ಬ್ಯಾಟ್ ಮನ್ ಚಿತ್ರಮಂದಿರದಲ್ಲಿ ದಾಳಿ 14 ಸಾವು

Denver: Batman film premiere turns deadly as gunman kills 14
ಡೆನ್ವೆರ್, ಜು.20: ಬ್ಯಾಟ್ಮನ್ ಸರಣಿಯ ಹೊಸ ಚಿತ್ರ 'ದ ಡಾರ್ಕ್ ನೈಟ್ ರೈಸಸ್' ಪ್ರದರ್ಶನದ ವೇಳೆ ಥಿಯೇಟರ್ ಒಳಗೆ ಪ್ರವೇಶಿಸಿದ ಮುಸುಕುಧಾರಿ ವ್ಯಕ್ತಿಯೊಬ್ಬ ಯದ್ವಾತದ್ವಾ ಗುಂಡು ಹಾರಿಸಿದ ಪರಿಣಾಮ 14 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಡೆನ್ವೆರ್ ನಲ್ಲಿರುವ ಔರೊರಾ ಮಾಲ್ ನೊಳಗಿರುವ ಸೆಂಚೂರಿ ಥಿಯೇಟರ್ ನೊಳಗೆ ಸುಲಭವಾಗಿ ಪ್ರವೇಶಿಸಿದ ಮುಸುಕುಧಾರಿ ಇದರ ಬಳಿಕ ಗ್ಯಾಸ್ ಬಾಂಬ್ ಹಾಕಿದ್ದಾನೆ. ನಂತರ ತನ್ನ ರೈಫಲ್ ನಿಂದ ಯರ್ರಾಬಿರ್ರಿಯಾಗಿ ಗುಂಡು ಚಲಾಯಿಸಿದ್ದಾನೆ. ಈ ಘಟನೆಯಲ್ಲಿ 14 ಜನ ಮೃತಪಟ್ಟಿದ್ದಾರೆ. ಅಪರಿಚಿತ ವ್ಯಕ್ತಿಯನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸ್ ವಶದಲ್ಲಿದ್ದರೂ ಆ ವ್ಯಕ್ತಿ ಕೋಪಗೊಂಡು ಅರಚಾಡುತ್ತಿದ್ದ ಎನ್ನಲಾಗಿದೆ.

ಹತ್ತು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ನಾಲ್ಕು ಮಂದಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಸುಮಾರು 50 ಕ್ಕೂ ಅಧಿಕ ಜನರಿಗೆ ಗಾಯಗಳಾಗಿದೆ. ದುಷ್ಕರ್ಮಿ ಬುಲೆಟ್ ಪ್ರೂಫ್ ಜಾಕೆಟ್ ಮತ್ತು ಗ್ಯಾಸ್ ಮಾಸ್ಕ್ ಧರಿಸಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. 20 ಹರೆಯದ ಈ ಯುವಕನಿಂದ ಮೂರು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಸ್ಥಳೀಯ ಕಾಲಮಾನ 6.10 pm ವೇಳೆಗೆ ಮುಸುಕುಧಾರಿ, ಬುಲೆಟ್ ಫ್ರೂವ್ ಜಾಕೆಟ್ ಧರಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ಸೆಂಚುರಿ ಅರೊರಾ 16 ಥೇಟರ್ ಪ್ರವೇಶಿಸಿದ. ಎಲ್ಲರೂ ಬಹುನಿರೀಕ್ಷಿತ ಬ್ಯಾಟ್ ಮನ್ ಸರಣಿಯ ಕೊನೆ ಚಿತ್ರವನ್ನು ನೋಡುತ್ತಿರುವಾಗ ಆತ ಬಾಂಬ್ ರೀತಿ ಒಂದು ವಸ್ತುವನ್ನು ಸ್ಕ್ರೀನ್ ನತ್ತ ಎಸೆದ ನಂತರ ಏಕಾಏಕಿ ಗುಂಡು ಹಾರಿಸತೊಡಗಿದೆ. ನೂಕು ನುಗ್ಗಲು ಉಂಟಾದ ಪರಿಣಾಮ ಅನೇಕ ಜನರಿಗೆ ಗಾಯಗಳಾಗಿದೆ. ಸುಮಾರು 10 ಜನರನ್ನು ಒಮ್ಮೆಗೆ ಕೊಂದಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+