• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಲಿಂಪಿಕ್ಸ್ ಗ್ರಾಮದಲ್ಲಿ ಸು ಸು ಮಾಡೋಕೆ ಜಾಗವಿಲ್ಲ

By Mahesh
|

ಲಂಡನ್, ಜು.25: ಒಲಿಂಪಿಕ್ಸ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ವಿವಿಧ ದೇಶಗಳ ಕ್ರೀಡಾಪಟುಗಳು ಒಲಿಂಪಿಕ್ಸ್ ಗ್ರಾಮದಲ್ಲಿ ಸೇರುತ್ತಿದ್ದಾರೆ. ಸಮಸ್ಯೆಗಳ ಆಗರವಾಗಿರುವ ಒಲಿಂಪಿಕ್ಸ್ ಗ್ರಾಮದಲ್ಲಿ ಸದ್ಯಕ್ಕೆ ಶೌಚಾಲಯ ಸಮಸ್ಯೆ ಎದುರಾಗಿದೆ. ಕಾಮನ್ ಟಾಯ್ಲೆಟ್ ವ್ಯವಸ್ಥೆ ಇರುವುದರಿಂದ ಕ್ರೀಡಾಳುಗಳಿಗೆ ಸಮಯಕ್ಕೆ ಸರಿಯಾಗಿ ಸುಸು ಮಾಡೋಕೆ ಆಗದೆ ಒದ್ದಾಡುತ್ತಿದ್ದಾರೆ. ಶೌಚಾಲಯ ಸಮಸ್ಯೆ ಜೊತೆಗೆ ಟ್ರಾಫಿಕ್ ಜಾಮ್, ಭದ್ರತಾ ವ್ಯವಸ್ಥೆ ಮುಂತಾದ ಕಾಟಗಳು ಕಾಡುತ್ತಿದೆ.

ಆದರೆ, ಆಯೋಜಕರು ಮಾತ್ರ ವಿಶ್ವದ ಮಹಾನ್ ಕ್ರೀಡಾಕೂಟದ ಒಲಿಂಪಿಕ್ಸ್ ಗ್ರಾಮದಲ್ಲಿ ಎಲ್ಲವೂ ಅಚ್ಚುಕಟ್ಟಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.

ನಾಲ್ಕು ಮಂದಿ ಒಂದು ಶೌಚಾಲಯವನ್ನು ಬಳಸಬೇಕಾಗಿದೆ. ಕೆಲವು ದಿನ ಆರು ಮಂದಿ ಇದನ್ನು ಬಳಸಬೇಕಾಗುತ್ತದೆ ಎಂದು ಭಾರತದ ಕ್ರೀಡಾಪಟುಗಳೊಂದಿಗೆ ತೆರಳಿರುವ ಅಧಿಕಾರಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕ್ರೀಡಾಗ್ರಾಮದಲ್ಲಿ ಸರಿಯಾಗಿ ಶೌಚಾಲಯ ವ್ಯವಸ್ಥೆ ಮಾಡಿಲ್ಲ. ಇಲ್ಲಿನ ವಾತಾವರಣದಿಂದಾಗಿ ಕೆಲ ಅಥ್ಲೆಟಿಕ್ ಗಳು ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗುತ್ತದೆ. ಲಂಡನ್ ನಲ್ಲಿನ ಸ್ಥಿತಿಗೆ ಹೋಲಿಸಿದರೆ ನವದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ವೇಳೆ ಇದ್ದ ಕ್ರೀಡಾಕೂಟದ ಕ್ರೀಡಾಗ್ರಾಮದ ವ್ಯವಸ್ಥೆ ಎಷ್ಟೋ ಒಳ್ಳೆಯದಿತ್ತು ಎಂದು ಭಾರತದ ಬಾಕ್ಸರ್ ಒಬ್ಬರು ಹೇಳಿದ್ದಾರೆ.

ಸ್ಥಳೀಯ ಸಮಯದ ಪ್ರಕಾರ ನಮ್ಮ ಹಾಕಿ ತಂಡದ ಪಂದ್ಯ ಬೆಳಿಗ್ಗೆ 8.30ಕ್ಕೆ ಆರಂಭವಾಗುತ್ತದೆ. ಇದಕ್ಕಾಗಿ ನಾವು ಬೆಳಿಗ್ಗೆ ಐದು ಗಂಟೆಗೆ ಕ್ರೀಡಾಗ್ರಾಮವನ್ನು ಬಿಡಬೇಕಾಗುತ್ತದೆ. ನಿತ್ಯದ ಕೆಲಸಗಳನ್ನು ಮುಗಿಸಿ ಸರಿಯಾದ ಸಮಯಕ್ಕೆ ಅಲ್ಲಿಗೆ ತೆರಳಲು ಹೇಗೆ ಸಾಧ್ಯ ಎಂದು ಆಸ್ಟ್ರೇಲಿಯಾ ಹಾಕಿ ತಂಡದ ಕೋಚ್ ರಿಕ್ ಚಾರ್ಲ್ಸ್ ವರ್ಥ್ ಬೇಸರ ವ್ಯಕ್ತಪಡಿಸಿದ್ದಾರೆ.

