ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Ad ರೇಟ್ ಕುಸಿದರೂ ಗೂಗಲ್ ಆದಾಯ ಭರ್ಜರಿ

By Mahesh
|
Google Oneindia Kannada News

Google Inc's revenue increased
ಬೆಂಗಳೂರು, ಜು.20: ಜಾಹೀರಾತು ದರ ಅಥವಾ ಪ್ರತಿ ಕ್ಲಿಕ್ ನ ದರ (costs per click) ಇಳಿಮುಖವಾಗಿ ನೆಲಕಚ್ಚುತ್ತಿದ್ದರೂ ಗೂಗಲ್ ಸಂಸ್ಥೆ ಇಂಟರ್ ನೆಟ್ ವ್ಯಾಪಾರದಲ್ಲಿ ತನ್ನ ಆದಾಯವನ್ನು ಶೇ 21ರಷ್ಟು ಹೆಚ್ಚಿಸಿಕೊಂಡಿದೆ. ವೆಸ್ ಸರ್ಚ್ ಇಂಜಿನ್ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆದಾರರತ್ತ ಸಂಸ್ಥೆ ಕಣ್ಣು ಹಾಯಿಸುತ್ತಿದೆ.ಈ ನಡುವೆ ಜಾಗತಿಕವಾಗಿ ಶುಕ್ರವಾರ(ಜು.19) ಗೂಗಲ್ ಷೇರುಗಳು ಶೇ 3 ರಷ್ಟು ಏರಿಕೆ ಕಂಡಿದೆ.

ಜಾಹೀರಾತು ದರ ಕುಸಿತಕ್ಕೆ ಮೂಲ ಕಾರಣ ಏನು ಎಂದು ಗೂಗಲ್ ಹುಡುಕಿದಾಗ ಸಿಕ್ಕ ಉತ್ತರ ತುಂಬಾ ಸರಳ, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ಸ್ ಗಳ ಹಾವಳಿ ಡೆಸ್ಕ್ ಟಾಪ್ ಕಂಪ್ಯೂಟರ್ ಗೂಗಲ್ ಸರ್ಚ್ ಗೂ ತಟ್ಟಿದೆ. ಮೊಬೈಲ್ ಫೋನ್ ಹಾಗೂ ಟ್ಯಾಬ್ಲೆಟ್ ಗಳಲ್ಲೂ ಗೂಗಲ್ ಲಭ್ಯವಿದ್ದರೂ ಅಲ್ಲಿ ಇನ್ನೂ costs per click ಗೂಗಲ್ ಆಡ್ ಗಳು ಅಷ್ಟಾಗಿ ಲಭ್ಯವಿಲ್ಲ.

ಕಳೆದ ತ್ರೈಮಾಸಿಕದಲ್ಲಿ 10.96 ಬಿಲಿಯನ್ ಡಾಲರ್ ಆದಾಯ ಗಳಿಸಿರುವುದಾಗಿ ಗೂಗಲ್ ಹೇಳಿಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 9 ಬಿಲಿಯನ್ ಡಾಲರ್ ಹೆಚ್ಚಳ ಕಂಡುಬಂದಿದೆ. ಆದರೆ, ಅನ್ ಲೈನ್ ಸರ್ಚ್ ಜಾಹೀರಾತುಗಳ costs per click ಈ ತ್ರೈಮಾಸಿಕದಲ್ಲೂ ಇಳಿಮುಖವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 16ರಷ್ಟು ಕುಸಿತ ಕಂಡಿದೆ.

ಇತ್ತೀಚೆಗೆ ಹಾರ್ಡ್ ವೇರ್ ಕ್ಷೇತ್ರದ ಮೋಟೊರೊಲಾ ಮೊಬಿಲಿಟಿ ಖರೀದಿಸಿರುವ ಗೂಗಲ್ ತ್ರೈಮಾಸಿಕದಲ್ಲಿ 12.2 ಬಿಲಿಯನ್ ಡಾಲರ್ ಗಳಿಸಿದ್ದರು ಜಾಹೀರಾತು ದರ ಇಳಿಕೆ ಬಗ್ಗೆ ಗೂಗಲ್ ತಲೆ ಕೆಡಿಸಿಕೊಂಡಿದೆ.

ವೆಬ್ ಸರ್ಚ್ ಇಂಜಿನ್ ಕ್ಷೇತ್ರದಲ್ಲಿ ಗೂಗಲ್ ಈಗಲೂ ನಂ,1 ಸ್ಥಾನದಲ್ಲಿದೆ. ಆಪಲ್ ಹಾಗೂ ಸ್ಯಾಮ್ ಸಂಗ್ ಸಂಸ್ಥೆಗಳ ತೀವ್ರ ಪೈಪೋಟಿ ನಡುವೆ ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ಲೆಟ್ ಕ್ಷೇತ್ರಕ್ಕೆ ಗೂಗಲ್ ಇಳಿದಿದೆ.

ಇದು ಒಂದು ಹೆಜ್ಜೆ ಹಿಂದೆ ಇಟ್ಟಂತೆ ಆಗಿರುವುದು ನಿಜವಾದರೂ ಗೂಗಲ್ ಸೇವೆ ಅಬಾಧಿತವಾಗಿರುವುದರಿಂದ cost per click ಮೌಲ್ಯ ಮತ್ತೆ ಚೇತರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಲ್ಯಾರಿ ಪೇಜ್ ಹೇಳಿದ್ದಾರೆ. ಪೇಜ್ ಹಾರೈಕೆಯಂತೆ ಜಾಹೀರಾತು ದರ ಏರಿಕೆಯಾದರೆ ಗೂಗಲ್ ಆಡ್ಸ್ ನಂಬಿಕೊಂಡಿರುವ ಭಾರತ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳ ಸಣ್ಣಪುಟ್ಟ ಕಂಪನಿಗಳು ನೆಮ್ಮದಿಯಿಂದ ಉಸಿರಾಡಬಹುದು.

English summary
Despite of drop in ad rates, Google Incs' revenuew increased 21% in its internet advertising business which hopes investors can uplift the Advertising rates, or costs per click, Shares of Google were up about 3% in after hours trade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X