ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ವೈಗೆ ಜಾಮೀನು:ಅನುಮಾನದ ಮುಳ್ಳು ಸಿಬಿಐನತ್ತ

By ಶಂಭೋ ಶಂಕರ
|
Google Oneindia Kannada News

ಬೆಂಗಳೂರು, ಜೂನ್ 22: ಗಣಿ ಲಂಚ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದನ್ನು ಕೇಳಿದ್ದೇ ತಡ ಜನ ಆಂಧ್ರದ ಕಡೆಯಿಂದ ಆಷಾಢದ ಗಾಳಿ ಜೋರಾಗಿ ಬೀಸಿರಬೇಕು ಎಂದು ಹಲಬುತ್ತಿದ್ದಾರೆ. ಅದರರ್ಥ ಜಡ್ಜ್ ಪಟ್ಟಾಭಿಗಳು ಕರ್ನಾಟಕದಲ್ಲೂ ಇದ್ದಾರೆ ಎಂದು ಪಿಸುಪಿಸು ಮಾತನಾಡುತ್ತಿದ್ದಾರೆ.

ನೋ ಛಾನ್ಸ್: ನ್ಯಾ. ಸುಭಾಷ ಬಿ. ಆದಿ ಅವರ ನ್ಯಾಯಪೀಠ ಸುಮಾರು ಎರಡೂವರೆ ಗಂಟೆಗಳ ಕಾಲ ತೀರ್ಪು ಬರೆಸಿದಾಗಲೇ ಸಿಬಿಐ ಹಣೆಬರಹ ಇಷ್ಟೇ ಎಂಬುದರ ಸ್ಪಷ್ಟ ಸುಳಿವು ಸಿಕ್ಕಿತ್ತು. ಹೌದು ಯಡಿಯೂರಪ್ಪಗೆ ಜಾಮೀನು ನೀಡಿರುವುದರಲ್ಲಿ ಜಡ್ಜ್ ಪಟ್ಟಾಭಿ ಥರ ಇಲ್ಲಿ ಯಾರೂ ಕೆಲಸ ಮಾಡಿಲ್ಲ ಎನ್ನಬಹುದು. ಬದಲಿಗೆ, ಸಿಬಿಐ ಲಕ್ಷಿನಾರಾಯಣ ಮಾದರಿಯವರು ಇಲ್ಲಿ ಕೆಲಸ ಮಾಡಿಲ್ಲ ಎಂದು ಜೋರಾಗಿಯೇ ಹೇಳಬಹುದು.

mining-yeddyurappa-gets-bail-is-it-cbi-failure

ಹೌದು, ಬಿಎಸ್‌ವೈಗೆ ಜಾಮೀನು ದಕ್ಕಿಸಿದ ಪ್ರಕರಣದಲ್ಲಿ ಖಂಡಿತ ಸಿಬಿಐ ವೈಫಲ್ಯ ಎತ್ತಿಕಾಣುತ್ತಿದೆ. ಅದೇ ಸಿಬಿಐ ಲಕ್ಷಿನಾರಾಯಣ differance. ಅಲ್ಲ ಸ್ವಾಮಿ, ಸಿವಿ ನಾಗೇಶ್, ಹಾರ್ನಳ್ಳಿ ಅಂತಹ ಘಟಾನುಘಟಿಗಳ ಎದುರು ಸಿಬಿಐ ವಕೀಲರು ಅಷ್ಟು ಪೇಲವವಾಗಿ ಪ್ರತಿವಾದ ಮಂಡಿಸಿದರೆ ಯಾವ ಜಡ್ಜು ಏನು ತಾನೇ ಮಾಡಲು ಸಾಧ್ಯ?

ಅಸಲಿಗೆ ಸಿಬಿಐ ವಕೀಲರಿಗೆ ಪ್ರತಿವಾದ ಮಂಡಿಸುವ ಉಮೇದಿಯೇ ಇರಲಿಲ್ಲ. ಏಕೆಂದರೆ ಸಿಬಿಐ ತನಿಖಾಧಿಕಾರಿಗಳು ಅಷ್ಟು ನೀರಸವಾಗಿ file put up ಮಾಡಿದ್ದರು. ಖುದ್ದು ಸಿಬಿಐ ವಕೀಲ ಜಾಧವ್ ಗೂ ಗೊತ್ತಿತ್ತು. ಇದು lost battle ಅಂತ.