ಸಿಬ್ಬಂದಿಗಳಿಗೂ ಸಮಸ್ಯೆ: ದಿನ ಕಳೆದಂತೆ 25 ಜನಕ್ಕೆ ಒಂದು ಟಾಯ್ಲೆಟ್ ಹಾಗೂ 10 ಜನರ ಡೊರ್ಮೆಂಟರಿ ವ್ಯವಸ್ಥೆ ಜಾರಿಗೆ ಬರಲಿದೆ. ಇದಲ್ಲದೆ ಕ್ರೀಡಾಗ್ರಾಮ ಸ್ವಚ್ಛತಾ ಸಿಬ್ಬಂದಿ ಹಾಗೂ ಸಹಾಯಕ ಅಧಿಕಾರಿಗಳು ಸ್ಲಮ್ ಮಾದರಿ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಲಂಡನ್ ಮಾಧ್ಯಮಗಳು ಎಚ್ಚರಿಸಿದೆ.

ಕ್ಯಾಬ್ ಡ್ರೈವರ್ಸ್ ಸಮಸ್ಯೆ: ಸುಮಾರು 25,000 ಕ್ಯಾಬ್ ಡ್ರೈವರ್ ಗಳು ಒಲಿಂಪಿಕ್ಸ್ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ಲಂಡನ್ ನಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿತ್ತು. ಹಲವು ಕಡೆ ಒನ್ ವೇ ಸಂಚಾರ, ಬದಲಿ ಮಾರ್ಗ ಬೋರ್ಡ್ ನೋಡಿ ಕಂಗೆಟ್ಟ ಕ್ಯಾಬ್ ಡ್ರೈವರ್ ಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ಟ್ರಾಫಿಕ್ ಜಾಮ್ ನಿಂದ ಬೇಸತ್ತ ಚಾಲಕನೊಬ್ಬ ಥೇಮ್ಸ್ ನದಿಗೆ ಹಾರಿದ ದುರಂತವೂ ನಡೆದುಬಿಟ್ಟಿದೆ.

ಉಸಿರುಗಟ್ಟಿಸುವ ಭದ್ರತೆ: ಶಂಕಿತ ಉಗ್ರರ ದಾಳಿಯ ಭೀತಿ ಎದುರಿಸುತ್ತಿರುವ ಲಂಡನ್ ಮಹಾನಗರಿಯನ್ನು ಮಿಲಿಟರಿ ಪಡೆಯ ಬೆಂಗಾವಲು ಸುತ್ತುವರೆದಿದೆ.23,700 ಸೆಕ್ಯುರಿಟಿ ಗಾರ್ಡ್ ಗಳು ಕ್ರೀಡಾಂಗಣಗಳನ್ನು ಸುತ್ತುವರೆದಿದ್ದಾರೆ. ಶಸ್ತ್ರಸಜ್ಜಿತ 13,500 ಭದ್ರತಾ ಪಡೆಯನ್ನು ಮೀಸಲಿರಿಸಲಾಗಿದೆ. ವಿಶ್ವದ ದೊಡ್ಡ ಭದ್ರತಾ ಸಂಸ್ಥೆ G4Sಗೆ ಒಲಿಂಪಿಕ್ಸ್ ಭದ್ರತೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಸರ್ಕಾರದ ಜೊತೆ 441.93 ಮಿಲಿಯನ್ ಡಾಲರ್ ಡೀಲ್ ಮಾಡಿಕೊಂಡಿರುವ ಈ ಸಂಸ್ಥೆ 10,400 ಭದ್ರತಾ ಸಿಬ್ಬಂದಿ ಕೊರತೆ ಎದುರಿಸುತ್ತಿದೆ.

ವಿಶೇಷವೆಂದರೆ ಅಫ್ಘಾನಿಸ್ತಾನದಲ್ಲಿ 9,500 ಯೋಧರನ್ನು ಮಾತ್ರ ನಿಯೋಜಿಸಲಾಗಿದ್ದರೆ, ಕ್ರೀಡಾಗ್ರಾಮ ಸುರಕ್ಷತೆಗಾಗಿ 17,000 ಸಿಬ್ಬಂದಿ ಬಳಸಲಾಗಿದೆ. ಮಿಲಿಟರಿ ಪಡೆಯ ಸರ್ಪಗಾವಲಿನಲ್ಲಿ ಕ್ರೀಡೆಯ ಆನಂದ ಸವಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಲಿಂಪಿಕ್ಸ್ ಮೇಲೆ ಸರಿ ಸುಮಾರು 15 ಬಿಲಿಯನ್ ಡಾಲರ್ ಬಂಡವಾಳ ಹೂಡಿರುವ ಬ್ರಿಟಿಷರು ಎಷ್ಟರಮಟ್ಟಿಗೆ ಎಲ್ಲರನ್ನು ತೃಪ್ತಿಪಡಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
London Olympics organisers forcing the athletes to share a toilet among four sports persons, and sometimes even by six athletes, is causing strain and forcing some of them to alter their morning practice schedules. Even cab drivers protest against Olympics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more