Get Updates
Get notified of breaking news, exclusive insights, and must-see stories!

ಲಕ್ಷ್ಮಿನಾರಾಯಣ ಫೋನ್ ಟ್ಯಾಪ್: ಕೇಸುಗಳ ಜಡಿಮಳೆ

jagan-sakshi-track-laxminarayana-mobile-cases-filed
ಹೈದರಾಬಾದ್, ಜೂನ್ 27: ಸಿಬಿಐ ಲಕ್ಷ್ಮಿನಾರಾಯಣ ಅವರ ಮೊಬೈಲ್ ಫೋನ್ ಟ್ಯಾಪ್, call details ಬಹಿರಂಗಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಚ್ ರಾಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂ. ಶ್ರೀನಿವಾಸ್ ರಾವ್ ಹಾಗೂ ಜಗನ್ ಮಾಲೀಕತ್ವದ ಸಾಕ್ಷಿ ದಿನಪತ್ರಿಕೆಯ ವರದಿಗಾರನ ವಿರುದ್ಧ ದೊಪದೊಪನೆ ಕೇಸುಗಳ ಜಡಿಮಾಳೆಯಾಗಿದೆ.

ಈಗಾಗಲೇ ಜಡ್ಜ್ ಪಟ್ಟಾಭಿ ಲಂಚ ಪ್ರಕರಣದಲ್ಲಿ ಜನಾರ್ದನ ರೆಡ್ಡಿಯನ್ನು ಇಕ್ಕಳದಲ್ಲಿ ಸಿಲುಕಿಸಿರುವ ಸಿಬಿಐ ಲಕ್ಷ್ಮಿನಾರಾಯಣ ಅವರು ಇದೀಗ YSR Congress ಅಧಿನಾಯಕ ಜಗನ್ ಮೋಹನ್ ರೆಡ್ಡಿ ಅವರನ್ನೂ ಅಡಕತ್ತರಿಗೆ ಸಿಕ್ಕಿಸಲು ಮುಂದಾಗಿದ್ದಾರೆ.

ಸಿಬಿಐ ಲಕ್ಷ್ಮಿನಾರಾಯಣ ಅವರು ತಮ್ಮ ಸಹಪಾಠಿ, IBMನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ವಾಸಿರೆಡ್ಡಿ ಚಂದ್ರಬಾಲಾ ಜತೆ ನಡೆಸಿದ ದೂರವಾಣಿ ಮಾತುಕತೆಯನ್ನು ಬಹಿರಂಗಗೊಳಿಸಿದ ಸೂತ್ರಧಾರ ಇನ್ಸ್‌ಪೆಕ್ಟರ್ ಎಂ. ಶ್ರೀನಿವಾಸ್ ಎನ್ನಲಾಗಿದೆ.

ಹೈದರಾಬಾದಿನ Central Crime Stationನಲ್ಲಿ Indian Telegraphic Act, Information Technology Act ಮತ್ತು IPC ಸೆಕ್ಷನ್ ಗಳಡಿ ಅಪರಾಧ ಪಿತೂರಿ ನಡೆಸಿದ್ದಕ್ಕಾಗಿ ಹತ್ತಾರು ಕೇಸುಗಳು ದಾಖಲಾಗಿವೆ.

ನಾಚ್ ರಾಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಹಾಗೂ ಸಾಕ್ಷಿ ದಿನಪತ್ರಿಕೆಯ ವರದಿಗಾರ ಕೆ ಯಾದಗಿರಿ ರೆಡ್ಡಿಯ ವಿರುದ್ಧ ದಾಖಲಾಗಿರುವ ಈ FIRನಲ್ಲಿ ಜಾಮೀನುರಹಿತ ಅಪರಾಧಗಳನ್ನು ಹೊರಿಸಲಾಗಿದೆ. ಜತೆಗೆ, ಮಹಿಳೆಯೊಬ್ಬರ ಗೌರವಕ್ಕೆ ಚ್ಯುತಿ ತಂದ ಗುರುತರ ಆರೋಪವೂ ದಾಖಲಾಗಿದೆ.

