ಮೂಡಿಗೆರೆಯ ಹೆಮ್ಮೆಯ ಪುತ್ರಿ ಮನೆಯಲ್ಲಿ ಕಳ್ಳತನ

ಎರಡು ಮಹಡಿಯ ಮನೆ ಇದಾಗಿದ್ದು, ಕೆಳಗಿನ ಮನೆಯಲ್ಲಿ ಮೋಟಮ್ಮನವರು ವಾಸವಾಗಿದ್ದರೆ, ಮೇಲಿನ ಮನೆಯನ್ನು ಬಾಡಿಗೆಗೆ ನೀಡಲಾಗಿತ್ತು. ಈ ಎರಡೂ ಮನೆಯಲ್ಲಿ ಯಾರೂ ಇಲ್ಲದಿರುವಾಗ ಈ ಕಳ್ಳತನ ನಡೆದಿದೆ.
ಎಂದಿನಂತೆ ಸೋಮವಾರ ಬೆಳಗ್ಗೆ ಮೋಟಮ್ಮ ಅವರ ಆಪ್ತ ಸಹಾಯಕ ಮನೆಗೆ ಬಂದಾಗ ರಾತ್ರಿ ನಡೆದ ಕಳ್ಳತನ ಬಯಲಾಗಿದೆ. ಮನೆಯ ಬೀಗ ಮುರಿದು ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ. ಮನೆ ಪರಿಶೀಲನೆಯ ಬಳಿಕ ನಗದು ಹಾಗೂ ಸೊತ್ತುಗಳನ್ನು ದೋಚಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications