ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಯಾಹೂ ಸರ್ವರ್ ಡೌನ್ 5698 ಕಂಪನಿಗಳಿಗೆ ನಷ್ಟ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Yahoo
  ಬೆಂಗಳೂರು, ಜೂ.27: ಇಂಟರ್ ನೆಟ್ ದೈತ್ಯ ಯಾಹೂ ಸಂಸ್ಥೆಯ ಜಪಾನ್ ಸರ್ವರ್ ನಲ್ಲಿ ಕಳೆದ ವಾರ ಸಂಭವಿಸಿದ ವೈಫಲ್ಯದಿಂದಾಗಿ ಸುಮಾರು 5,698 ಕಂಪನಿಗಳಿಗೆ ಸೇರಿದ ಅಮೂಲ್ಯ ಡಾಟಾ ನಷ್ಟವಾಗಿದೆ. ಯಾಹೂನ ಬಾಡಿಗೆ ಸರ್ವರ್ ಸೇವೆ ಪಡೆದಿದ್ದ ಈ ಕಂಪನಿಗಳಿಗೆ ಕೋಟಿಗಟ್ಟಲೆ ನಷ್ಟವಾಗಿದೆ. ಇದರಿಂದ ಯಾಹೂ ಸಂಸ್ಥೆ ಈಗ ನಷ್ಟ ಪರಿಹಾರದ ಹಾದಿ ಹುಡುಕತೊಡಗಿದೆ.

  ಒಸಾಕಾದಲ್ಲಿ ಸ್ಥಾಪಿತವಾಗಿರುವ ಸರ್ವರ್ ಡೌನ್ ಆಗಿ ಡಾಟಾ ನಷ್ಟವಾಗಿದ್ದನ್ನು ಯಾಹೂ ಕಂಪೆನಿಯ ಜಪಾನ್ ಘಟಕ ಖಚಿತಪಡಿಸಿದೆ. ಸರ್ವರ್ ನಲ್ಲಿ ತಾಂತ್ರಿಕ ದೋಷವೇ ಇದಕ್ಕೆ ಕಾರಣ ಎನ್ನಲಾಗಿದೆ. ನಷ್ಟವಾದ ಮಾಹಿತಿಯನ್ನು ಪುನರ್ ಸ್ಥಾಪಿಸಲು ಸಾಧ್ಯವಾಗಿಲ್ಲ. ಸೇವೆಯಲ್ಲಿ ವ್ಯತ್ಯಯವಾಗಿದ್ದಕ್ಕೆ ವಿಷಾದಿಸುತ್ತೇವೆ ಎಂದು ಫಸ್ಟ್ ಸರ್ವರ್ ತನ್ನ ವೆಬ್ ಸೈಟಿನಲ್ಲಿ ಹೇಳಿಕೊಂಡಿದೆ.

  ಸರ್ವರ್ ಸಿಸ್ಟಂ ಅನ್ನು ಪುನರ್ ನಿರ್ಮಿಸಲು ಆಗದೆ ಯಾಹೂ ಸಂಸ್ಥೆ ಒದ್ದಾಡಿದೆ. ಈಗ ಕಂಪನಿಗಳ ನಷ್ಟಗಳಿಗೆ ಪರಿಹಾರ ನೀಡುವುದಾಗಿ ಯಾಹೂ ಪ್ರಕಟಿಸಿದೆ. ಕಳೆದ ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಕಂಪನಿಯು ತನ್ನ ಸರ್ವರ್ ಸಿಸ್ಟಂನ ಭದ್ರತಾ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಪ್ರಯತ್ನದಲ್ಲಿದ್ದಾಗ ಈ ವೈಫಲ್ಯ ಉಂಟಾಗಿತ್ತು.

