ಪ್ರಣಬ್ ಜಯಭೇರಿ, ಭಾರತಕ್ಕೆ ಹೊಸ ರಾಷ್ಟ್ರಪತಿ

Pranab Mukherjee
ನವದೆಹಲಿ, ಜು.22: ದೇಶದ 14ನೇ ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಪ್ರಣಬ್ ಕುಮಾರ್ ಮುಖರ್ಜಿ ಜಯಭೇರಿ ಬಾರಿಸಿದ್ದಾರೆ. ಪ್ರಣಬ್ ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಪಿಎ ಸಂಗ್ಮಾ ಅವರನ್ನು ಭಾರಿ ಅಂತರದಿಂದ ಮತಗಳಿಂದ ಸೋಲಿಸಿದ್ದಾರೆ. ಮತ ಎಣಿಕೆ ಕಾರ್ಯ ಸಂಸತ್ ಭವನದಲ್ಲಿ ಭಾನುವಾರ(ಜು.22) ನಡೆಸಲಾಯಿತು. ಪ್ರಣಬ್ ಮುಖರ್ಜಿ ಅವರು ದೇಶದ 13ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತ ಘೋಷಿಸಬೇಕಿದೆ.

ಜುಲೈ 25.2012ರಂದು ನೂತನ ರಾಷ್ಟ್ರಪತಿಯಾಗಿ ಪ್ರಣಬ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಹಾಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಅಧಿಕಾರ ಅವಧಿ ಜುಲೈ 24ರಂದು ಮುಕ್ತಾಯವಾಗಲಿದೆ.

ಸಮಯ 4.45 ರ ಮತ ಎಣಿಕೆಯಂತೆ ಒಟ್ಟಾರೆ10,98, 882 ಮತಗಳಲ್ಲಿ ಪ್ರಣಬ್ ಅವರಿಗೆ 5,60,464 ಮತಗಳು ಲಭಿಸಿದ್ದರೆ, ಪಿಎ ಸಂಗ್ಮಾ ಅವರಿಗೆ 2,41,200 ಮತಗಳು ಸಿಕ್ಕಿದೆ. ಗೆಲ್ಲಲು ಬೇಕಿದ್ದ 525140 ಮತಗಳ ಗುರಿಯನ್ನು ಪ್ರಣಬ್ ದಾಟಿದ್ದು,

ಜು.19ರಂದು ನಡೆದ ಚುನಾವಣೆಯಲ್ಲಿ ಒಟ್ಟು 748 ಸಂಸದರು ಮತ ಚಲಾಯಿಸಿದ್ದರು. ಈ ಪೈಕಿ ಪ್ರಣಬ್ ಅವರಿಗೆ 527 ಮತಗಳು ಹಾಗೂ ಸಂಗ್ಮಾ ಅವರಿಗೆ 206 ಮತಗಳು ಬಂದಿದೆ.

ಎಲ್ಲ ಸಂಸದರ ಒಟ್ಟು ಮತ ಮೌಲ್ಯ 5,49,408 (776x708). ಹಾಗೆಯೇ, 4120 ಶಾಸಕರ ಒಟ್ಟು ಮತ ಮೌಲ್ಯ 5,49,474. ಪ್ರಣಬ್ ಗಳಿಸಿದ ಮತ ಮೌಲ್ಯ 26936 ಹಾಗೂ ಸಂಗ್ಮಾಗೆ ಸಿಕ್ಕಿದ್ದು 444.

76 ವರ್ಷ ವಯಸ್ಸಿನ ಪ್ರಣಬ್ ಅವರು ದೇಶದ ಪ್ರಥಮ ಪ್ರಜೆ ಪಟ್ಟಕ್ಕೇರಿದ ಪ್ರಪ್ರಥಮ ಬಂಗಾಳಿ ಮೂಲದ ವ್ಯಕ್ತಿ ಎನಿಸಿದ್ದಾರೆ. [ಪ್ರಣಬ್ ಮುಖರ್ಜಿ ಪರಿಚಯ]

ಅಡ್ಡ ಮತದಾನ : ಬಿಜೆಪಿ ಅಧಿಕಾರದಲ್ಲಿರುವ ಕರ್ನಾಟಕದಿಂದ ಪ್ರಣಬ್ ಮುಖರ್ಜಿ ಅವರಿಗೆ ಶೇ 53ರಷ್ಟು ಮತಗಳು ಬಂದಿದೆ. ಕರ್ನಾಟಕ ಅಸೆಂಬ್ಲಿ 224 ಸದಸ್ಯರನ್ನು ಹೊಂದಿದೆ. ಪ್ರಣಬ್ ಮುಖರ್ಜಿ ಅವರಿಗೆ 117 ಮತಗಳು ಹಾಗೂ ಸಂಗ್ಮಾ ಅವರಿಗೆ 103 ಮತಗಳು ಬಂದಿದ್ದರೆ 3 ಮತಗಳು ತಿರಸ್ಕೃತಗೊಂಡಿದೆ. 1 ಸದಸ್ಯರು ಮತದಾನ ಮಾಡಿಲ್ಲ.

ಕರ್ನಾಟಕದಲ್ಲಿ 13 ಮತಗಳು ಅಡ್ಡ ಮತದಾನದಿಂದ ಬಂದಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಣಬ್ ಮುಖರ್ಜಿ ಅವರ ಪರ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+