ಅಲ್ರೀ, ಒಂದು ಸಿಂಪಲ್ ವಿಷ್ಯಾ ಅಂದ್ರೆ. ಸಾಕ್ಷಾತ್ತು ಸುಪ್ರೀಂಕೋರ್ಟೇ ಪ್ರಕರಣದಲ್ಲಿ ಸತ್ವ ಇದೆ ಎಂದು observations ಮಾಡಿ, ತನಿಖೆಗೆ ಆಜ್ಞಾಪಿಸಿರುವಾಗ ಈ ಸಿಬಿಐನವರೇನು ಮಾಡಿದರು ನೋಡಿ. ಸಿಬಿಐನವರು ತಕ್ಷಣ ಮಾಡಬೇಕಾಗಿದ್ದ ಕೆಲಸ ಅಂದರೆ FIR ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಉಹುಃ ಜಡ್ಜ್ ಆದಿ ಅವರೇ (ಬಹುಶಃ ಬೆಳಗಾವಿ ಮೂಲದವರಿರಬೇಕು) ಹೇಳಿದಂತೆ ಒಂದು ತಿಂಗಳು ಕಳೆದರೂ ಸಿಬಿಐ ಆರೋಪಿಗಳನ್ನು ಬಂಧಿಸುವ ಗೊಡವೆಗೇ ಹೋಗಲಿಲ್ಲ.

ಅದೇ ಜನಾರ್ದನ ರೆಡ್ಡಿ ವಿಷಯದಲ್ಲಿ ಸಿಬಿಐ ಲಕ್ಷಿನಾರಾಯಣ ಏನು ಮಾಡಿದರು ಎಂಬುದು ದಟ್ಸ್ ಕನ್ನಡ ಓದುಗರಿಗೆ ಹೆಜ್ಜೆಹೆಜ್ಜೆಗೂ ಗೊತ್ತು. ಏಕೆಂದರೆ ದಟ್ಸ್ ಕನ್ನಡ, ಸಿಬಿಐ ಲಕ್ಷಿನಾರಾಯಣರ ಚಲನವಲನಗಳನ್ನು ಸೆ. 5 ರಿಂದ ಸೂಕ್ಷ್ಮವಾಗಿ ಗಮನಿಸುತ್ತಲೇ ಇದೆ. 'ಏನಾಗ್ಹೋಯ್ತು' ಎಂಬುದು ರೆಡ್ಡಿಯ ಅರಿವಿಗೆ ಬರುವ ವೇಳೆಗೆ ಆತನನ್ನು ಸಿಬಿಐ ಲಕ್ಷಿನಾರಾಯಣರೇ ಹೈದರಾಬಾದಿನ ನಾಂಪಲ್ಲಿ ಕಚೇರಿಗೆ ಕರೆದೊಯ್ದಿದ್ದರು. ಸಿಬಿಐ ಲಕ್ಷಿನಾರಾಯಣ ಪಕಡ್ ಬಂಧಿ ಹಾಗಿತ್ತು!

ಆದರೆ ಬೆಂಗಳೂರು ಸಿಬಿಐ ಅಧಿಕಾರಿಗಳು ಮಾಡಿದ್ದೇನು? ಭಾರಿ ಅಬ್ಬರದೊಂದಿಗೆ ಕೆಲವೇ ದಿನಗಳಲ್ಲಿ FIR ದಾಖಲಿಸುತ್ತಾ, ಸುಪ್ರೀಂ ಗಡುವಿಗೂ (ಆಗಸ್ಟ್ 30) ಮುನ್ನವೇ ಆರೋಪಿಗಳನ್ನು ಕೋರ್ಟ್ ಅಂಗಳದಲ್ಲಿ ಕೆಡುವುತ್ತೇವೆ ಎಂಬ ಭಾವನೆ/ಭರವಸೆ ಮೂಡಿಸಿದರು. ಆ ನಂತರ ಸಣ್ಣದಾಗಿ ಒಂದಷ್ಟು ಕಡೆ ದಾಳಿ ಶಾಸ್ತ್ರ ಮಾಡಿತು. ಆಮೇಲಿನದು ಏನೂ ಇಲ್ಲ. A2, A3 ಗಳನ್ನು ಕಚೇರಿಗೆ ಕರೆಸಿಕೊಂಡು ಒಂದಷ್ಟು ಕುಶಲೋಪರಿಗಳನ್ನು ವಿಚಾರಿಸಿಕೊಂಡರೆ ವಿನಃ ಮತ್ತೇನೂ ಕಡೆದು ಗುಡ್ಡೆ ಹಾಕಲಿಲ್ಲ. 'ಯಡಿಯೂರಪ್ಪನವರ ಪುಣ್ಯವಾ' ಎಂಬಂತೆ ಜಾಮೀನು ಮಂಜೂರು ಮಾಡಲು ನ್ಯಾಯಾಧೀಶ ಆದಿ ಅವರಿಗೆ ಇದೇ ಪ್ರಧಾನವಾಗಿ ಕಂಡಿದ್ದು.

