಕೆ. ಸಾನಿಯಾ ಮಿರ್ಜಾ/ರುಶ್ಮಿ ಚಕ್ರವರ್ತಿ Vs ಸು ವೀ ಹೀ/ಚಿಯಾ-ಜುಂಗ್ ಚುವಾಂಟ್.

ಭಾರ ಎತ್ತುವ ಸ್ಪರ್ಧೆ : 48 ಕೆ.ಜಿ. ವಿಭಾಗದಲ್ಲಿ ಸೋನಿಯಾ ಚಾನು. ರಾತ್ರಿ 8ಕ್ಕೆ.

ಶೂಟಿಂಗ್ : 10ಮೀ ಏರ್ ಪಿಸ್ಟಲ್ (ಕ್ವಾಲಿಫಿಕೇಷನ್) ಸಂಜೆ 4.30ಕ್ಕೆ. ಫೈನಲ್ ಸಂಜೆ 8ಕ್ಕೆ. ವಿಜಯ್ ಕುಮಾರ್.

ಬ್ಯಾಡ್ಮಿಂಟನ್ : ಪುರುಷರ ಸಿಂಗಲ್ಸ್ (ಗ್ರೂಪ್ ಹಂತ) ಮಧ್ಯಾಹ್ನ 2ರ ನಂತರ. ಪಿ. ಕಶ್ಯಪ್ Vs ಯುಹಾನ್ ತಾನ್ (ಬೆಲ್ಜಿಯಂ).

ಮಿಕ್ಸ್ಡ್ ಡಬಲ್ಸ್ : (ಗ್ರೂಪ್ ಹಂತ) ಸಂಜೆ 5.30ಕ್ಕೆ. ಜ್ವಾಲಾ ಗುಟ್ಟಾ/ವಿ ಡಿಜು Vs ತೊನ್ವೊಯ್ ಅಹ್ಮದ್/ಲಿಲಿಯಾನಾ ನಾಸಿರ್ (ಇಂಡೋನೇಷ್ಯಾ).

ಮಹಿಳಾ ಡಬಲ್ಸ್ : (ಗ್ರೂಪ್ ಹಂತ) ಸಂಜೆ 8ಕ್ಕೆ. ಜ್ವಾಲ್ ಗುಟ್ಟಾ/ಅಶ್ವಿನಿ ಪೊನ್ನಪ್ಪ Vs ಮಿಜುಕಿ ಫುಜಿ/ರೀಕಾ ಕಕೀವಾ (ಜಪಾನ್).

ಟೇಬಲ್ ಟೆನ್ನಿಸ್ : ಪುರುಷರ ಸಿಂಗಲ್ಸ್ ರಾತ್ರಿ 8.30ಕ್ಕೆ. ಸೌಮ್ಯಜಿತ್ ಘೋಷ್ Vs ಗುಸ್ಟಾವೋ ಸುಬೋಯಿ (ಬ್ರಜಿಲ್).

ಮಹಿಳಾ ಸಿಗಲ್ಸ್ : ಸಂಜೆ 4.30ಕ್ಕೆ. ಅಂಕಿತಾ ದಾಸ್ Vs ಸಾರಾ ರಮಿರೇಜ್ (ಸ್ಪೇನ್).

ದೋಣಿ ಸ್ಪರ್ಧೆ : ಪುರುಷರ ಸಿಂಗಲ್ಸ್ ಸಂಜೆ 5ಕ್ಕೆ. ಸ್ವರಣ್ ಸಿಂಗ್. [ಲಂಡನ್ ಒಲಿಂಪಿಕ್ಸ್ 2012 ವಿಶೇಷ ಪುಟ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+