  ಕಂಪ್ಯೂಟರ್ ಪ್ರೋಗ್ರಾಮಿಂಗ್ ಮತ್ತು ಚಾಲನಾ ಪ್ರಕ್ರಿಯೆಗಳಲ್ಲಿ ಉಂಟಾದ ಸಮಸ್ಯೆಗಳಿಂದ ಈ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ಫಸ್ಟ್ ಸರ್ವರ್ ಕಂಪನಿ ತಿಳಿಸಿದೆ.

  ಕಂಪನಿಯು ತನ್ನ ಬ್ಯಾಕಪ್ ಮಾಹಿತಿಗಳನ್ನೂ ಕಳೆದುಕೊಂಡಿದೆ. ತೊಂದರೆಗೆ ಕಾರಣಗಳನ್ನು ಪತ್ತೆ ಮಾಡಲು ವಿವರ ತನಿಖೆ ನಡೆಸುವುದಾಗಿ ಆಂತರಿಕ ವ್ಯವಹಾರಗಳು ಮತ್ತು ಸಂಪರ್ಕ ಸಚಿವಾಲಯ ಹೇಳಿದೆ. 2004ರ ನವೆಂಬರ್ ನಲ್ಲಿ ಜಪಾನ್ ನಲ್ಲಿ ಈ ಕಂಪನಿ ಯಾಹೂನ ಅಂಗ ಸಂಸ್ಥೆಯಾಗಿ ಅಸ್ತಿತ್ವಕ್ಕೆ ಬಂದಿತ್ತು. ಅದು ಸುಮಾರು 50,000ಕ್ಕೂ ಹೆಚ್ಚು ಗ್ರಾಹಕರಿಗೆ ಬಾಡಿಗೆ ಸರ್ವರ್ ಗಳನ್ನು ನೀಡುತ್ತಿದೆ.

  ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಜಪಾನ್, ಟೊಕಿಯೋ ಟೇಬಲ್ ಟೆನ್ನಿಸ್ ಫೆಡೆರೇಷನ್, ಕೊಬಾಯಾಶಿ ಫಾರ್ಮಾಸ್ಯೂಟಿಕಲ್ಸ್ ಹಾಗೂ ನಗಾನೊ ಇಲೆಕ್ಟ್ರಿಕಲ್ ರೈಲ್ವೇ ಸಂಸ್ಥೆಗಳು ತೀವ್ರ ನಷ್ಟ ಅನುಭವಿಸಿದೆ. 2004ರ ನವೆಂಬರ್ ನಲ್ಲಿ ಫಸ್ಟ್ ಸರ್ವರ್ ನ ಶೇ 57.7 ಪಾಲನ್ನು ಯಾಹೂ ಜಪಾನ್ ಖರೀದಿಸಿತ್ತು.

  ಬಾಡಿಗೆ ಹಾಗೂ ಡೊಮೈನ್ ವ್ಯಾಪಾರದಲ್ಲಿ ಈ ಫಸ್ಟ್ ಸರ್ವರ್ ಅನ್ನು ಬಳಸಿಕೊಂಡು ಯಾಹೂ ಉತ್ತಮ ವಹಿವಾಟು ನಡೆಸುತ್ತಿತ್ತು. ಆದರೆ, ಈ ರೀತಿ ಸೇವೆಯಲ್ಲಿ ವ್ಯತ್ಯಯವಾಗಿರುವುದು ಭಾರಿ ಹೊಡೆತ ನೀಡಿದೆ.

  ಸುಮಾರು 50,000ಕ್ಕೂ ಅಧಿಕ ಗ್ರಾಹಕರನ್ನು ಸೆಳೆದಿದ್ದ ಯಾಹೂ ಸಂಸ್ಥೆ, ಈಗ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ. ಮೊಬೈಲ್ ಫೋನ್ ವೆಬ್ ಪುಟಗಳು ಬಂದ್ ಆಗಿದ್ದು, ಗ್ರಾಹಕರು, ಬಳಕೆದಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. (ಪಿಟಿಐ)

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Data belonging to 5,698 companies, including information used for their websites, has disappeared since a system failure last week knocked out a rental server service operated by a Yahoo! Japan Corp. subsidiary, the company said.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more