ಮತ್ತೆ ಸಿಬಿಐ ಲಕ್ಷಿನಾರಾಯಣ ಅವರತ್ತ ಕಣ್ಣುಹಾಯಿಸುವುದಾದರೆ ಜಗನ್ ವಿಷಯದಲ್ಲಿ ಅವರು ಮಾಡಿದ್ದೇನು ಗೊತ್ತೆ? A1 ಜಗನ್ ರನ್ನು ಬಂಧಿಸುವ ಗೋಜಿಗೇ ಹೋಗಲಿಲ್ಲ. ಸಾಕ್ಷಾತ್ ಕೋರ್ಟೇ ಕೇಳಿತು. ಯಾವಾಗ A1 ಜಗನ್ ರನ್ನು ಬಂಧಿಸುವುದು ಅಂತ. ಉಹುಃ ಲಕ್ಷಿನಾರಾಯಣಗಾರು ಜಪ್ಪಯ್ಯ ಅನ್ನಲಿಲ್ಲ. ನನಗೊತ್ತು ನನ್ನ A1ನನ್ನು ಬಂಧಿಸುವುದು ಯಾವಾಗ ಅಂತ ಒಳಗೊಳಗೇ ಹೇಳಿಕೊಂಡು, ಒಳಗೊಳಗೇ ಕೆಲಸ ಮಾಡತೊಡಗಿದರು. ತಮ್ಮ A1 ವಿರುದ್ಧ ಕೊನೆಗೆ ಲಕ್ಷಿನಾರಾಯಣ ಪಕಡ್ ಬಂಧಿ ಹೇಗಿತ್ತೆಂದರೆ...ತಾಜಾ ಆಗಿ ಬೆಂಗಳೂರು ಸಿಬಿಐ ಕನಿಷ್ಠ ಅದನ್ನು ನೋಡಿಯಾದರೂ ಗಮನಿಸಬೇಕಿತ್ತು.

A1ನನ್ನು ಮುಟ್ಟದೆಯೇ ಆತನ ಸುತ್ತ ಜೈಲನ್ನು ನಿರ್ಮಿಸಿಬಿಟ್ಟರು ಸಿಬಿಐ ಲಕ್ಷಿನಾರಾಯಣ. ಒಬ್ಬೊಬ್ಬರನ್ನಾಗಿ ಒಳಕ್ಕೆ ಹಾಕಿಕೊಂಡು ರುಬ್ಬತೊಡಗಿದರು. ಅವರಿಂದೆಲ್ಲ ಮಾಹಿತಿಯನ್ನು ಕಕ್ಕಿಸಿದರು. ಮೊದಲು ಒಬ್ಬ ಸಾಯಿರೆಡ್ಡಿಯ ಬಂಧನವಾದಾಗಲೇ ಸಿಬಿಐ ಲಕ್ಷಿನಾರಾಯಣ ತಂತ್ರ ಏನೆಂಬುದು ಅರಿವಿಗೆ ಬರತೊಡಗಿತು. ಇನ್ನಾದರೂ ತನ್ನನ್ನು ಸಿಬಿಐ ಬಂಧಿಸದೇ ಸತಾಯಿಸತೊಡಗಿದಾಗ, ಕೊನೆಗೊಂದು ದಿನ, 'ಸುಮ್ನೆ ಯಾಕೆ ಹೀಗೆ ನಮ್ಮನ್ನು ಗೋಳು ಹೊಯ್ಕೋತೀರಿ? ಅತ್ಲಾಗೆ ಗುಂಡಿಟ್ಟು ಸಾಯಿಸಿಬಿಡಿ' ಎಂದು A1 ಜಗನ್ ಅವರೇ ಪ್ರಲಾಪಿಸುವಂತೆ ಮಾಡಿಬಿಟ್ಟರು.

