ಬೆಂಗಳೂರು ಜನಗಣತಿ: ಎರಡನೇ ಬಾರಿ ಗಣತಿದಾರರ ಕೆಲಸಕ್ಕೆ ಅಡ್ಡಿ, ಪ್ರಕರಣ ದಾಖಲು

ಬೆಂಗಳೂರು; ರಾಜಧಾನಿ ಬೆಂಗಳೂರಿನಾದ್ಯಂತ ರಾಷ್ಟ್ರೀಯ ಜನಗಣತಿ 2027 ನಡೆಯುತ್ತಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಅಧಿಕಾರಿ, ಸಿಬ್ಬಂದಿ ಉರಿಬಿಸಿಲಿನ ನಡುವೆ, ರಜೆಯಲ್ಲೂ ಗಣತಿ ಕಾರ್ಯ ನಡೆಸುತ್ತಿದ್ದಾರೆ. ಹೀಗೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಗಣತಿ ಕೆಲಸಕ್ಕೆ ಅಡ್ಡಿಪಡಿಸಿದ ಎರಡನೇ ಘಟನೆ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದೇ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮಹಿಳಾ ಗಣತಿ ಸಿಬ್ಬಂದಿ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿತ್ತು. ಇದೀಗ ಮತ್ತೊಮ್ಮೆ ಅಂಥದ್ದೆ ಘಟನೆ ನಡೆದಿದೆ. ಜನಗಣತಿ ಉಸ್ತುವಾರಿ ಅಧಿಕಾರಿಯಾದ ಯೋಗೇಶ್ ಓ.ಜಿ ಅವರು ದೂರು ನೀಡಿದ್ದಾರೆ. ಅವರ ಪ್ರಕಾರ, ದಿನಾಂಕ 30.04.2026 ರಂದು ಮಧ್ಯಾಹ್ನ ಸುಮಾರು 4.00 ಗಂಟೆಗೆ ಗಣತಿದಾರರಾದ ರಾಣಿ ಎಂ ಅವರು ಟಿ.ದಾಸರಹಳ್ಳಿ ಪ್ರದೇಶದ ಮಲ್ಲಸಂದ್ರ 7ನೇ ಕ್ರಾಸ್, 1ನೇ ಮೈನ್, ಮನೆ ಸಂಖ್ಯೆ-64 ವಿಳಾಸಕ್ಕೆ ಜನಗಣತಿ ಕಾರ್ಯಕ್ಕಾಗಿ ಭೇಟಿ ನೀಡಿದ್ದರು.

Bengaluru Census

ಆನಂದ್ ವಿರುದ್ಧ ಪ್ರಕರಣ ದಾಖಲು

ಈ ವೇಳೆ ಆನಂದ್ ಬಿನ್ ಮುನಿಯಪ್ಪ ಎಂಬ ವ್ಯಕ್ತಿ ಜನಗಣತಿ ಕಾರ್ಯಕ್ಕೆ ಅಡ್ಡಿಪಡಿಸಿ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಹೀಗಾಗಿ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸದರಿ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಉತ್ತರ ನಗರ ಪಾಲಿಕೆ ಆಯುಕ್ತರು ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜನಗಣತಿ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಿದರು.

ಬೆಂಗಳೂರು ಜನಗಣತಿ: ಮಹಿಳಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕರ್ತವ್ಯಕ್ಕೆ ಅಡ್ಡಿ- ಮುಂದಾಗಿದ್ದೇನು?
ಬೆಂಗಳೂರು ಜನಗಣತಿ: ಮಹಿಳಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕರ್ತವ್ಯಕ್ಕೆ ಅಡ್ಡಿ- ಮುಂದಾಗಿದ್ದೇನು?

ಮೊದಲ ಪ್ರಕರಣ ಆಗಿದ್ದೆಲ್ಲಿ?

ಇದೇ ಪಾಲಿಕೆ ವ್ಯಾಪ್ತಿಯಲ್ಲಿ ಜನಗಣತಿ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ಗಣತಿದಾರರಾದ ಶ್ರೀಮತಿ ವೀಣಾ ಅವರು ಏಪ್ರಿಲ್ 20ರಂದು ಆರ್.ಟಿ.ನಗರದ ಸುಲ್ತಾನಪಾಳ್ಯ ಮುಖ್ಯ ರಸ್ತೆಯ ಸಮೀಪದಲ್ಲಿರುವ ಪೇರಿ ಮೊನಾರ್ಕ್ ಅಪಾರ್ಟ್ಮೆಂಟ್‌ಗೆ ಭೇಟಿ ನೀಡಿದ್ದರು. ಗಣತಿ ಕಾರ್ಯ ಮಾಡುವಾಗ ಇಲ್ಲಿ ನಿವಾಸಿ ಯಾವುದೇ ಮಾಹಿತಿ ನೀಡಲು ನಿರಾಕರಿಸಿದರು. ನಂತರ ಅವಾಚ್ಯ ಶಬ್ದಗಳಿಂದ ವೀಣಾ ಅವರನ್ನು ನಿಂದಿಸಿದ್ದರು.

ಈ ಸಂಬಂಧ ವ್ಯಕ್ತಿ ವಿರುದ್ಧ ಪ್ರಕರಣ (FIR) ದಾಖಲಿಸಲಾಗಿತ್ತು. ಪಿರ್ಯಾದಿನ ಆಧಾರದ ಮೇಲೆ ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಜನಗಣತಿ ಕಾಯ್ದೆ, 1948ರ ಸೆಕ್ಷನ್ 11(1) ಹಾಗೂ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ (BNS) ಕಲಂ 223 ಮತ್ತು 79 ಅಡಿಯಲ್ಲಿ ಡಾ. ಲೋಕೇಶ್, ಜನಗಣತಿ ಚಾರ್ಜ್ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಒಟ್ಟು ಈವರೆಗೆ ಗಣತಿ ಕಾರ್ಯಕ್ಕೆ ಅಡ್ಡಿಪಡಿಸಿದ ಎರಡು ಪ್ರಕರಣಗಳು ವರದಿ ಆಗಿವೆ ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+