ತನಗೆ ಬೆದರಿಕೆಯ ಕರೆ ಬಂದಿದೆ ಎಂದು ಹೇಳಿ, ವರದಿಗಾರ ಕೆ ಯಾದಗಿರಿ ರೆಡ್ಡಿ ಟೆಕ್ಕಿ ಚಂದ್ರಬಾಲಾ ಅವರ ಮೊಬೈಲ್ ಫೋನ್ ನಂಬರ್ ನೀಡಿದ್ದರು. ಅದರಂತೆ ಸಂಶಯಾಸ್ಪದವಾಗಿ ಕಾರ್ಯಪ್ರವೃತ್ತರಾದ ಇನ್ಸ್‌ಪೆಕ್ಟರ್ ಶ್ರೀನಿ, ಯಾದಗಿರಿಗೆ ಅಷ್ಟೂ call details ನೀಡಿದ್ದರು.

ಕುತೂಹಲದ ಸಂಗತಿಯೆಂದರೆ ಇನ್ಸ್‌ಪೆಕ್ಟರ್ ಶ್ರೀನಿ, ಅಳವಾಲ್ DCP ವೆಂಕಟೇಶ್ವರ ರಾವ್ ಅವರ ಕಂಪ್ಯೂಟರ್ ಬಳಸಿ, ವೆಂಕಟೇಶ್ವರ ಅವರದೇ email ID ಮೂಲಕ ಜೂನ್ 18ರಂದು Airtel ಕಂಪನಿಗೆ ಅರ್ಜಿ ಸಲ್ಲಿಸಿ, ಟೆಕ್ಕಿ ಚಂದ್ರಬಾಲಾ ಅವರ ಮೊಬೈಲ್ call details ಕೇಳಿದ್ದರು. ಇವರೊಬ್ಬರದೇ ಕೇಳಿದರೆ ಅನುಮಾನ ಬರುತ್ತದೆ ಎಂದು ಡಕಾಯಿತಿ ಪ್ರಕರಣವೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದ ಮತ್ತೊಂದಿಷ್ಟು ಅಪರಾಧಿಗಳ ಮೊಬೈಲ್ ನಂಬರ್ ಸಹ ನೀಡಿ ಅದರ call details ಸಹ ಕೇಳಿದ್ದಾರೆ.

ಖುದ್ದು DCP ವೆಂಕಟೇಶ್ವರ ರಾವ್ ಅವರೇ call details ಕೇಳಿದ್ದಾರೆ ಎಂದು ಭಾವಿಸಿದ Airtel ಕಂಪನಿ, ಯಾವುದೇ ಅನುಮಾನಕ್ಕೊಳಗಾಗದೆ ಅಷ್ಟೂ call detailsಅನ್ನು ರವಾನಿಸಿದೆ. ಪುಣ್ಯಾತ್ಮ ಇನ್ಸ್‌ಪೆಕ್ಟರ್ ಶ್ರೀನಿ, ಅದರಲ್ಲಿ ಟೆಕ್ಕಿ ಚಂದ್ರಬಾಲಾ ಅವರ ಮೊಬೈಲ್ call details ಅನ್ನು ಪ್ರತ್ಯೇಕಿಸಿ, ಸಾಕ್ಷಿ ವರದಿಗಾರ ಯಾದಗಿರಿಗೆ ಹಸ್ತಾಂತರಿಸಿದ್ದಾರೆ. ಇದು ನಡೆದ ಕಥೆ. ಮುಂದೆ ಇದೇ call details ಅನ್ನು ಆಧಾರವಾಗಿಸಿಕೊಂಡು ಜೂನ್ 21ರಂದು ಸಾಕ್ಷಿ ನ್ಯೂಸ್ ಚಾನೆಲ್ ಸುದ್ದಿಯನ್ನು ಬಿತ್ತರಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಕೇಸುಗಳ ವಿವರ ಹೀಗಿದೆ: Sections 120B (criminal conspiracy), 166, public servant disobeying the law, intent to cause injury to any person, 499 IPC (defamation), 500 IPC (punishment for defamation), Indian Telegraphic Act, IT Act and the Official Secrets Act. Sections 120B read with 505 (ii), 509 IPC, Sections 66 and 72 of the Information Technology Act 2000, Section 24 of the Indian Telegraph Act 1885 and Section 5 of the Official Secrets Act 1923. ಈ ಮಧ್ಯೆ ಸೈಬರಾಬಾದ್ ಸೈಬರ್ ಕ್ರೈಂ ಪೊಲೀಸರು ಸಹ ಕೇಸು ದಾಖಲಿಸಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+