ಕನಿಷ್ಠ ಬೆಂಗಳೂರು ಸಿಬಿಐ ಅಧಿಕಾರಿಗಳು ರೆಡ್ಡಿಯಂತೆ ಬಂಧಿಸದೆ, ಜಗನ್ ರನ್ನು ಸತಾಯಿಸಿ ಸತಾಯಿಸಿ ಬಂಧಿಸಿದಂತೆ ಮಾಡಬಹುದಿತ್ತು. ಉಹುಃ ಅಂತಹ ಒಂದೇ ಒಂದು ಕಾರ್ಯಾಚರಣೆಗೂ ಮುಂದಾಗಲಿಲ್ಲ. ಯಡಿಯೂರಪ್ಪ ಪ್ರಕರಣದಲ್ಲಿ ಅವರ ಕೆಲವೇ ಆಪ್ತರು, ಅನೇಕ ಅಧಿಕಾರಿಗಳ ಹೆಗಲ ಮೇಲೆ ಸಿಬಿಐ ಕೈಹಾಕಬಹುದಾಗಿತ್ತು. ಆದರೆ ಅವರೇ ಕೈಕಟ್ಟಿಹಾಕಿಕೊಂಡು ಜೋಲಿ ತಪ್ಪಿದರು. ಜಡ್ಜ್ ಆದಿ ಅವರು ಇದನ್ನೇ ಸಿಬಿಐ ಮುಖಕ್ಕೆ ಎತ್ತಿಹಿಡಿದಿರುವುದು.

ಇಲ್ಲಿ ನಮ್ಮ ನಿಮ್ಮಂತಹ ಜನಸಾಮಾನ್ಯರಿಗೆ ಒಂದು ವಿಷಯ ವಿಚಿತ್ರವಾಗಿ ಕಾಣಿಸುತ್ತದೆ. ವ್ಯಕ್ತಿಯೊಬ್ಬ ಅಪರಾಧವೆಸಗುತ್ತಾನೆ ಎಂದಿಟ್ಟುಕೊಳ್ಳಿ. ಆತ ಅಪರಾಧದ ಸಾಕ್ಷ್ಯಗಳನ್ನು ವ್ಯವಸ್ಥಿವಾಗಿ ಮುಚ್ಚಿಡಲು from day 1 ನಿಂದಲೇ ಶಕ್ತಿ ಮೀರಿ ಯತ್ನಿಸುತ್ತಾ ಬರುತ್ತಾನೆ. ಸನ್ಮಾನ್ಯ ಹಿರೇಮಠರು ಪ್ರಕರಣ ದಾಖಲಿಸಿಯೇ ಮೂರು ವರ್ಷವಾಗಿದೆ. ಅದಕ್ಕೂ ಮುನ್ನ ಅಪರಾಧ ಘಟಿಸಿದ್ದು ಯಾವಾಗಲೋ?

ಅಂತಹುದರಲ್ಲಿ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಸನ್ಮಾನ್ಯ ಯಡಿಯೂರಪ್ನೋರಿಗೆ ಸಾಕ್ಷ್ಯಗಳನ್ನೆಲ್ಲ ಮುಚ್ಚಿಡುವುದಕ್ಕೆ ಅಪಾರ ಕಾಲಾವಕಾಶ ಕಲ್ಪಿಸಿದ ಮೇಲೆ ಈಗ ಸಾಕ್ಷ್ಯ ನಾಶ ಮಾಡುತ್ತಾರೆ ಅಂತ ಬೊಬ್ಬಿಟ್ಟರೆ ಯಾವ ಜಡ್ಜ್ ತಾನೇ ಕೇಳುತ್ತಾರೆ? ಮುಂದೆ ನಿಮ್ಮ ಸುಪ್ರೀಂ ಕೋರ್ಟಿಗೇ ಹೋಗಿ, ಆದರೆ ಈ ಹಂತದಲ್ಲಂತೂ ಆರೋಪಿಗಳ ಬಂಧನಕ್ಕೆ ಅವಕಾಶವೇ ಇಲ್ಲವೆಂದು ಜಡ್ಜ್ ಆದಿ ಕಡ್ಡಿಮುರಿದಂತೆ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ?

