ಪಾಕ್ ಪೇದೆಯಿಂದ ಜೀನ್ಸ್ ತೊಟ್ಟ ಸೋದರಿಯ ಹತ್ಯೆ

'ಜೀನ್ಸ್ ದಿರಿಸು ಪುರುಷರದ್ದು. ಅದನ್ನು ನೀನು ತೊಡುವಂತಿಲ್ಲ' ಎಂದು ಸಿಟ್ಟಿಗೆದ್ದ ಅಸಾದ್ ಅಲಿ ಎಂಬ ಪೇದೆಯು ಸೋದರಿ ನಜ್ಮಾ ಬೀಬಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಈ ಸೋದರ-ಸೋದರಿಯ ನಡುವೆ ಇದೇ ವಿಷಯವಾಗಿ ಆಗಾಗ್ಗೆ ಜಗಳ ನಡೆಯುತ್ತಲೇ ಇತ್ತು. ಆದರೆ ಅದು ವಿಕೋಪಕ್ಕೆ ತಲುಪಿ, ಶುಕ್ರವಾರ ಅಸಾದ್ ಈ ಕುಕೃತ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಕೆಲವು ದಿನಗಳ ಹಿಂದೆ ಅಸಾದ್, ತನ್ನ ಸೋದರಿಗೆ ಜೀನ್ಸ್ ಬಟ್ಟೆ ಹಾಕಿಕೊಳ್ಳಬೇಡ ಎಂದು ಎಚ್ಚರಿಕೆ ನೀಡಿದ್ದ. ಜೀನ್ಸ್ ಪ್ಯಾಂಟ್ ಹಾಕಿಕೊಳ್ಳುವುದನ್ನು ನಿಲ್ಲಿಸದಿದ್ದರೆ ಸಾಯಿಸಿಬಿಡುವುದಾಗಿ ಗರಂ ಆಗಿಯೇ ಹೇಳಿದ್ದ.
ಅದಾದ ತಕ್ಷಣ ನಜ್ಮಾ ಪೊಲೀಸ್ ಠಾಣೆಗೆ ತೆರಳಿ, ತನ್ನ ಸೋದರ ಅಸಾದ್ ವಿರುದ್ಧ ದೂರು ನೀಡಿದಳು. ಜತೆಗೆ ತನಗೆ ರಕ್ಷಣೆ ನೀಡಿ ಎಂದೂ ಪೊಲೀಸರಿಗೆ ಅಲವತ್ತುಕೊಂಡಳು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಇದಾದ ನಂತರ, ಶುಕ್ರವಾರ ಮನೆಯಿಂದ ಹೊರಹೋಗುತ್ತಿದ್ದ ತನ್ನ ಸೋದರಿಯನ್ನು ಅಸಾದ್ ಹಿಂಬಾಲಿಸಿ ಹೋದ. ಸ್ವಲ್ಪ ದೂರ ಹೋದ ಮೇಲೆ ಏಕಾಂಗಿಯಾಗಿದ್ದ ನಜ್ಮಾ ಬೀಬಿ ಮೇಲೆ ಗುಂಡಿನ ಮಳೆಗೆರೆದ. ಆಕೆ ಸ್ಥಳದಲ್ಲೇ ಅಸುನೀಗಿದಳು. ಘಟನೆಯ ನಂತರ ಅಸಾದ್ ಪರಾರಿಯಾಗಿದ್ದಾನೆ. ಪೊಲೀಸರು ಅಸಾದ್ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.












Click it and Unblock the Notifications