ಜಗನ್ ಆರೋಪಿಯಲ್ಲ, ಶಂಕಿತ ಅಷ್ಟೇ ಉಲ್ಟಾ ಹೊಡೆದ ಇಡಿ

ಈ ಮಧ್ಯೆ ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡ ತನ್ನ ನಾಲ್ಕನೇ ಚಾರ್ಚ್ ಶೀಟ್ ಅನ್ನು ನ್ಯಾಯಲಯಕ್ಕೆ ಸಲ್ಲಿಸಿದೆ. ಜಗತಿ ಪಬ್ಲಿಕೇಷನ್ ಗೂ ನನಗೂ ಸಂಬಂಧವಿಲ್ಲ ಎಂದು ಜಗನ್ ಹೇಳಿದ್ದರೂ ಅವರನ್ನು ಆರೋಪಿ ನಂ.12 ಎಂದು ಹೆಸರಿಸಿ ಚಾರ್ಚ್ ಶೀಟ್ ಹಾಕಲಾಗಿದೆ. ಈ ಚಾರ್ಚ್ ಶೀಟ್ ಆಧಾರದ ಮೇಲೆ ಇಡಿ ತನ್ನ ತನಿಖೆ ಮುಂದುವರೆಸುವ ಸಾಧ್ಯತೆ ಇದ್ದು, ಜಗನ್ ಹೇಳಿಕೆ ದಾಖಲಿಸಲು ಬಯಸಿದೆ.
ಆದರೆ, ಜಗನ್ ಪರ ವಕೀಲರು ಸಮರ್ಥವಾಗಿ ವಾದ ಮಂಡಿಸಿ ಫೆ.1, 2011ರಲ್ಲೇ ಜಗತಿ ಪಬ್ಲಿಕೇಷನ್ ಗೆ ಜಗನ್ ರಾಜೀನಾಮೆ ನೀಡಿದ್ದಾರೆ. ಸಿಬಿಐ ಆರೋಪ ಪಟ್ಟಿಯಲ್ಲಿ ಆರೋಪಿ 12 ಆಗಿರುವುದಕ್ಕೆ ಸೂಕ್ತ ಸಾಕ್ಷಿ ಇಲ್ಲ. ಈ ದೋಷಾರೋಪಣ ಪಟ್ಟಿ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಇಡಿ ವಿಚಾರಣೆ ನಡೆಸಿದರೆ ಜಗನ್ ಸೂಕ್ತ ಉತ್ತರ ನೀಡಲು ಸಾಧ್ಯವಿಲ್ಲ, ಸದ್ಯ ನಮ್ಮ ಕಕ್ಷಿದಾರ ಚಂಚಲಗುಡ ಜೈಲಿನಲ್ಲಿದ್ದು ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ.
ಸೆಕ್ಷನ್ 50(2) ಪ್ರಕಾರ, ಸಿಬಿಐ ನಿರ್ದೇಶನದಂತೆ ಜಗನ್ ಮೋಹನ್ ರೆಡ್ಡಿಗೆ ಸಮನ್ಸ್ ನೀಡಲಾಗಿದೆ. ನಾವು ಇನ್ನೂ ಜಗನ್ ಅವರನ್ನು ಆರೋಪಿಯಾಗಿ ಪರಿಗಣಿಸಿಲ್ಲ. ಈ ಪ್ರಕರಣ(ಮನಿ ಲಾಂಡ್ರಿಂಗ್, ಅಕ್ರಮ ಹಣ ಸಂಪಾದನೆ) ಹಿಂದಿನ ಸಂಪೂರ್ಣ ವಿವರ ಕಲೆ ಹಾಕಿ, ಸಂಚಿನ ರಹಸ್ಯ ಹೊರಕೆಡವಿದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.
ಸಿಬಿಐ ಮಾಡಿರುವ ಆರೋಪಗಳು: ಸುಮಾರು 850 ಕೋಟಿ ರು ಬಂಡವಾಳ ಹೂಡಿಕೆ ಲೆಕ್ಕ ಇನ್ನೂ ಸಿಕ್ಕಿಲ್ಲ. ಅಲ್ಲದೆ, ಜಗನ್ ಸೃಷ್ಟಿಸಿದ ಬೇನಾಮಿ ಕಂಪನಿಗಳ ಅಸಲಿ ಮೌಲ್ಯ, ಕೂಡಿಟ್ಟ ಹಣ, ಇತರೆ ಬ್ಯಾಂಕ್ ಖಾತೆಗಳಿಗೆ ವರ್ಗವಾದ ಮೊತ್ತದ ಲೆಕ್ಕ ಕೂಡಾ ಸಿಗಬೇಕಿದೆ.
ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಜಗನ್ ಮೋಹನ್ ರೆಡ್ಡಿ ಕೈಗಾರಿಕಾ ವಲಯದಲ್ಲಿ ಅಕ್ರಮ ಎಸೆಗಿ ಗಳಿಸಿದ ಆಸ್ತಿಯ ಬಗ್ಗೆ ಮಾತ್ರ ದಾಖಲೆಗಳನ್ನು ಸಂಗ್ರಹಿಸಿ ಮೂರು ಎಫ್ ಐಆರ್ ದಾಖಲಿಸಲಾಗಿದೆ.
ಇದರಲ್ಲಿ ಜಗತಿ ಪಬ್ಲಿಕೇಷನ್, ಸಾಕ್ಷಿ ಪತ್ರಿಕೆಯನ್ನು ಸೇರಿಸಲಾಗಿದ್ದು, 350ಕ್ಕೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ಜಗನ್ ಅವರ ಆಸ್ತಿ 16,97,335 ಕೋಟಿ ರು ಎಂದು ಟಿಡಿಪಿ ಮಾಡಿರುವ ಆರೋಪದ ಬಗ್ಗೆ ಇನ್ನೂ ಸಿಬಿಐ ಕಣ್ಣಿಟ್ಟಿಲ್ಲ.
ಜಗನ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸಿಬಿಐ ಇದುವರೆಗೆ ಮೂರು ಆರೋಪಪಟ್ಟಿಗಳನ್ನು ದಾಖಲಿಸಿದೆ. ಮೊದಲ ಆರೋಪಪಟ್ಟಿಯಲ್ಲಿ ಜಗನ್ ಮತ್ತಿತರ 11 ಆರೋಪಿಗಳಿಗೆ ಸಿಬಿಐ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ ಉಳಿದೆರಡು ಆರೋಪಪಟ್ಟಿಗಳಲ್ಲಿ ಅವರಿಗೆ ಜಾಮೀನು ದೊರೆತಿಲ್ಲ.
ವಾದ ಆಲಿಸಿದ ಸಿಬಿಐ ವಿಶೇಷ ನ್ಯಾಯಾಲಯ ಜಗನ್ ಮೋಹನ್ ರೆಡ್ಡಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಜಗನ್ ಅವರ ಮೇಲೆ ಐಪಿಸಿ ಸೆಕ್ಷನ್ 120B, 409, 420 ಮತ್ತು 477A ಅನ್ವಯ ಕೇಸು ದಾಖಲಿಸಲಾಗಿದೆ.












Click it and Unblock the Notifications