ಇಲ್ಲಿ ಮತ್ತೊಂದು ಕುತೂಹಲ ವಿಷಯವಿದೆ: ಅಪರಾಧ ಲೋಕದಲ್ಲಿ ಒಂದು ಮಾತಿದೆ - ಅಪರಾಧಿ ಎಷ್ಟೇ ಬುದ್ಧಿವಂತನಾಗಿ ಅಪರಾಧವೆಸಗಿದ್ದರೂ ಒಂದಲ್ಲ ಒಂದು ಸಾಕ್ಷ್ಯ ಬಿಟ್ಟಿರುತ್ತಾನೆ ಎಂದೇ ತನಿಖೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಆದರೆ ನ್ಯಾಯಶಾಸ್ತ್ರದಲ್ಲಿ ... ಆರೋಪಿ (ಅಪರಾಧಿ)ಯೂ ಅಷ್ಟೇ ತನಿಖೆ ಎಷ್ಟೇ ಖಡಕ್ಕಾಗಿದ್ದರೂ ಅದರಿಂದ ತಾನು ಬಚಾವಾಗುವುದಕ್ಕೆ ಅದೇ ನ್ಯಾಯ ವ್ಯವಸ್ಥೆಯಲ್ಲಿ ಒಂದಲ್ಲ ನೂರೆಂಟು ತೂತುಗಳು ಇರುತ್ತವೆ ಎಂಬ ಅಚಲವಾದ ನಂಬಿಕೆಯ ಮೇಲೆಯೇ ಅಪರಾಧಕ್ಕೆ ಇಳಿಯುತ್ತಾನೆ. ನ್ಯಾಯದೇವರುಗಳೂ ಅದನ್ನೇ ಹೇಳುವುದು - ನಿರಪರಾಧಿಗೆ ಅನ್ಯಾಯವಾಗಬಾರದು ಎನ್ನುವುದು.

ಸೋ, ಇಲ್ಲೂ ಅಷ್ಟೇ! both ಜಡ್ಜ್ ಆದಿ ಅಂಡ್ ಯಡಿಯೂರಪ್ಪ ಅವರ ಘಟಾನುಘಟಿ ವಕೀಲರುಗಳು ಸಿಬಿಐ ಲೋಪಗಳನ್ನು ದುರ್ಬೀನು ಹಾಕಿಕೊಂಡು ಹುಡುಕಿ, ಯಡಿಯೂಪ್ಪನವರಿಗೆ ತಾತ್ಕಾಲಿಕ ರಿಲೀಫ್ ದಕ್ಕಿಸಿದ್ದಾರೆ. ಆದರೆ ಜನ ಆತಂಕಪಡುತ್ತಿರುವುದು ಇದಕ್ಕಲ್ಲ. ಸಿಬಿಐನ ಈಗಿನ ಗತಿಯನ್ನು ನೋಡಿದರೆ ಮುಂದೇಯೂ ಪ್ರಕರಣ ಹೀಗೇ ಹಳ್ಳ ಹಿಡಿಯುತ್ತದಾ, ಅಂತ!?
ಗಮನಿಸಿ: ಇಲ್ಲಿ ಉದ್ದೇಶಪೂರ್ವಕವಾಗಿ, ಪ್ರಕರಣದ merits ಆನ್ನು ಪರಿಗಣಿಸುತ್ತಾ ಸಿಬಿಐನ ದೆಹಲಿ ರಾಜಕೀಯವನ್ನು ಅವಗಣನೆ ಮಾಡಲಾಗಿದೆ.

English summary
Mining kickback Case - Karnataka High Court by Justice Subhash Adi grants bail to BS Yeddyurappa. But according to law experts it is the failure of CBI that lead to BSY bail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X