ಖ್ಯಾತ ನಟಿ ಶೋಭನಾ ಶಿಷ್ಯೆಯರಿಗೆ ಲೈಂಗಿಕ ಕಿರುಕುಳ

Posted By:
Subscribe to Oneindia Kannada
chennai-actress-shobana-disciples-eve-teased
ಚೆನ್ನೈ, ಜುಲೈ 13: ಅಂದಕಾಲತ್ತಿಲ್ ಖ್ಯಾತ ನಟಿ, ನೃತ್ಯಗಾತಿ ಶೋಭನಾ ಅವರ ಶಿಷ್ಯೆಯರ ಮೇಲೆ ಲೈಂಗಿಕ ಕಿರುಕುಳ ನಡೆದಿರುವುದು ವರದಿಯಾಗಿದೆ. ಈ ಬಗ್ಗೆ ಸ್ವತಃ ಶೋಭನಾ ಅವರೇ ನಗರದ ಪೊಲೀಸ್ ಕಮೀಷನರ್ ಅವರಿಗೆ ಗುರುವಾರ ದೂರು ನೀಡಿದ್ದಾರೆ.

ಅಳ್ವಾರ್ ಪೇಟೆಯಲ್ಲಿ ಎಂದಿನಂತೆ ನನ್ನ ನೃತ್ಯ ಶಾಲೆಗೆ ಬಂದಿದ್ದ ಶಿಷ್ಯೆಯರು ಪ್ರಾಕ್ಟೀಸ್ ಮುಗಿಸಿ, ಮನೆಗೆ ತೆರಳುವಾಗ ಕೆಲವು ಸಮಾಜಘಾತುಕ ವ್ಯಕ್ತಿಗಳು ಅವರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಶೋಭನಾ ದೂರು ಸಲ್ಲಿಸಿದ್ದಾರೆ.

ಅಳ್ವಾರ್ ಪೇಟೆಯಲ್ಲಿ ತಳ್ಳು ಗಾಡಿಯ ಚಹಾ ಅಂಗಡಿಯೊಂದು ನಮ್ಮ ನೃತ್ಯ ಶಾಲೆಗೆ ದೊಡ್ಡ ತಲೆನೋವಾಗಿದೆ. ಅಲ್ಲಿಗೆ ಕೆಲವು ಪುಂಡ ಪೋಕರಿಗಳು ದಿನಾ ಬರುತ್ತಿರುತ್ತಾರೆ. ಡ್ಯಾನ್ಸ್ ಕ್ಲಾಸ್ ಗೆ ಬರುವ ಹೆಣ್ಣುಮಕ್ಕಳ ಮೇಲೆ ವಾರೆ ನೋಟ ಬೀರುತ್ತಿರುತ್ತಾರೆ. ಅವರನ್ನು ದಿನಾ ಚುಡಾಯಿಸುತ್ತಾರೆ ಎಂದು ನಟಿ ಶೋಭನಾ ಆರೋಪಿಸಿದ್ದಾರೆ.

ಈ ರೋಡ್ ರೋಮಿಯೋಗಳ ಆಟಾಟೋಪವನ್ನು ಸಾಬೀತುಪಡಿಸಲು ಸಂತ್ರಸ್ತ ಯುವತಿಯೊಬ್ಬರನ್ನು ಪೊಲೀಸ್ ಆಯುಕ್ತರ ಕಚೇರಿಗೆ ಕರೆತಂದಿದ್ದರು.

'ಕೆಲವು ಸಲ ಆ ಪುಂಡರು ನನ್ನ ಶಾಲಾ ಆವರಣದೊಳಕ್ಕೂ ಪ್ರವೇಶಿಸುತ್ತಾರೆ. ಇವರ ಹಾವಳಿ ಮಿತಿಮೀರಿದೆ. ದಯವಿಟ್ಟು ಇವರಿಗೆ ಏನಾದರೂ ಮಾಡಿ' ಎಂದು ಶೋಭನಾ ಅಲವತ್ತುಕೊಂಡಿದ್ದಾರೆ. ಅಂದಹಾಗೆ, ಶೋಭನಾ ಅವರು ಏಕಾಂಗಿ ಜೀವನ ನಡೆಸುತ್ತಿದ್ದಾರೆ.

ದೂರಿಗೆ ಸ್ಪಂದಿಸಿರುವ ಪೊಲೀಸ್ ಆಯುಕ್ತರು ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ನಟಿಗೆ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ ಆ ಚಹಾ ಅಂಗಡಿಯವನ ಮೇಲೂ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Famous danseuse and actress Shobana lodged a complaint with the city police commissioner Thursday about girl students attending her dance classes becoming victims of eve teasing by a gang of anti-social elements in front of the school in Alwarpet in Chennai.
Please Wait while comments are loading...